
ತೀವ್ರ ಹೃದಯಾಘಾತದಿಂದ ಯುವಕನೋರ್ವ ಮೃತಪಟ್ಟ ಘಟನೆ ಪಂಜ ಸಮೀಪದ ಕರಿಕ್ಕಳದಿಂದ ಜೂ.25 ರಾತ್ರಿ ವರದಿಯಾಗಿದೆ.ಪಂಬೆತ್ತಾಡಿ ಗ್ರಾಮದ ಕರಿಕ್ಕಳ ದಿ.ತಮ್ಮಯ್ಯ ಗೌಡರ ಪುತ್ರ, ಪಂಜದ ಶಿವಕೃಪಾ ಮೋಟಾರ್ಸ್ ನ ಮೆಕಾನಿಕ್ ಭಾಸ್ಕರ ಗೌಡ ಮೃತಪಟ್ಟ ಯುವಕ. ಅವರು ಜೂ.25 ರಾತ್ರಿ 10 ಗಂಟೆಗೆ ವೇಳೆಗೆ ತೀವ್ರ ಹೃದಯಾಘಾತದಿಂದ ಕುಸಿದು ಬಿದ್ದು ಮೃತಪಟ್ಟರೆನ್ನಲಾಗಿದೆ.ಪಂಜದಲ್ಲಿ ಅವರು ಸುಮಾರು 20 ವರುಷಗಳಿಂದ ಮೆಕಾನಿಕ್ ಆಗಿ ಕೆಲಸ ಮಾಡುತ್ತಿದ್ದರು. ಮೃತರು ಅವಿವಾಹಿತರಾಗಿದ್ದು, ತಾಯಿ ಶ್ರೀಮತಿ ಲಕ್ಷ್ಮೀ, ಸಹೋದರ ಸುರೇಶ, ಸಹೋದರಿಯರಾದ ಶ್ರೀಮತಿ ವೀಣಾ ಗೋಪಾಲಕೃಷ್ಣ ಎಳುವೆ ಕಾಣಿಯೂರು, ಶ್ರೀಮತಿ ರಾಜೀವಿ ಬಾಲಕೃಷ್ಣ ಎಣ್ಮೂರು, ಕುಟುಂಬಸ್ಥರು, ಬಂಧುಮಿತ್ರರನ್ನು ಅಗಲಿದ್ದಾರೆ.