- Thursday
- November 21st, 2024
ಮಾಗಣೆ ಕ್ಷೇತ್ರವಾದ ಪೆರುವಾಜೆ ಶ್ರೀ ಜಲದುರ್ಗಾದೇವಿಗೆ ನೂತನ ರಥ ನಿರ್ಮಾಣವಾಗಲಿದ್ದು ಈ ಹಿನ್ನೆಲೆಯಲ್ಲಿ ರಥ ನಿರ್ಮಾಣ ಕಾರ್ಯಕ್ಕೆ ಕಾಷ್ಟ ಶಿಲ್ಪಿಗೆ ವೀಳ್ಯ ಮುಹೂರ್ತವು ಜೂ.05 ಸೋಮವಾರದಂದು ಬೆಳಗ್ಗೆ ಗಂಟೆ 9.30ಕ್ಕೆ ನಡೆಯಲಿದೆ. ರಥ ನಿರ್ಮಾಣದ ಬಗ್ಗೆ ದೇವಸ್ಥಾನದಲ್ಲಿ ಊರ ಭಕ್ತಾದಿಗಳ ಪೂರ್ವಭಾವಿ ಸಭೆಯು ಇತ್ತೀಚೆಗೆ ನಡೆದಿತ್ತು. ಮಾ.23 ರಂದು ಪನ್ನೆಯಲ್ಲಿ ರಥ ನಿರ್ಮಾಣಕ್ಕೆ ದಾನವಾಗಿ ನೀಡಿದ...
ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಸುಳ್ಯ ತಾಲೂಕು ಹಾಗೂ ಸರಕಾರಿ ಪ್ರಥಮ ದರ್ಜೆ ಕಾಲೇಜು ಕೊಡಿಯಾಲಬೈಲು ಸುಳ್ಯ ಇವುಗಳ ಆಶ್ರಯದಲ್ಲಿ ಜೂ.14 ರಂದು ಅಪರಾಹ್ನ 2:00 ರಿಂದ ಸರಕಾರಿ ಪ್ರಥಮ ದರ್ಜೆ ಕಾಲೇಜು ಕೊಡಿಯಾಲಬೈಲು ಸುಳ್ಯ ಇಲ್ಲಿ ವಿಶ್ವ ರಕ್ತದಾನಿಗಳ ದಿನಾಚರಣೆ ಹಾಗೂ ರಕ್ತದಾನ, ಸಮಾಜಸೇವಾ ಕಾರ್ಯದಲ್ಲಿ ತೊಡಗಿಸಿಕೊಂಡಿರುವ ಸಂಘಟನೆಗಳಿಗೆ ಸನ್ಮಾನ ಹಾಗೂ ನೂತನ ಶಾಸಕರಿಗೆ...
ಸುಳ್ಯದ ಜೂನಿಯರ್ ಕಾಲೇಜು ಬಳಿಯ ಕಸಬಾಮೂಲೆ ಶ್ರೀ ಸಂಚಾರಿ ಗುಳಿಗ ಕ್ಷೇತ್ರದ ಪ್ರತಿಷ್ಠಾ ಮಹೋತ್ಸವ ಜೂ.10 ರಿಂದ ಆರಂಭಗೊಂಡು ಜೂ.12 ರವರೆಗೆ ನಡೆಯಲಿದೆ ಎಂದು ಕಸಬಾಮೂಲೆ ಸಾರ್ವಜನಿಕ ಶ್ರೀ ಸಂಚಾರಿ ಗುಳಿಗ ಸೇವಾ ಟ್ರಸ್ಟ್‌ನ ಕಾರ್ಯದರ್ಶಿ ಮುರಳಿ ಮಾವಂಜಿ ತಿಳಿಸಿದ್ದಾರೆ. ಸುಳ್ಯ ಪ್ರೆಸ್ ಕ್ಲಬ್‌ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಪೆರಾಜೆಯ ಬ್ರಹ್ಮಶ್ರೀ ವೇದವ್ಯಾಸ ತಂತ್ರಿಗಳ ನೇತೃತ್ವದಲ್ಲಿ...
