ಗೂನಡ್ಕದ ತೆಕ್ಕಿಲ್ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯಲ್ಲಿ
ಜೂ 21ರಂದು 9ನೇ ಅಂತ ರಾಷ್ಟ್ರೀಯ ಯೋಗ ದಿನಾಚರಣೆಯನ್ನು ಗೂನಡ್ಕದಲ್ಲಿ ಆಚರಿಸಲಾಯಿತು. ಈ ದಿನದ ಮಹತ್ವದ ಕುರಿತಾಗಿ ಶಾಲಾ ಮುಖ್ಯೋಪಾಧ್ಯಾಯರಾದ ಸಂಪತ್ ಜೆ.ಡಿ ಅವರು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿ ಯೋಗವು ಜೀವನದ ಪ್ರಮುಖ ಭಾಗವಾಗಿದ್ದು, ನೆಮ್ಮದಿಯ ಜೀವನಕ್ಕೆ ಬಹಳಷ್ಟು ಸಹಾಯಕಾರಿ ಮತ್ತು ವಿದ್ಯಾರ್ಥಿಗಳು ಶಾಲಾ ಹಂತದ ಕಲಿಕೆಯಲ್ಲಿ ಯೋಗವನ್ನು ಅಳವಡಿಸಿಕೊಳ್ಳಬೇಕು ಎಂದು ತಿಳಿಸಿದರು.
ವಿದ್ಯಾರ್ಥಿಗಳು ಮತ್ತು ಶಾಲಾ ಶಿಕ್ಷಕ ವೃಂದದವರೆಲ್ಲರೂ ಬಹಳ ಉತ್ಸುಕರಾಗಿ ಯೋಗಾಸನಗಳನ್ನು ಮಾಡಿ ಅದನ್ನು ನಿತ್ಯ ಜೀವನದಲ್ಲಿ ಅಳಡಿಸಿಕೊಳ್ಳುವ ನಿರ್ಧಾರದೊಂದಿಗೆ ವಿಶಿಷ್ಟವಾಗಿ ಆಚರಿಸಲಾಯಿತು.ಈ ಸಂದರ್ಭದಲ್ಲಿ ಶಾಲಾ ಶಿಕ್ಷಕರು ಆಡಳಿತ ಮಂಡಳಿ ಸಮಿತಿಯವರು ಉಪಸ್ಥಿತರಿದ್ದರು .
- Thursday
- November 21st, 2024