- Sunday
- April 20th, 2025

ಪೂರ್ಣಗೊಂಡ ಮಲೆಯಾಳ-ಐನೆಕಿದು-ಹರಿಹರ ಪಲ್ಲತ್ತಡ್ಕ ಸಂಪರ್ಕ ರಸ್ತೆ ಡಾಮರೀಕರಣ ರಸ್ತೆ ಉದ್ಘಾಟಿಸಿದ ಮಾಜಿ ಸಚಿವ ಎಸ್.ಅಂಗಾರ
ಮಲೆಯಾಳ-ಐನೆಕಿದು-ಹರಿಹರ ಪಲ್ಲತ್ತಡ್ಕ ಸಂಪರ್ಕ ರಸ್ತೆ ಡಾಮರೀಕರಣ ಪೂರ್ಣಗೊಂಡಿದ್ದು, ಜೂ.15 ರಂದು ಉದ್ಘಾಟನೆಗೊಂಡಿತು. ಮಾಜಿ ಸಚಿವರಾದ ಎಸ್.ಅಂಗಾರ ಉದ್ಘಾಟಿಸಿದರು.ಈ ಸಂದರ್ಭದಲ್ಲಿ ಸುಳ್ಯದ ಶಾಸಕರಾದ ಭಾಗೀರಥಿ ಮುರುಳ್ಯ, ಸುಬ್ರಹ್ಮಣ್ಯ ಗ್ರಾಮ ಪಂಚಾಯತ್ ಅಧ್ಯಕ್ಷೆ ಲಲಿತಾ ಗುಂಡಡ್ಕ, ಹರೀಶ್ ಕಂಜಿಪಿಲಿ, ವೆಂಕಟ್ ದಂಬೆಕೋಡಿ, ವೆಂಕಟ್ ವಳಲಂಬೆ, ಕಿಶೋರ್ ಕುಮಾರ್ ಕೂಜುಗೋಡು, ಶಿವಪ್ರಸಾದ್ ನಡುತೋಟ, ಜಯಪ್ರಕಾಶ್ ಕೂಜುಗೋಡು, ಚಂದ್ರಹಾಸ ಶಿವಾಲ, ಹಿಮ್ಮತ್.ಕೆ.ಸಿ,...

ದ.ಕ.ಜಿಲ್ಲಾಧಿಕಾರಿ ರವಿ ಕುಮಾರ್ ಅವರನ್ನು ವರ್ಗಾವಣೆಗೊಳಿಸಿ ರಾಜ್ಯ ಸರಕಾರ ಜೂ. 16ರಂದು ಆದೇಶ ಹೊರಡಿಸಿದೆ. ನೂತನ ಜಿಲ್ಲಾಧಿಕಾರಿಯಾಗಿ ಸ್ಮಾರ್ಟ್ ಗವರ್ನೆನ್ಸ್ ಬೆಂಗಳೂರು ಇದರ ಕಾರ್ಯನಿರ್ವಾಹಕ ನಿರ್ದೇಶಕ ಮುಲೈ ಮುಹಿಲನ್ ಎಂ.ಪಿ. ನೇಮಕಗೊಂಡಿದ್ದಾರೆ. ಜಿಲ್ಲಾ ಪಂಚಾಯತ್ ಕಾರ್ಯನಿರ್ವಾಹಣಾಧಿಕಾರಿಯಾಗಿದ್ದ ಡಾ. ಕುಮಾರ ಅವರು ಮಂಡ್ಯ ಜಿಲ್ಲಾಧಿಕಾರಿಯಾಗಿ ನೇಮಕಗೊಳಿಸಲಾಗಿದೆ. ಮುಲ್ಲೈ ಮುಹಿಲನ್ ತಮಿಳುನಾಡು ಮೂಲದವರಾಗಿದ್ದು, ದಿಂಡಿಗಲ್ ಅಣ್ಣಾ ವಿಶ್ವವಿದ್ಯಾಲಯದ ಪಿಎಸ್‌ಎನ್‌ಎ...

ಕರ್ನಾಟಕ ರಾಜ್ಯ ಸರ್ಕಾರ ಘೋಷಿಸಿದ ಗೃಹಲಕ್ಷ್ಮಿ, ಶಕ್ತಿ, ಗ್ರಹ ಜ್ಯೋತಿ, ಯುವ ನಿಧಿ ಯೋಜನೆಯ ಉಚಿತ ಮಾಹಿತಿ ಮತ್ತು ನೊಂದಾವಣೆ ಕೇಂದ್ರದ ಉದ್ಘಾಟನೆಯನ್ನು ಸುಳ್ಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಿ.ಸಿ. ಜಯರಾಮ್ ನೆರವೇರಿಸಿ, ಶುಭಹಾರೈಸಿದರು. ವೇದಿಕೆಯಲ್ಲಿ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಜಯಪ್ರಕಾಶ್ ರೈ , ಕೆಪಿಸಿಸಿ ಮಾಜಿ ಕಾರ್ಯದರ್ಶಿ, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯೆ ರಾಜೀವಿ...

ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ 9 ವರ್ಷಗಳನ್ನು ಪೂರೈಸಿದ ಹಿನ್ನೆಲೆಯಲ್ಲಿ ಸುಳ್ಯ ಮಂಡಲ ಮಟ್ಟದ ಹಿರಿಯ ಕಾರ್ಯಕರ್ತರೊಡನೆ ಸಂವಾದ ಕಾರ್ಯಕ್ರಮ ಇಂದು ಪೆರುವಾಜೆ ಜೆ ಡಿ ಆಡಿಟೋರಿಯಂ ನಲ್ಲಿ ನಡೆಯಿತು. ಈ ಸಂವಾದ ಕಾರ್ಯಕ್ರಮವನ್ನು ರಾಜ್ಯ ಬಿಜೆಪಿ ವಕ್ತಾರ,ವಿಧಾನ ಪರಿಷತ್ ನ ಮಾಜಿ ಸದಸ್ಯರಾದ ಸನ್ಮಾನ್ಯ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ರವರು ನೆರವೇರಿಸಿದರು. ಈ...

ಭಾರತೀಯ ಜನತಾ ಪಾರ್ಟಿ ಸುಳ್ಯ ಮಂಡಲದ ವತಿಯಿಂದ ವಿಶೇಷ ಕಾರ್ಯಕಾರಣಿ ಸಭೆಯು ಪೆರುವಾಜೆಯ ಜೆ.ಡಿ ಆಡಿಟೋರಿಯಂನಲ್ಲಿ ಇಂದು ನಡೆಯಿತು.ಶಾಸಕರಾದ ಭಾಗೀರಥಿ ಮುರುಳ್ಯ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಉದ್ಘಾಟನಾ ಮಾತುಗಳನ್ನು ಆಡಿದ ನೂತನ ಶಾಸಕರುನಾನು ಇವತ್ತು ದೀಪವನ್ನು ಬೆಳಗಿಸಿ ಉದ್ಘಾಟನೆ ಮಾಡಲು ಅವಕಾಶ ಮಾಡಿಕೊಟ್ಟ ಎಲ್ಲಾ ಕಾರ್ಯಕರ್ತರಿಗೆ ತನ್ನ ವೈಯಕ್ತಿಕ ನೆಲೆಯ ಧನ್ಯವಾದಗಳನ್ನು ಅರ್ಪಿಸಿದರು. ಇವತ್ತು ಪಕ್ಷ ದೊಡ್ಡ...

ಎಲಿಮಲೆ ಜ್ಞಾನದೀಪ ವಿದ್ಯಾಸಂಸ್ಥೆಯಲ್ಲಿ 2023 - 24 ನೇ ಶೈಕ್ಷಣಿಕ ಸಾಲಿನ ಶಿಕ್ಷಕ ರಕ್ಷಕ ಸಂಘವನ್ನು ರಚಿಸಲಾಯಿತು.ಅಧ್ಯಕ್ಷರಾಗಿ ಇಂದಿರೇಶ್ ಗುಡ್ಡೆ, ಉಪಾಧ್ಯಕ್ಷರಾಗಿ ಸವಿತಾ, ಕಾರ್ಯದರ್ಶಿಯಾಗಿ ಭಾರತಿ ಸಿ., ಜತೆ ಕಾರ್ಯದರ್ಶಿಯಾಗಿ ಪದ್ಮನಾಭ ಮೀನಾಜೆ, ಖಜಾಂಚಿಯಾಗಿ ಭಾನು ಮಡಪ್ಪಾಡಿ ಆಯ್ಕೆಗೊಂಡರು. ಸದಸ್ಯರುಗಳಾಗಿ ವಿನಯ ಆಚಾರ್, ಗುರುಮೂರ್ತಿ, ಪ್ರತಿಭಾ ದುರ್ಗಾಕುಮಾರ್, ಗಿರೀಶ್ ಕಾಯರ, ಚೈತ್ರ, ರೂಪ, ನವೀನ್ ಕಾಯರ,...

ಸುಳ್ಯ ಪೊಲೀಸ್ ಠಾಣಾ ಉಪ ನಿರೀಕ್ಷಕರಾಗಿ ಈರಯ್ಯ ದೂಂತೂರು ಅವರನ್ನು ನೇಮಕ ಮಾಡಿ ಸರಕಾರ ಆದೇಶ ಮಾಡಿದೆ. ಸುಳ್ಯ ಎಸ್ಐ ಆಗಿರುವ ದಿಲೀಪ್ ಜಿ.ಆರ್. ಅವರಿಗೆ ವರ್ಗಾವಣೆಯಾಗಿದ್ದು, ಕಳೆದ ಎರಡು ವರ್ಷಗಳಿಂದ ದಿಲೀಪ್ ಸುಳ್ಯ ಎಸ್ಐ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಈರಯ್ಯ ದೂಂತೂರು ಅವರು ಬಂಟ್ವಾಳ ಹಾಗೂ ವಿಟ್ಲದಲ್ಲಿ ಪ್ರೊಬೇಷನರಿ ಎಸ್‌ಐ ಆಗಿ ಬಳಿಕ ಬೆಳ್ಳಾರೆ...