ಸುಳ್ಯ ಜಿಲ್ಲಾ ಪಂಚಾಯತ್ ಇಂಜಿನಿಯರಿಂಗ್ ಉಪವಿಭಾಗದ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಆಗಿ ಭರತ್ ಬಿ.ಎಂ. ರವರು ಪ್ರಭಾರ ವಹಿಸಿಕೊಂಡಿದ್ದಾರೆ.ಪುತ್ತೂರು ಜಿ.ಪಂ. ಉಪವಿಭಾಗದ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಆಗಿರುವ ಭರತ್ ಬಿ.ಎಂ.ರವರು ೨೦೧೬ರಲ್ಲಿ ಎ.ಇ. ಆಗಿ ಸರಕಾರಿ ಹುದ್ದೆಗೆ ನೇಮಕಗೊಂಡು ಚಿಕ್ಕಮಗಳೂರು ಕಡೂರು ತಾಲೂಕಿನಲ್ಲಿ ಸೇವೆ ಆರಂಭಿಸಿದರು. ೨೦೨೦ರಲ್ಲಿ ಎ.ಇ.ಇ. ಆಗಿ ಪದೋನ್ನತಿಗೊಂಡು ಪುತ್ತೂರು ಜಿ.ಪಂ. ಉಪವಿಭಾಗಕ್ಕೆ...
ಸುಳ್ಯ ಕೆ.ಎಸ್.ರ್.ಟಿ.ಸಿ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರು ಕುಳಿತುಕೊಳ್ಳುವ ಆಸನಗಳ ಕೊರತೆ ಎದ್ದು ಕಾಣುತ್ತದೆ. ಕಳೆದ ಹಲವಾರು ತಿಂಗಳುಗಳಿಂದ ಪ್ರಯಾಣಿಕರು ಕುಳಿತುಕೊಳ್ಳವ ಆಸನಗಳ ಸಂಖ್ಯೆ ಕಡಿಮೆಯಾಗುತ್ತಾ ಬಂದಿದ್ದು, ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿದ್ದು, ತಮ್ಮ ಬಳಿ ಇರುವ ಲಗೇಜು ಮತ್ತು ಸಣ್ಣ ಪುಟ್ಟ ಮಕ್ಕಳನ್ನು ಗಂಟೆ ಗಟ್ಟಲೆ ನಿಲ್ಲಿಸಿ ಬಸ್ಸನ್ನು ಕಾಯುವ ಪರಿಸ್ಥಿತಿ ನಿರ್ಮಾಣವಾಗಿದೆ ಮಾತ್ರವಲ್ಲದೆ ಶಾಲಾ, ಕಾಲೇಜು...
ಸುಳ್ಯ ಸರಕಾರಿ ಪದವಿ ಪೂರ್ವ ಕಾಲೇಜಿಗೆ ಶಾಸಕಿ ಭಾಗೀರಥಿ ಮುರುಳ್ಯ ರವರು ಭೇಟಿ ನೀಡಿದರು. ಸುಳ್ಯ ತಾಲೂಕಿನಲ್ಲಿ ಅತಿ ಹೆಚ್ಚು ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿರುವ ಸರಕಾರಿ ಪದವಿ ಪೂರ್ವ ಕಾಲೇಜಿಗೆ ಶಾಸಕರಾದ ಭಾಗೀರಥಿ ಮುರುಳ್ಯ ರವರು ಭೇಟಿ ನೀಡಿದರು. ಈ ಸಂದರ್ಭದಲ್ಲಿ ಶಾಲೆಯ ಆರೋಗ್ಯ ಕೊಠಡಿ, ಪ್ರಾಂಶುಪಾಲರ ನೂತನ ಕೊಠಡಿ, ಐಟಿ ಮತ್ತು ಕಂಪ್ಯೂಟರ್ ಕೊಠಡಿ,...
