ಸುಳ್ಯದಲ್ಲಿ ನಿರ್ಮಾಣ ಹಂತದಲ್ಲಿರುವ ತಾಲೂಕು ಅಂಬೇಡ್ಕರ್ ಭವನ ಕಾಮಗಾರಿಯನ್ನು ಶಾಸಕಿ ಕು.ಭಾಗೀರಥಿ ಮುರುಳ್ಯ ಜೂನ್ .20 ರಂದು ಪರಿಶೀಲನೆ ನಡೆಸಿದರು.ಕಟ್ಟಡದ ಕುರಿತು ನಿರ್ಮಿತಿ ಕೇಂದ್ರದ ಇಂಜಿನಿಯರ್ ಹರೀಶ್ ಮೆದು ಅವರಿಂದ ಮಾಹಿತಿ ಪಡೆದರು. ಬಳಿಕ ಮಾತನಾಡಿದ ಶಾಸಕರು ವಾರದೊಳಗೆ ಕಾಮಗಾರಿಯನ್ನು ಆರಂಭಿಸಿ ಮುಂದಿನ 6 ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳಿಸಬೇಕು. ಈಗ ಇರುವ ಅನುದಾನದಲ್ಲಿ ಕೆಲಸ ನಿರ್ವಹಿಸಿ, ಹೆಚ್ಚುವರಿ ಅನುದಾನವನ್ನು ತರಿಸೋಣ ಎಂದು ಇಂಜಿನಿಯರ್‌ರಿಗೆ ಹೇಳಿದರು.ಕಾಮಗಾರಿಯ ಕುರಿತು ಮಾಹಿತಿ ನೀಡಿದ ಇಂಜಿನಿಯರ್ ಹರೀಶ್ ಮೆದುರವರು 2 ಕೋಟಿ ರೂ ವೆಚ್ಚದ ಕಾಮಗಾರಿ ಈಗ ಮುಗಿದಿದೆ. ಇನ್ನೂ ಒಂದೂವರೆ ಕೋಟಿ ರೂ ಬಿಡುಗಡೆಗೊಂಡಿದ್ದು ಅದರಲ್ಲಿ ಕಟ್ಟಡದ ಕೆಲಸ ಪೂರ್ಣಗೊಳ್ಳುವುದು. ಇಂಟೀರಿಯರ್ ಇತ್ಯಾದಿ ಕೆಲಸಗಳಿಗೆ 1 ಕೋಟಿ 6೦ ಲಕ್ಷದ ಎಸ್ಟಿಮೇಟ್ ಸರಕಾರಕ್ಕೆ ಸಲ್ಲಿಸಲಾಗಿದೆ. ಒಟ್ಟು 5 ಕೋಟಿ 10 ಲಕ್ಷ ರೂ ವೆಚ್ಚದಲ್ಲಿ ಕಟ್ಟಡ ಆಗಲಿದೆ ಎಂದು ಹೇಳಿದರು. 2012-13 ನೇ ಸಾಲಿನಲ್ಲಿ ಅಂಬೇಡ್ಕರ್ ಭವನ ಕಾಮಗಾರಿ ಆರಂಭಗೊಂಡಿತು. ರಸ್ತೆ ಸಮಸ್ಯೆ ಕಾರಣ ಕಾಮಗಾರಿ ವಿಳಂಬವಾಗಿತ್ತು. ಈಗ ಅದು ಕ್ಲಿಯರ್ ಆಗಿದೆ ಎಂದರು.600 ಮಂದಿ ಕುಳಿತುಕೊಳ್ಳುವ ಸುಸಜ್ಜಿತ ಹಾಲ್ ಇಲ್ಲಿ ಆಗಲಿದೆ. ನೆಲ ಮಹಡಿಯಲ್ಲಿ ಕಿಚನ್ ಹಾಗೂ ಊಟದ ಹಾಲ್ ಇರಲಿದ್ದು, ಮೊದಲ ಮಹಡಿಯಲ್ಲಿ ಸುಸಜ್ಜಿತ ಹಾಲ್ ನಿರ್ಮಾಣವಾಗುವುದು. ಎರಡನೇ ಮಹಡಿಯಲ್ಲಿ ಗೆಸ್ಟ್ ಹೌಸ್‌ಗಳು ಇರಲಿದೆ ಎಂದು ಮಾಹಿತಿ ನೀಡಿದರು.ಈ ಸಂದರ್ಭದಲ್ಲಿ ಬಿಜೆಪಿ ಮಂಡಲ ಸಮಿತಿ ಅಧ್ಯಕ್ಷ ಹರೀಶ್ ಕಂಜಿಪಿಲಿ, ಬಿಜೆಪಿ ಪ್ರಮುಖರಾದ ಎ.ವಿ. ತೀರ್ಥರಾಮ, ಎಸ್.ಎನ್.ಮನ್ಮಥ, ಚನಿಯ ಕಲ್ತಡ್ಕ, ಸುಭೋದ್ ಶೆಟ್ಟಿ ಮೇನಾಲ, ವಿನಯ ಕುಮಾರ್ ಕಂದಡ್ಕ, ಶಾಂತರಾಮ ಕಣಿಲೆಗುಂಡಿ, ಜಿನ್ನಪ್ಪ ಪೂಜಾರಿ, ಬಾಲಕೃಷ್ಣ ಕೀಲಾಡಿ, ಲೋಹಿತ್ ಕೊಡಿಯಾಲ, ಸಮಾಜ ಕಲ್ಯಾಣಾಧಿಕಾರಿ ಧನಂಜಯ ಉಪಸ್ಥಿರಿದ್ದರು.
- Thursday
- November 21st, 2024