- Thursday
- November 21st, 2024
ಗುತ್ತಿಗಾರು ಗ್ರಾಮದ ವಳಲಂಬೆ ನಡುಮನೆ ದೇವಣ್ಣ ಗೌಡರು ಜೂ. 20 ರಂದು ಅಲ್ಪ ಕಾಲದ ಅಸೌಖ್ಯದಿಂದ ಸ್ವಗೃಹದಲ್ಲಿ ನಿಧನರಾದರು. ಮೃತರು ಪುತ್ರರಾದ ಸುಧೀರ್, ಕಿಶನ್, ಪುತ್ರಿ ಶ್ರೀಮತಿ ಮಧುರ, ಸಹೋದರ,ಸಹೋದರಿ ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.
ಉತ್ತರಕನ್ನಡ ಜಿಲ್ಲೆ ಹೊನ್ನಾವರದ ಮಹಿಳೆಯೊಬ್ಬರು ನಿನ್ನೆ ಸಂಜೆ ಸುಳ್ಯ ಬಸ್ ನಿಲ್ದಾಣದಲ್ಲಿ ಪತ್ತೆಯಾಗಿದ್ದು, ಪೋಲೀಸರಿಗೆ ಆಕೆಯನ್ನು ಠಾಣೆಗೆ ಕರೆದುಕೊಂಡು ಹೋಗಿ ವಿಚಾರಿಸಿದರೂ ಯಾವುದೇ ಮಾಹಿತಿ ಆಕೆ ನೀಡುತ್ತಿರಲಿಲ್ಲ. ರಾತ್ರಿಯಾದುದರಿಂದ ಪೋಲೀಸರು ಆಕೆಯನ್ನು ಸುಳ್ಯದ ಸಾಂತ್ವನ ಕೇಂದ್ರಕ್ಕೆ ಸೇರಿಸಿದರು.ಮಹಿಳೆ ಹೊನ್ನಾವರದರೆಂದು ಆಕೆಯ ಆಧಾರ್ ಕಾರ್ಡ್ ನಿಂದ ಗೊತ್ತಾಗಿ ಅವರ ಮನೆಯವರ ಹುಡುಕಾಟ ನಡೆಸಲಾಗಿತ್ತು. ಮನೆಯವರು ಯಾರೆಂದು ಗೊತ್ತಾಗಿ...
ಆಲೆಟ್ಟಿ ಗ್ರಾಮದ ನಾಗಪಟ್ಟಣ ಸಿ.ಆರ್.ಸಿ ಕಾಲನಿಯ ಯವಕನೊಬ್ಬ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ವರದಿಯಾಗಿದೆ.ನಾಗಪಟ್ಟಣ ಸಿ .ಆರ್ .ಸಿ ಕಾಲನಿ ನಿವಾಸಿ ಮಣಿಕಂಠ ಎಂಬ ಯುವಕ ಸೋಮವಾರ ರಾತ್ರಿ ಮನೆಗೆ ಬಂದು ಬೈಕ್ ನಿಲ್ಲಿಸಿ ತಾಯಿಯ ಸೀರೆಯನ್ನು ತೆಗೆದುಕೊಂಡು ಹೋಗಿ ಸಮೀಪದ ಅಂಗನವಾಡಿ ಬಳಿಯ ಮಾವಿನಮರಕ್ಕೆ ನೇಣು ಹಾಕಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ತಿಳಿದುಬಂದಿದೆ.ಮಣಿಕಂಠ ಕಳೆದ...
ಸುಳ್ಯದ ಶಾಂತಿನಗರದಲ್ಲಿ ಕಾಮಗಾರಿ ನಡೆಯುತ್ತಿರುವ ತಾಲೂಕು ಕ್ರೀಡಾಂಗಣಕ್ಕೆ ವಿಧಾನಸಭಾ ಕ್ಷೇತ್ರದ ಶಾಸಕಿ ಭಾಗೀರಥಿ ಮುರುಳ್ಯ ಹಾಗೂ ಪುತ್ತೂರು ವಿಭಾಗದ ಸಹಾಯಕ ಕಮಿಷನರ್ ಗಿರೀಶ್ ನಂದನ್ ರವರು ಜೂ.19ರಂದು ಭೇಟಿ ನೀಡಿ ಕಾಮಗಾರಿಯ ವೀಕ್ಷಣೆ ಮಾಡಿ ಅಧಿಕಾರಿಗಳಿಂದ ಸಂಪೂರ್ಣ ಮಾಹಿತಿಯನ್ನು ಪಡೆದುಕೊಂಡರು.ಕಾಮಗಾರಿಯನ್ನು ವೀಕ್ಷಿಸಿದ ಶಾಸಕರು ಕ್ರೀಡಾಂಗಣದ ಒಂದು ಭಾಗದಲ್ಲಿ ಹಾಕಿರುವ ಮಣ್ಣಿನಿಂದ ಸ್ಥಳೀಯ ಜನತೆ ಆತಂಕದಲ್ಲಿದ್ದು ಮಳೆಗಾಲದಲ್ಲಿ...
ಸುಳ್ಯದಲ್ಲಿ ನಿರ್ಮಾಣ ಹಂತದಲ್ಲಿರುವ ತಾಲೂಕು ಅಂಬೇಡ್ಕರ್ ಭವನ ಕಾಮಗಾರಿಯನ್ನು ಶಾಸಕಿ ಕು.ಭಾಗೀರಥಿ ಮುರುಳ್ಯ ಜೂನ್ .20 ರಂದು ಪರಿಶೀಲನೆ ನಡೆಸಿದರು.ಕಟ್ಟಡದ ಕುರಿತು ನಿರ್ಮಿತಿ ಕೇಂದ್ರದ ಇಂಜಿನಿಯರ್ ಹರೀಶ್ ಮೆದು ಅವರಿಂದ ಮಾಹಿತಿ ಪಡೆದರು. ಬಳಿಕ ಮಾತನಾಡಿದ ಶಾಸಕರು ವಾರದೊಳಗೆ ಕಾಮಗಾರಿಯನ್ನು ಆರಂಭಿಸಿ ಮುಂದಿನ 6 ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳಿಸಬೇಕು. ಈಗ ಇರುವ ಅನುದಾನದಲ್ಲಿ ಕೆಲಸ ನಿರ್ವಹಿಸಿ,...
ಮುಂಬೈಯ ಭ್ರಾಮರಿ ಯಕ್ಷ ನೃತ್ಯ ಕಲಾ ನಿಲಯ ಚಾರಿಟೇಬಲ್ ಟ್ರಸ್ಟ್ ವತಿಯಿಂದ ನೀಡಲಾಗುವ ಅರಣ್ಯ ಬ್ರಹ್ಮ ಪ್ರಶಸ್ತಿಗೆ ಗ್ರೀನ್ ಹೀರೋ ಆಫ್ ಇಂಡಿಯಾ ಡಾ.ಆರ್. ಕೆ. ಭಾಜನರಾಗಿದ್ದು, ಮುಂಬೈಯಲ್ಲಿ ನಡೆದ ವಾರ್ಷಿಕೋತ್ಸವ ಸಮಾರಂಭದಲ್ಲಿ ಪ್ರದಾನ ಮಾಡಲಾಯಿತು