ಕಡಬ: ಸಾಮಾಜಿಕ ಜಾಲತಾಣವಾದ ಇನ್ನಾಷ್ಟಗ್ರಾಂ ಮೂಲಕ ಪರಿಚಯವಾದ ಯುವತಿಗೆ ವಂಚಿಸಿ ದೈಹಿಕ ಸಂಪರ್ಕ ಬೆಳೆಸಿ ಮೋಸ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕಡಬ ಮೂಲದ ಅನೀಶ್ ರೆಹಮಾನ್ ಎಂಬಾತನನ್ನು ಮಂಗಳೂರು ಮಹಿಳಾ ಪೊಲೀಸರು ಜೂನ್ 27 ರಂದು ಬಂಧಿಸಿದ್ದಾರೆ.
ಇನ್ಸಾಗ್ರಾಂ ಮೂಲಕ ಅನೀಶ್ ಗೆ ಪರಿಚಯವಾಗಿದ್ದ ಯುವತಿಯನ್ನು ತಾನು ಅವಿವಾಹಿತ ಎಂದು ನಂಬಿಸಿ ಆಕೆಯ ಜೊತೆ ನಿರಂತರ ದೈಹಿಕ ಸಂಪರ್ಕ ಬೆಳೆಸಿದ್ದ ಆರೋಪಿತ ವ್ಯಕ್ತಿಯು ಹೊಟೇಲ್ ಪೂಜಾ ಇಂಟರ್ ನ್ಯಾಶನಲ್ ನಲ್ಲಿ ರೂಂ ಪಡೆದು ನಿರಂತರಾಗಿ 20 ದಿನಗಳ ಕಾಲ ದೈಹಿಕ ಸಂಪರ್ಕ ಬೆಳೆಸಿದ್ದರು ಎನ್ನಲಾಗಿದ್ದು ಇದಾದಾ ಬಳಿಕ ಆರೋಪಿತ ವ್ಯಕ್ತಿಗೆ ಮದುವೆಯಾಗಿರುವ ವಿಚಾರ ತಿಳಿದು ಯುವತಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾಳೆ. ಐಪಿಸಿ 506, 417 ಹಾಗೂ 376 ರಡಿ ಕೇಸು ದಾಖಲಿಸಿ ರೆಹಮಾನ್ ನನ್ನು ಪೊಲೀಸರು ಬಂಧಿಸಿದ್ದು , ಈತ ಈ ಹಿಂದೆ ಕಾವೂರು ಠಾಣಾ ವ್ಯಾಪ್ತಿಯಲ್ಲಿ ಗಾಂಜಾ ಸೇವನೆ ಕೇಸ್ ನಲ್ಲಿ ಬಂಧಿತನಾಗಿದ್ದ ಎಂದು ಪೋಲೀಸ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಐಪಿಸಿ 506, 417 ಹಾಗೂ 376 ರಡಿ ಕೇಸು ದಾಖಲಿಸಿ ರೆಹಮಾನ್ ನನ್ನು ಪೊಲೀಸರು ಬಂಧಿಸಿದ್ದು , ಈತ ಈ ಹಿಂದೆ ಕಾವೂರು ಠಾಣಾ ವ್ಯಾಪ್ತಿಯಲ್ಲಿ ಗಾಂಜಾ ಸೇವನೆ ಕೇಸ್ ನಲ್ಲಿ ಬಂಧಿತನಾಗಿದ್ದ ಎಂದು ಪೋಲೀಸ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.