Ad Widget

ವಿದ್ಯಾಬೋಧಿನೀ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಾಲಾ ಕೈತೋಟ ರಚನೆ

ಸುಕೃತಿ ಮಹಿಳಾ ಕಾಯಕೋತ್ಸವ ತಂಡದ ವತಿಯಿಂದ ಇಂದು ವಿದ್ಯಾಬೋಧಿನೀ ಹಿರಿಯ ಪ್ರಾಥಮಿಕ ಶಾಲೆ ಬಾಳಿಲದಲ್ಲಿ ಶಾಲಾ ಕೈತೋಟ ರಚನೆ ಮಾಡಲಾಯಿತು. ಕೈತೋಟ ರಚನೆ ಕಾರ್ಯದಲ್ಲಿ ಸಮಿತಿ ಸದಸ್ಯರಾದ ಜಾಹ್ನವಿ ಕಾಂಚೋಡು, ಹರಿಣಾಕ್ಷಿ ಬರೆಮೇಲು, ವಿದ್ಯಾ, ಪ್ರೇಮಲತಾ ಮರುವಂಜ, ಪುಷ್ಪಲತಾ ಬಿ, ಗೀತಾ ಡಿ ಇವರುಗಳು ಪಾಲ್ಗೊಂಡರು. ತೋಟದಲ್ಲಿ ಅಲಸಂಡೆ, ಬದನೆ, ಬಸಳೆ, ಬೆಂಡೆ,ಬೀನ್ಸ್ ಕೃಷಿಗೆ ಸಾಲುಗಳನ್ನು...

ಸುಳ್ಯ : ಸರಕಾರಿ ಆಸ್ಪತ್ರೆಯಲ್ಲಿ ನಡೆಯುತ್ತಿರುವ ಕಾಮಗಾರಿಗಳ ಪರಿಶೀಲನೆ ನಡೆಸಿದ ಶಾಸಕಿ ಭಾಗೀರಥಿ ಮುರುಳ್ಯ

ಸುಳ್ಯದ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಗೆ ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯರವರು ಭೇಟಿ ನೀಡಿ ನಡೆಯುತ್ತಿರುವ ವಿವಿಧ ಕಾಮಗಾರಿಗಳ ಪ್ರಗತಿ ಪರಿಶೀಲನೆಯನ್ನು  ನಡೆಸಿದರು. ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಸುಳ್ಯ ಸರ್ಕಾರಿ ಆಸ್ಪತ್ರೆಯಲ್ಲಿ ವಿವಿಧ ಮೂಲಭೂತ ಸೌಲಭ್ಯಗಳ ಪೂರೈಕೆಗಾಗಿ ಸುಮಾರು 4 ಕೋಟಿ ರೂಪಾಯಿ ಅನುದಾನ ಬಂದಿದ್ದು ಈ ಅನುದಾನ ಬಳಸಿ ನಡೆಯುತ್ತಿರುವ ಡಯಾಲಿಸಿಸ್ ಸೆಂಟರ್ ಆಧುನಿಕರಣ,...
Ad Widget

ಅರಂತೋಡು : ನೆಹರು ಸ್ಮಾರಕ ಪದವಿಪೂರ್ವ ಕಾಲೇಜಿನ ನಾಯಕನಾಗಿ ಭವಿತ್ ಆಯ್ಕೆ

ಅರಂತೋಡಿನ ನೆಹರು ಸ್ಮಾರಕ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿ ಸಂಸತ್ ಚುನಾವಣೆಯಲ್ಲಿ ನಾಯಕನಾಗಿ ದ್ವಿತೀಯ ವಾಣಿಜ್ಯ ವಿಭಾಗ ಭವಿತ್ ಆಯ್ಕೆಯಾಗಿರುತ್ತಾರೆ. ಕಾಲೇಜಿನ ಉಪ ನಾಯಕಿಯಾಗಿ ದ್ವಿತೀಯ ವಿಜ್ಞಾನ ವಿಭಾಗದ ಸಿಂಚನ ಪಿ ಆಯ್ಕೆಯಾಗಿರುತ್ತಾರೆ.

ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿಲ್ಲ: ಕಟೀಲ್ ಸ್ಪಷ್ಟನೆ

ಪಕ್ಷದ ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿಲ್ಲ. ಈ ಕುರಿತಂತೆ ಮಾಧ್ಯಮಗಳಲ್ಲಿ ಬರುತ್ತಿರುವ ಮಾಹಿತಿ ಸತ್ಯಕ್ಕೆ ದೂರವಾದುದು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಸಂಸದ ನಳಿನ್‍ಕುಮಾರ್ ಕಟೀಲ್ ಅವರು ತಿಳಿಸಿದ್ದಾರೆ. ಪತ್ರಿಕಾ ಹೇಳಿಕೆ ನೀಡಿರುವ ಅವರು, ಬಳ್ಳಾರಿಯಲ್ಲಿ ವಿ. ಸೋಮಣ್ಣ ರಾಜ್ಯಾಧ್ಯಕ್ಷ ಸ್ಥಾನದ ಆಕಾಂಕ್ಷೆಯನ್ನು ಪ್ರಕಟಿಸಿದ ಕುರಿತ ಪ್ರಶ್ನೆಗೆ ಉತ್ತರಿಸುವ ವೇಳೆ ಸೋಲಿನ ನೈತಿಕ ಹೊಣೆ ಹೊರುತ್ತೇನೆ....

ವೆಂಕಪ್ಪ ಗೌಡ ಹಿರಿಯಡ್ಕ ನಿಧನ

ದೇವಚಳ್ಳ ಗ್ರಾಮದ ದೇವ ಹಿರಿಯಡ್ಕ ವೆಂಕಪ್ಪ ಗೌಡರು ಅಲ್ಪ ಕಾಲದ ಅಸೌಖ್ಯದಿಂದ ಸ್ವಗೃಹದಲ್ಲಿ ಇಂದು ನಿಧನರಾದರು. ಅವರಿಗೆ 70 ವರ್ಷ ವಯಸ್ಸಾಗಿತ್ತು. ಮೃತರು ಕಂದ್ರಪ್ಪಾಡಿ ಶ್ರೀ ರಾಜ್ಯದೈವ ಮತ್ತು ಪುರುಷ ದೈವದ ಪೂಜಾರಿಯಾಗಿ ಸೇವೆ ಸಲ್ಲಿಸಿದ್ದಾರೆ. ಮೃತರು ಪತ್ನಿ ಚಂದ್ರಾವತಿ, ಪುತ್ರರಾದ ನಳಿನಾಕ್ಷ , ಮುಕುಂದ, ವಿನಯಕುಮಾರ್ ಹಾಗೂ ಸೊಸೆಯಂದಿರು, ಮೊಮ್ಮಕ್ಕಳು ಮತ್ತು ಕುಟುಂಬಸ್ಥರನ್ನು ಅಗಲಿದ್ದಾರೆ.

ಪ್ರತೀ ತಾಲೂಕು ಮಟ್ಟದ ಸಭೆಯನ್ನು ಜಿಲ್ಲಾ ಕೆಡಿಪಿ ಮಾದರಿಯಲ್ಲೆ ನಡೆಸುವಂತೆ ಉಸ್ತುವಾರಿ ಸಚಿವರಿಗೆ ಕೆ. ಎಂ. ಮುಸ್ತಫ ಮನವಿ

