ಪ್ರಕೃತಿಯು ತನ್ನ ಒಡಲಲ್ಲಿ ಹಲವಾರು ವಿಸ್ಮಯಗಳನ್ನು ವೈಶಿಷ್ಟ್ಯಗಳನ್ನು ತುಂಬಿಕೊಂಡಿದೆ. ಅದನ್ನು ನೋಡಿದಾಗಲೇ ಆ ವಿಸ್ಮಯಕಾರಿ ವಿಚಾರಗಳು ನಮಗೆ ಕಂಡುಬರುತ್ತದೆ. ಇಂತಹ ಅನೇಕ ವಿಸ್ಮಯಗಳು ಆಗಾಗ ಅಲ್ಲಲ್ಲಿ ಕಾಣಸಿಗುತ್ತವೆ. ಹಾಗೆನೆ ನಿನ್ನೆ ರಾತ್ರಿ ಕಲ್ಮಡ್ಕ ಗ್ರಾಮದ ರುಕ್ಮಯ್ಯ ಗೌಡರವರ ಮನೆಯಲ್ಲಿ ಅಪರೂಪದ ಚಿಟ್ಟೆಯೊಂದು ಗೋಚರಿಸಿದೆ. ಹೊರಗಿನಿಂದ ಲೈಟ್ ಬೆಳಕಿನ ಅಂದ ಸವಿಯಲು ಮನೆಯೊಳಗೆ ಲಗ್ಗೆ ಇಟ್ಟಿತು . ಎಲ್ಲೂ ನೋಡದ ಚಿಟ್ಟೆಯೊಂದು ಅತಿಥಿಯಾಗಿ ಬಂದ ಚಿಟ್ಟೆಯನ್ನು ನೋಡಿ ಅಚ್ಚರಿಗೊಂಡರು. ಮನೆಯೊಳಗೆ ಅತ್ತ ಇತ್ತ ಹಾರಾಡುತ್ತ ಸತತ ಒಂದು ಗಂಟೆ ನಂತರ ಮನೆಯ ಹೊರಗೆ ಹೊರಟು ಹೋಯಿತು.
ಪ್ರಕೃತಿಯಲ್ಲಿ ಅದೆಷ್ಟೊ ನಾವು ನೀವು ನೋಡದ ಅದ್ಭುತಗಳು , ವಿಸ್ಮಯಗಳು ಇವೆ. ಅವೆಲ್ಲ ಕಾಲಕ್ಕೆ ತಕ್ಕಂತೆ ಬೆಳಕಿಗೆ ಬರುತ್ತವೆ ಅಷ್ಟೆ.
✍️ ಭಾಸ್ಕರ ಜೋಗಿಬೆಟ್ಟು
- Thursday
- November 21st, 2024