
ಆಲೆಟ್ಟಿ ಗ್ರಾಮದ ನಾಗಪಟ್ಟಣ ಸಿ.ಆರ್.ಸಿ ಕಾಲನಿಯ ಯವಕನೊಬ್ಬ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ವರದಿಯಾಗಿದೆ.ನಾಗಪಟ್ಟಣ ಸಿ .ಆರ್ .ಸಿ ಕಾಲನಿ ನಿವಾಸಿ ಮಣಿಕಂಠ ಎಂಬ ಯುವಕ ಸೋಮವಾರ ರಾತ್ರಿ ಮನೆಗೆ ಬಂದು ಬೈಕ್ ನಿಲ್ಲಿಸಿ ತಾಯಿಯ ಸೀರೆಯನ್ನು ತೆಗೆದುಕೊಂಡು ಹೋಗಿ ಸಮೀಪದ ಅಂಗನವಾಡಿ ಬಳಿಯ ಮಾವಿನಮರಕ್ಕೆ ನೇಣು ಹಾಕಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ತಿಳಿದುಬಂದಿದೆ.ಮಣಿಕಂಠ ಕಳೆದ 5 ವರ್ಷ ಗಳಿಂದ ಗೇರುಬೀಜ ವ್ಯಾಪಾರ ನಡೆಸುತ್ತಿರುವ ಜಾಲ್ಸೂರಿನ ಪ್ರವೀಣ್ ಎಂಬವರ ಜತೆ ಚಾಲಕ ವೃತ್ತಿ ನಿರ್ವಹಿಸುತ್ತಿದ್ದು ಅವರ ಮನೆಯಲ್ಲಿಯೇ ಉಳಿದುಕೊಂಡಿರುತ್ತಿದ್ದರು. ಸೋಮವಾರ ರಾತ್ರಿ ಊಟ ಮಾಡಿದ ಬಳಿಕ ಎಲ್ಲರೂ ನಿದ್ರೆ ಮಾಡುತ್ತಿರುವ ಸಮಯ ಮಣಿಕಂಠ ಯಾರಲ್ಲಿಯೂ ಹೇಳದೆ ತನ್ನ ಬೈಕಿನಲ್ಲಿ ಸ್ವಂತ ಮನೆ ನಾಗಪಟ್ಟಣಕ್ಕೆ ಬಂದು ಮನೆಯ ಗೇಟಿನ ಮುಂದೆ ಬೈಕ್ ನಿಲ್ಲಿಸಿ ಮನೆಯ ಅಂಗಳದಲ್ಲಿ ನಿಲ್ಲಿಸಿದ್ದ ಅಟೋ ರಿಕ್ಷಾದಲ್ಲಿ ಮೊಬೈಲ್ ಇಟ್ಟು ಅಲ್ಲೇ ಇದ್ದ ತನ್ನ ತಾಯಿಯ ಸೀರೆಯೊಂದನ್ನು ತೆಗೆದುಕೊಂಡು ಹೋಗಿ ನೇಣು ಹಾಕಿಕೊಂಡಿದ್ದರು. ಬೈಕ್ ನ ಬಳಿ ಅವರ ಚಪ್ಪಲಿ ಹಾಗೂ ಬೈಕಿನ ಕೀ ಸಿಕ್ಕಿದೆ. ಆತ್ಮಹತ್ಯೆಗೆ ಕಾರಣ ತಿಳಿದು ಬಂದಿಲ್ಲಅವರು ತಂದೆ ಕೆಎಫ್.ಡಿ.ಸಿ ನಿವೃತ್ತ ಉದ್ಯೋಗಿ ಆರ್ ಕುಮಾರ್ , ತಾಯಿ ಪದ್ಮಾವತಿ, ಸಹೋದರ ಬಾಲಕೃಷ್, ಅತ್ತಿಗೆ ಗೀತಾ, ಚಿಕ್ಕಪ್ಪ ಮುತ್ತಯ್ಯ, ಸಹೋದರರಾದ ಭರತ್ ,ಬಾಲಸುಬ್ರಹ್ಮಣ್ಯ ಹಾಗೂ ಬಂಧುಗಳನ್ನು ಅಗಲಿದ್ದಾರೆ.ಮೃತ ಯುವಕ ಮಣಿಕಂಠ ಓರ್ವ ಉತ್ತಮ ಕಬಡ್ಡಿ ಹಾಗೂ ಫುಟ್ ಬಾಲ್ ಆಟಗಾರರಾಗಿದ್ದರು. ಸುಳ್ಯ ಪೋಲಿಸರು ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿರುತ್ತಾರೆ.