Ad Widget

ತೊಡಿಕಾನ : ಸಹಾಯಹಸ್ತ ಲೋಕಸೇವಾ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಸಹಾಯಧನ ವಿತರಣೆ

ಸಹಾಯಹಸ್ತ ಲೋಕಸೇವಾ ಚಾರಿಟೇಬಲ್ ಟ್ರಸ್ಟ್ ಇವರು ಸುಮಾರು 6 ವರುಷಗಳಿಂದ ದಾನಿಗಳ ಸಹಕಾರದಲ್ಲಿ ಹಲವಾರು ಬಡ ಜನರ ಕಷ್ಟಕ್ಕೆ ನೇರವಾಗುತ್ತಿದ್ದಾರೆ. ತೊಡಿಕಾನ ಶ್ರೀ ಮಲ್ಲಿಕಾರ್ಜುನ ದೇವರ ಹಾಗೂ ಪಂಜ ಶ್ರೀ ಪಂಚಲಿಂಗೇಶ್ವರ ದೇವರ ಜಾತ್ರಾ ಸಂದರ್ಭದಲ್ಲಿ ಜಲ ಶ್ರೀ ಪ್ರತಿಷ್ಠಾನ ಕಡ್ಲಾರು ಇವರ ಸಹಕಾರದಲ್ಲಿ ಅಶಕ್ತ ಕಲಾವಿದರಿಗೆ ನೆರವಾಗಲು ನಡೆಸಿದ ನಿಧಿ ಸಂಗ್ರಹ ಅಭಿಯಾನದಲ್ಲಿ ಸಂಗ್ರಹವಾದ ಮೊತ್ತವನ್ನು ಜೂ.12 ರಂದು ಸುಳ್ಯ ಸೀಮೆ ತೊಡಿಕಾನ ಶ್ರೀ ಮಲ್ಲಿಕಾರ್ಜುನ ದೇವರ ಸನ್ನಿದಾನದಲ್ಲಿ ಅಂಗವೈಕಲ್ಯದಿಂದ ಬಳಲುತ್ತಿರುವ ಚಿತ್ರಕಲಾವಿದ ಹರೀಶ್. ಕೆ ಅವರಿಗೆ ಸಹಾಯಧನವಾಗಿ 10200 ರೂ.ಗಳ ಚೆಕ್ಕನ್ನು ದೇವಸ್ಥಾನದ ಅಧ್ಯಕ್ಷರಾದ ಯು.ಎಮ್. ಕಿಶೋರ್ ರವರ ಸಮ್ಮುಖದಲ್ಲಿ ವಿತರಿಸಲಾಯಿತು. ಈ ವೇಳೆ ಟ್ರಸ್ಟಿನ ಅಧ್ಯಕ್ಷರಾದ ಡಿ. ಎಸ್. ಒಡ್ಯ, ಹಾಗೂ ಪದಾಧಿಕಾರಿಗಳು, ದೇವಸ್ಥಾನದ ಭಜನಾ ಮಂಡಳಿಯ ಅಧ್ಯಕ್ಷರಾದ ಚಂದ್ರಶೇಖರ, ಪತ್ರಕರ್ತ ತೇಜೇಶ್ವರ್ ಹಾಗೂ ಜಲ ಶ್ರೀ ಪ್ರತಿಷ್ಠಾನದ ನಿರಂಜನ್ ಕಡ್ಲಾರು, ಯುವ ಗಾಯಕಿ ಅಂಕಿತಾ ಆಚಾರ್ಯ ಕಡ್ಲಾರು ಹಾಗೂ ಕಾಳಿಕಾಂಬಾ ಗೊಂಬೆ ಬಳಗದ ರಜನೀಶ್ ಬರಿಮಾರು ಉಪಸ್ಥಿತರಿದ್ದರು. ಟ್ರಸ್ಟಿನ ಕಾರ್ಯದರ್ಶಿ ಮನೋಹರ್ ಪಲಯಮಜಲು ಸ್ವಾಗತಿಸಿ ಸಹಕಾರ ನೀಡುತ್ತಿರುವ ದಾನಿಗಳಿಗೆ ಹಾಗೂ ಸೇವಾಮಾಣಿಕ್ಯರಿಗೆ ಧನ್ಯವಾದ ಸಲ್ಲಿಸಿದರು.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading