

ಸೋಣಂಗೇರಿ ಬಳಿ ರಸ್ತೆಯೆನೋ ಉತ್ತಮವಾಗಿದೆ ಆದರೇ ಸವಾರರು ಎಚ್ಚರ ತಪ್ಪಿದರೇ ಅಪಾಯ ಕಟ್ಟಿಟ್ಟ ಬುತ್ತಿ. ಈಗಾಗಲೇ ಹಲವು ವಾಹನ ಸವಾರರು ಡಿವೈಡರ್ ಗೆ ಗುದ್ದಿ ಅಪಾಯದಿಂದ ಪಾರಾದ ಘಟನೆ ನಡೆದಿದೆ.
ಪೈಚಾರು, ಸೋಣಂಗೇರಿ ಜಾಲ್ಸೂರು ಕಡೆಯಿಂದ ಬರುವ ವಾಹನಗಳು ಜಂಕ್ಷನ್ ತಲುಪಿದಾಗ ತಬ್ಬಿಬ್ಬಾಗುವ ಪರಿಸ್ಥಿತಿ ಅಲ್ಲಿದೆ. ಅವೈಜ್ಞಾನಿಕ ಡಿವೈಡರ್ ನಿರ್ಮಾಣದಿಂದ ಎಲ್ಲೆಂದರಲ್ಲಿ ವಾಹನಗಳು ನುಗ್ಗಿ ಬರುತ್ತಿವೆ. ಅಪಘಾತಗಳು ಸಂಭವಿಸುವ ಮುನ್ನ ಇಲ್ಲಿ ಸರ್ಕಲ್ ನಿರ್ಮಾಣ ಮಾಡಬೇಕೆಂದು ನಾಗರಿಕರು ಒತ್ತಾಯಿಸಿದ್ದಾರೆ.