
ಮಲೆಯಾಳ-ಐನೆಕಿದು-ಹರಿಹರ ಪಲ್ಲತ್ತಡ್ಕ ಸಂಪರ್ಕ ರಸ್ತೆ ಡಾಮರೀಕರಣ ಪೂರ್ಣಗೊಂಡಿದ್ದು, ಜೂ.15 ರಂದು ಉದ್ಘಾಟನೆಗೊಂಡಿತು. ಮಾಜಿ ಸಚಿವರಾದ ಎಸ್.ಅಂಗಾರ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಸುಳ್ಯದ ಶಾಸಕರಾದ ಭಾಗೀರಥಿ ಮುರುಳ್ಯ, ಸುಬ್ರಹ್ಮಣ್ಯ ಗ್ರಾಮ ಪಂಚಾಯತ್ ಅಧ್ಯಕ್ಷೆ ಲಲಿತಾ ಗುಂಡಡ್ಕ, ಹರೀಶ್ ಕಂಜಿಪಿಲಿ, ವೆಂಕಟ್ ದಂಬೆಕೋಡಿ, ವೆಂಕಟ್ ವಳಲಂಬೆ, ಕಿಶೋರ್ ಕುಮಾರ್ ಕೂಜುಗೋಡು, ಶಿವಪ್ರಸಾದ್ ನಡುತೋಟ, ಜಯಪ್ರಕಾಶ್ ಕೂಜುಗೋಡು, ಚಂದ್ರಹಾಸ ಶಿವಾಲ, ಹಿಮ್ಮತ್.ಕೆ.ಸಿ, ವಿಜಯ ಕುಮಾರ್ ಅಂಙಣ, ಗಿರೀಶ್ ಪೈಲಾಜೆ, ರಾಜೇಶ್.ಎನ್.ಎಸ್, ನವೀನ್ ಕಟ್ರಮನೆ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಮಾಜಿ ಸಚಿವರಾದ ಎಸ್.ಅಂಗಾರ, ಹಾಲಿ ಶಾಸಕರಾದ ಭಾಗೀರಥಿ ಮುರುಳ್ಯ, ರಸ್ತೆ ಕಂಟ್ರಾಕ್ಟರ್ ಹರೀಶ್, ಇಂಜಿನಿಯರ್ ಪರಮೇಶ್ವರ ಇವರುಗಳನ್ನು ಸನ್ಮಾನಿಸಲಾಯಿತು.