ಕಲ್ಲುಗುಂಡಿಯ ಸವೇರಪುರ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಜೂ.26 ರಂದು ವಿದ್ಯಾರ್ಥಿ ಸಂಸತ್ತಿನ ಉದ್ಘಾಟನಾ ಸಮಾರಂಭವನ್ನು ನಡೆಯಿತು. ಶಾಲಾ ಸಂಚಾಲಕರಾದ ಫಾದರ್ ಪಾವ್ಲ್ ಕ್ರಾಸ್ತಾ ರವರು ಅಧ್ಯಕ್ಷತೆ ವಹಿಸಿದ್ದರು. ಶಾಲಾ ಮುಖ್ಯ ಶಿಕ್ಷಕರಾದ ಸಿಸ್ಟರ್ ಅನಿತಾ ಮಸ್ಕರೇನಸ್ ನೂತನ ವಿದ್ಯಾರ್ಥಿ ಸರಕಾರದ ಮಂತ್ರಿಗಳಿಗೆ ಪ್ರತಿಜ್ಞಾವಿಧಿ ಬೋಧಿಸಿದರು.
ಶಾಲಾ ನಾಯಕನಾಗಿ ಶೋಧನ್ ಪಿ. ಎಂ, ಉಪ ನಾಯಕಿಯಾಗಿ ಪರಿಣಿತ ಎಚ್. ಆರ್ ಆಯ್ಕೆಯಾಗಿದ್ದಾರೆ.
ಸಹ ಶಿಕ್ಷಕಿ ಶ್ರೀಮತಿ ವಾಣಿರವರು ಕಾರ್ಯಕ್ರಮ ನಿರ್ವಹಿಸಿದರು.