ಅಚ್ರಪ್ಪಾಡಿ ಸ. ಕಿ. ಪ್ರಾ. ಶಾಲೆ ಮೇ.31ರಂದು ಶಾಲಾ ಪ್ರಾರಂಭೋತ್ಸವ ಕಾರ್ಯಕ್ರಮವನ್ನು ವಸಂತ ಬೊಳ್ಳಾಜೆ ಶಾಲಾ ಹಿತರಕ್ಷಣಾ ಸಮಿತಿಯ ಅಧ್ಯಕ್ಷರು ಇವರ ಅಧ್ಯಕ್ಷತೆಯಲ್ಲಿ ಶಾಲಾ ವಿದ್ಯಾರ್ಥಿಗಳನ್ನು ಆರತಿ ಮಾಡಿ, ಹೂ ನೀಡುವುದರ ಮೂಲಕ ಪ್ರೀತಿಯಿಂದ ಶಾಲೆಗೆ ಶಾಲಾ ಪೋಷಕರು ಬರಮಾಡಿಕೊಂಡರು. ತದನಂತರ ಶಾಲಾ ಹಿತರಕ್ಷಣಾ ಸಮಿತಿಯ ಅಧ್ಯಕ್ಷರು ಶ್ರೀಯುತ ವಸಂತ ಬೊಳ್ಳಾಜೆ ದೀಪ ಬೆಳಗಿ ಕಾರ್ಯಕ್ರಮ...
ಎಲಿಮಲೆ ಸರಕಾರಿ ಪ್ರೌಢ ಶಾಲೆ ಶಾಲಾ ಪ್ರಾರಂಭೋತ್ಸವವು ಮೇ. 31ರಂದು ನಡೆಯಿತು. ಶಾಲೆಯನ್ನು ತಳಿರು, ತೋರಣ ,ರಂಗೋಲಿಗಳಿಂದ ಶೃಂಗರಿಸಿ, ಶಾಲಾ ವಿದ್ಯಾರ್ಥಿಗಳನ್ನು ಬ್ಯಾಂಡ್ ವಾದ್ಯದೊಂದಿಗೆ ಮೆರವಣಿಗೆಯಲ್ಲಿ ಕರೆತರಲಾಯಿತು. ಶಾಲಾ ಎಸ್.ಡಿ.ಎಂ.ಸಿ. ಯವರು ಮತ್ತು ಶಿಕ್ಷಕರು ವಿದ್ಯಾರ್ಥಿಗಳನ್ನು ಆತ್ಮೀಯವಾಗಿ ಸ್ವಾಗತಿಸಿ ಬರಮಾಡಿಕೊಂಡರು. ಬಳಿಕ ಶಾಲಾ ಸಭಾಂಗಣದಲ್ಲಿ ನಡೆದ ಶಾಲಾ ಪ್ರಾರಂಭೋತ್ಸವದಲ್ಲಿ ಮಾತನಾಡಿದ ಎಸ್. ಡಿ.ಎಂ.ಸಿ. ಕಾರ್ಯಾಧ್ಯಕ್ಷರಾದ ಶ್ರೀಯುತ...
ಗ್ರಾಮ ಪಂಚಾಯತ್ ದೇವಚಳ್ಳ, ಚಿರಾಯು ಆರ್ಟ್ಸ್ & ಸ್ಪೋರ್ಟ್ಸ್ ಕ್ಲಬ್ ಮಾವಿನಕಟ್ಟೆ ಹಾಗೂ ರೋಟರಿ ಬ್ಲಡ್ ಬ್ಯಾಂಕ್ ಪುತ್ತೂರು ಇವರ ಸಹಯೋಗದಲ್ಲಿ ಬೃಹತ್ ರಕ್ತದಾನ ಶಿಬಿರ ಮತ್ತು ಉಚಿತ ಆರೋಗ್ಯ ತಪಾಸಣೆ ಜೂನ್ 4 ರಂದು ದೇವಚಳ್ಳ ಗ್ರಾಮ ಪಂಚಾಯತ್ ವಠಾರದಲ್ಲಿ ನಡೆಯಲಿದೆ. ಕಾರ್ಯಕ್ರಮದ ಉದ್ಘಾಟನೆಯನ್ನು ಶಾಸಕರಾದ ಕು.ಭಾಗೀರಥಿ ಮುರುಳ್ಯ ನೆರವೇರಿಸಲಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಗ್ರಾ.ಪಂ.ಸದಸ್ಯ...
Loading posts...
All posts loaded
No more posts