
ಕೇಂದ್ರ ಸರಕಾರ ಬಡ ವರಿಗೆ ನೀಡುವ ಅಕ್ಕಿಯಲ್ಲಿ ರಾಜಕೀಯ ಮಾಡುವುದು ಸರಕಾರದ ಈ ಕ್ರಮ ಸರಿಯಲ್ಲ. ಬಿಜೆಪಿಯವರು ಏನೇ ಕುತಂತ್ರ ಮಾಡಿದರೂ ಜುಲೈ 1 ರಿಂದ 10 ಕೆ.ಜಿ. ಅಕ್ಕಿ ಕೊಡುವುದಂತೂ ಖಚಿತ ಎಂದು ನ.ಪಂ. ಸದಸ್ಯ ಎಂ.ವೆಂಕಪ್ಪ ಗೌಡ ಹೇಳಿದ್ದಾರೆ.ಜೂ.20 ರಂದು ಸುಳ್ಯ ಪ್ರೆಸ್ ಕ್ಲಬ್ ನಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಅವರು, ಕಾಂಗ್ರೆಸ್ ಸರಕಾರದ ಕೇಳಿಕೆಯಂತೆ ಭಾರತೀಯ ಆಹಾರ ನಿಗಮ ಜೂ.12 ರಂದು ಅಕ್ಕಿ ನೀಡಲು ಒಪ್ಪಿಗೆ ನೀಡಿತ್ತು. ಅದಕ್ಕೆ ಹಣವನ್ನೂ ನಾವು ಪಾವತಿಸಬೇಕಿತ್ತು. ಹೀಗಿರುವಾಗ ಮರುದಿನ ರಾಜ್ಯದ ಬಿಜೆಪಿ ನಾಯಕರ ಕುತಂತ್ರದಿಂದಾಗಿ ಅಕ್ಕಿ ನೀಡಲು ಸಾಧ್ಯ ಇಲ್ಲ ಎಂದು ಕೇಂದ್ರ ಹೇಳಿದೆ. ಬಡವರಿಗೆ ಸಿಗುವ ಅಕ್ಕಿಯನ್ನು ಸಿಗದಂತೆ ಬಿಜೆಪಿ ಬಿಜೆಪಿಗರು ಬಡವರ ಪರ ನಿಲ್ಲಬೇಕಿತ್ತು. ಆದರೆ ಅವರು ರಾಜಕೀಯ ಮಾಡಿದರು. ಆದರೂ ಕಾಂಗ್ರೆಸ್ ನುಡಿದಂತೆ ನಡೆಯುತ್ತದೆ. ನಮಗೆ ಪಂಜಾಬ್ ಸರಕಾರ ಅಕ್ಕಿ ನೀಡಲು ಒಪ್ಪಿದ್ದು ಜುಲೈ 1 ರಿಂದ 10 ಕೆಜಿ ಅಕ್ಕಿ ಘೋಷಣೆ ಯಂತೆ ಸಿಗಲಿದೆ ಎಂದ ಅವರು ಕೇಂದ್ರ ಅಕ್ಕಿ ನೀಡುತ್ತಿದ್ದರೆ ಸ್ವಲ್ಪ ಕಡಿಮೆ ದರ ಕೊಡಬೇಕಿತ್ತು. ಆದರೆ ಈಗ ಸ್ವಲ್ಪಹೆಚ್ಚು ಖರ್ಚಾಗಲಿದ್ದು ಅದರ ಹೊರೆ ಜನರಿಗೆ ಬೀಳಲಿದೆ. ಇದಕ್ಕೆ ಕಾರಣ ಬಿಜೆಪಿ ಎಂದು ವೆಂಕಪ್ಪ ಗೌಡರು ಹೇಳಿದರು.ಗೃಹಜ್ಯೋತಿ ಯೋಜನೆಗೆ ಅರ್ಜಿ ಸಲ್ಲಿಸಲು ಮೆಸ್ಕಾಂಗೆ ಹೋಗಬೇಕಿಲ್ಲ.ಅವರವರ ಮೊಬೈಲ್ ನಲ್ಲಿ ಸೇವಾ ಸಿಂಧು ಆಪ್ ಮೂಲಕ ಅರ್ಜಿ ಸಲ್ಲಿಸಬಹುದು ಎಂದು ಅವರು ಹೇಳಿದರು.ಪತ್ರಿಕಾಗೋಷ್ಠಿಯಲ್ಲಿ ನ.ಪಂ. ಸದಸ್ಯ ರುಗಳಾದ ಡೇವಿಡ್ ಧೀರಾ ಕ್ರಾಸ್ತ, ಶರೀಫ್ ಕಂಠಿ, ಕೆ.ಗೋಕುಲ್ ದಾಸ್, ಭವಾನಿಶಂಕರ್ ಕಲ್ಮಡ್ಕ, ಚೇತನ್ ಕಜೆಗದ್ದೆ ಇದ್ದರು.