: ನಿರ್ಮಾಣ ಹಂತದಲ್ಲಿರುವ ಮನೆಗೆ ಪೈಂಟ್ ಮಾಡುತ್ತಿದ್ದ ಯುವಕನೋರ್ವ ಮೇಲಿನಿಂದ ಬಿದ್ದು ಗಂಭೀರ ಜಖಂಗೊಂಡ ಘಟನೆ ಸುಳ್ಯ ಸಮೀಪದ ಬೋರುಗುಡ್ಡೆ ಎಂಬಲ್ಲಿ ಬುಧವಾರ ಸಂಜೆ ಸಂಭವಿಸಿದೆ.ಪೈಂಟರ್ ಆಗಿ ವೃತ್ತಿ ನಿರ್ವಹಿಸುತ್ತಿರುವ ಸುಳ್ಯ ಜಯನಗರದ ಉಸ್ಮಾನ್ ಎಂಬ ಯುವಕ ನೂತನವಾಗಿ ನಿರ್ಮಿಸುತ್ತಿರುವ ಮನೆಯೊಂದರ ಮೊದಲನೆಯ ಅಂತಸ್ತಿನಲ್ಲಿ ಒಂದು ಭಾಗದಿಂದ ಮತ್ತೊಂದು ಭಾಗಕ್ಕೆ ಇಟ್ಟಿದ್ದ ಹಲಗೆ ತುಂಡಾಗಿ ಕೆಳಕ್ಕೆ ಬಿದ್ದರೆನ್ನಲಾಗಿದೆ. ಅವರ ತಲೆ, ಎಡ ಭುಜ, ಕೈ ಮತ್ತು ಕಾಲಿಗೆ ಗಂಭೀರ ಪೆಟ್ಟಾಗಿದ್ದು, ಅವರನ್ನು ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.
- Wednesday
- May 21st, 2025