ಜಿಲ್ಲಾ ಕೆಡಿಪಿ ಮಾದರಿಯಲ್ಲಿ ಜಿಲ್ಲೆಯ ಎಲ್ಲಾ ತಾಲೂಕುಗಳ ಜನಪ್ರತಿನಿದಿ ಗಳ ಮತ್ತು ಅಧಿಕಾರಿಗಳ ಸಭೆಯನ್ನು ಜಿಲ್ಲಾ ಮಟ್ಟದ ಲ್ಲಿ ಆಯೋಜಿಸಿ ಸಮಸ್ಯೆಗಳಿಗೆ ಪರಿಹಾರ ಒದಗಿಸುವಂತೆಜಿಲ್ಲಾ ಉಸ್ತುವಾರಿ ಸಚಿವರಿಗೆ ಕೆ. ಎಂ. ಮುಸ್ತಫ ಮನವಿ ಮಾಡಿದ್ದಾರೆ.ಕರ್ನಾಟಕ ಸರಕಾರದ ಅರೋಗ್ಯ, ಕುಟುಂಬ ಕಲ್ಯಾಣ ಇಲಾಖೆ ಮತ್ತು ದ. ಕ. ಜಿಲ್ಲಾ ಉಸ್ತುವಾರಿ ಸಚಿವರಾದ ದಿನೇಶ್ ಗುಂಡೂರಾವ್ ರವರನ್ನು ಕೆಪಿಸಿಸಿ...

ಸಂಧ್ಯಾ ಚೇತನ ಹಿರಿಯ ನಾಗರಿಕರ ಸಂಘದ ಮಹಾಸಭೆ

ಸಂಧ್ಯಾ ಚೇತನ ಸುಳ್ಯ ತಾಲೂಕು ಹಿರಿಯ ನಾಗರಿಕರ ಸಂಘದ ಮಹಾಸಭೆಯು ಜೂ.23 ರಂದು ಜಟ್ಟಿಪಳ್ಳ ಕಾನತ್ತಿಲ ರಸ್ತೆಯಲ್ಲಿರುವ ಹಿರಿಯರ ಮನೆಯಲ್ಲಿ ನಡೆಯಿತು. ಸಂಘದ ಅಧ್ಯಕ್ಷ ಬಾಪೂ ಸಾಹೇಬ್ ಅಧ್ಯಕ್ಷತೆ ವಹಿಸಿದ್ದರು. ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪದ್ಮಶ್ರೀ ಗಿರೀಶ್ ಭಾರಧ್ವಜ್, ಸವಣೂರು ವಿದ್ಯಾರಶ್ಮಿ ವಿದ್ಯಾಲಯದ ಸಂಚಾಲಕ ಸವಣೂರು ಸೀತಾರಾಮ ರೈ, ಎಪಿಎಂಸಿ ಮಾಜಿ ಅಧ್ಯಕ್ಷ ಅಡ್ಡಂತಡ್ಕ...

ಕಿರ್ಲಾಯ :  ಅಂಬೇಡ್ಕರ್ ರಕ್ಷಣಾ ವೇದಿಕೆಯ ವತಿಯಿಂದ ಶ್ರಮದಾನ

ಅರಂತೋಡು ಗ್ರಾಮದ ಕಿರ್ಲಾಯ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಜೂ. 23 ರಂದು ಅಂಬೇಡ್ಕರ್ ರಕ್ಷಣಾ ವೇದಿಕೆಯ ವತಿಯಿಂದ ಶ್ರಮದಾನ ಮಾಡಲಾಯಿತು. ಈ  ಸಂದರ್ಭದಲ್ಲಿ ಅಂಬೇಡ್ಕರ್ ರಕ್ಷಣೆ ವೇದಿಕೆಯ ಜಿಲ್ಲಾಧ್ಯಕ್ಷ ಪಿ.ಸುಂದರ ಪಾಟಾಜೆ, ಜಿಲ್ಲಾ ಕಾರ್ಯದರ್ಶಿ ಪರಮೇಶ್ವರ ಕೆಮ್ಮಿಂಜೆ, ಸುಳ್ಯ ಘಟಕ ಅಧ್ಯಕ್ಷ ರಮೇಶ್ ಕೊಡಂಕಿರಿ, ಕಾರ್ಯದರ್ಶಿ ತೇಜಕುಮಾರ್ ಅರಮನೆಗಯ, ಅರಂತೋಡು ಘಟಕ ಅಧ್ಯಕ್ಷರಾದ ನವೀನ್...
error: Content is protected !!