ಸುಳ್ಯದ ಖಾಸಗಿ ಬಸ್ ನಿಲ್ದಾಣದ ಬಳಿಯ ಕಾಮತ್ ಕಾಂಪ್ಲೆಕ್ಸ್ ನಲ್ಲಿ ಬಾಲಾಕ್ಷ ಜ್ಯೂಸ್ & ಚಾಟ್ಸ್ ಸೆಂಟರ್ ಜೂ.14 ರಂದು ಶುಭಾರಂಭಗೊಂಡಿತು. ಇಲ್ಲಿ ವಿವಿಧ ಬಗೆಯ ಜ್ಯೂಸ್ ಹಾಗೂ ಶುಚಿರುಚಿಕರವಾದ ಚಾಟ್ಸ್ ದೊರೆಯುತ್ತದೆ. ಹಾಗೂ ವಿದ್ಯಾರ್ಥಿಗಳಿಗೆ ಚಾಟ್ಸ್ ದರದಲ್ಲಿ ವಿಶೇಷ ರಿಯಾಯಿತಿ ನೀಡಲಾಗುವುದು ಎಂದು ಮಾಲಕರು ತಿಳಿಸಿದ್ದಾರೆ.

ಸುಳ್ಯ ಖಾಸಗಿ ಬಸ್ ನಿಲ್ದಾಣದ ಸಮೀಪದ ಶಿವಕೃಪಾ ಕಲಾಮಂದಿರದಲ್ಲಿ ಮಾಧವರತ್ನ ಬಿಗ್ ಬಜಾರ್ ಮಹಾಮೇಳ ನಡೆಯುತ್ತಿದೆ. ಪ್ರತೀ ವಸ್ತುಗಳು ಕೇವಲ 199ರೂಗಳಿಗೆ ದೊರೆಯುತ್ತಿದೆ.ಇಲ್ಲಿ ನಿತ್ಯ ಗೃಹಬಳಕೆ ವಸ್ತುಗಳು, ಪ್ಲಾಸ್ಟಿಕ್ ಐಟಂಗಳು,ಎಲೆಕ್ಟ್ರಿಕಲ್ ಐಟಂ, ಗೊಂಬೆಗಳು, ಶೂಗಳು, ಚಪ್ಪಲಿಗಳು, ಗಡಿಯಾರ, ಬ್ಯಾಗ್, ಸ್ಟೀಲ್, ಅಲ್ಯೂಮಿನಿಯಂ ಪಾತ್ರೆಗಳು, ಟ್ರೇ, ಬಕೆಟ್, ಚೇರ್, ಬುಟ್ಟಿ, ಮತ್ತಿತರರ ಪ್ಲಾಸ್ಟಿಕ್ ಸಾಮಾಗ್ರಿಗಳು, ಚೂಡಿದಾರ್, ನೈಟ್...

ಪ್ರಕೃತಿಯು ತನ್ನ ಒಡಲಲ್ಲಿ ಹಲವಾರು ವಿಸ್ಮಯಗಳನ್ನು ವೈಶಿಷ್ಟ್ಯಗಳನ್ನು ತುಂಬಿಕೊಂಡಿದೆ. ಅದನ್ನು ನೋಡಿದಾಗಲೇ ಆ ವಿಸ್ಮಯಕಾರಿ ವಿಚಾರಗಳು ನಮಗೆ ಕಂಡುಬರುತ್ತದೆ. ಇಂತಹ ಅನೇಕ ವಿಸ್ಮಯಗಳು ಆಗಾಗ ಅಲ್ಲಲ್ಲಿ ಕಾಣಸಿಗುತ್ತವೆ. ಹಾಗೆನೆ ನಿನ್ನೆ ರಾತ್ರಿ ಕಲ್ಮಡ್ಕ ಗ್ರಾಮದ ರುಕ್ಮಯ್ಯ ಗೌಡರವರ ಮನೆಯಲ್ಲಿ ಅಪರೂಪದ ಚಿಟ್ಟೆಯೊಂದು ಗೋಚರಿಸಿದೆ. ಹೊರಗಿನಿಂದ ಲೈಟ್ ಬೆಳಕಿನ ಅಂದ ಸವಿಯಲು ಮನೆಯೊಳಗೆ ಲಗ್ಗೆ ಇಟ್ಟಿತು ....

All posts loaded
No more posts