Ad Widget

ಸುಳ್ಯ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘಕ್ಕೆ ಬೆಳ್ಳಿಹಬ್ಬದ ಸಂಭ್ರಮ : ಆಚರಣಾ ಸಮಿತಿಯ ಅಧ್ಯಕ್ಷರಾಗಿ ಗಂಗಾಧರ ‌ಮಟ್ಟಿ – ಕಾರ್ಯದರ್ಶಿಯಾಗಿ ದುರ್ಗಾಕುಮಾರ್ ನಾಯರ್ ಕೆರೆ

ಸುಳ್ಯ ತಾಲೂಕು ಕಾರ್ಯನಿತ ಪತ್ರಕರ್ತರ ಸಂಘಕ್ಕೆ 25 ವರ್ಷ ಗಳು ಪೂರ್ಣಗೊಂಡಿರುವ ಹಿನ್ನೆಲೆಯಲ್ಲಿ ಬೆಳ್ಳಿ ಹಬ್ಬ ಕಾರ್ಯಕ್ರಮವನ್ನು ಆಚರಿಸಲು ನಿರ್ಧರಿಸಲಾಗಿದ್ದು, ಕಾರ್ಯಕ್ರಮದ ಯಶಸ್ಸಿಗೆ ಸಮಿತಿ ರಚಿಸಲಾಗಿದೆ.
ಜು.19 ರಂದು ಮಾಧ್ಯಮ ವಿಚಾರ ಸಂಕಿರಣ, ಸುಳ್ಯ ಮೂಲದ ಪತ್ರಕರ್ತರ ಸಮ್ಮಿಲನ, ಸನ್ಮಾನ , ಸಾಂಸ್ಕೃತಿಕ ಸಹಿತ ಒಂದು ದಿನದ ಕಾರ್ಯಕ್ರಮ ಹಮ್ಮಿಕೊಳ್ಳಲು ನಿರ್ಧರಿಸಲಾಗಿದ್ದು, ವಿವಿಧ ಕ್ಷೇತ್ರಗಳ ಗಣ್ಯರು ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ.

. . . . . . . . .


ಬೆಳ್ಳಿ ಹಬ್ಬ ಸಮಿತಿ ಅಧ್ಯಕ್ಷರಾಗಿ ಹಿರಿಯ ಪತ್ರಕರ್ತ ಗಂಗಾಧರ ಮಟ್ಟಿ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ‌ ದುರ್ಗಾಕುಮಾರ್ ನಾಯರ್ ಕೆರೆ ಆಯ್ಕೆಗೊಂಡಿದ್ದಾರೆ.
ಇತ್ತೀಚೆಗೆ ಸುಳ್ಯ ಪ್ರೆಸ್ ಕ್ಲಬ್‌ನಲ್ಲಿ‌ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾದ ದಯಾನಂದ ಕೊರತ್ತೋಡಿಯವರ ಅಧ್ಯಕ್ಷತೆಯಲ್ಲಿ ಪೂರ್ವಭಾವಿ ಸಭೆ ನಡೆಯಿತು. ಸಂಘದ ಪ್ರಧಾನ ಕಾರ್ಯದರ್ಶಿ ಶಿವಪ್ರಸಾದ್ ಕೇರ್ಪಳ, ಖಜಾಂಜಿ ದಯಾನಂದ ಕಲ್ನಾರ್ ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಬೆಳ್ಳಿ ಹಬ್ಬ ಆಚರಣಾ ಸಮಿತಿ: ಅಧ್ಯಕ್ಷ – ಗಂಗಾಧರ ‌ಮಟ್ಟಿ, ಕಾರ್ಯದರ್ಶಿ – ದುರ್ಗಾಕುಮಾರ್ ನಾಯರ್ ಕೆರೆ, ಕೋಶಾಧಿಕಾರಿ – ಗಿರೀಶ್ ಅಡ್ಪಂಗಾಯ.‌
ಕಾರ್ಯಕ್ರಮ ಸಂಯೋಜನಾ ಸಮಿತಿಗೆ ಸಂಚಾಲಕರಾಗಿ ಗಂಗಾಧರ ಕಲ್ಲಪಳ್ಳಿ, ಸಹ ಸಂಚಾಲಕರಾಗಿ ದಯಾನಂದ ಕಲ್ನಾರ್, ಆಹಾರ ಸಮಿತಿಯ ಸಂಚಾಲಕರಾಗಿ ಜಯಪ್ರಕಾಶ್ ಕುಕ್ಕೆಟ್ಟಿ, ಸಹ ಸಂಚಾಲಕರಾಗಿ ಮುರಳೀಧರ ಅಡ್ಡನಪಾರೆ, ಆರ್ಥಿಕ ಸಮಿತಿಯ ಸಂಚಾಲಕರಾಗಿ ಕೃಷ್ಣ ಬೆಟ್ಟ, ಸಹ ಸಂಚಾಲಕರಾಗಿ ಜೆ.ಕೆ.ರೈ, ವೇದಿಕೆ, ಅಲಂಕಾರ, ಧ್ವನಿ ಸಮಿತಿಯ ಸಂಚಾಲಕರಾಗಿ ಲೋಕೇಶ್ ಪೆರ್ಲಂಪಾಡಿ, ಸಹ ಸಂಚಾಲಕರಾಗಿ ಪುಷ್ಪರಾಜ್‌ ಶೆಟ್ಟಿ, ಸಾಂಸ್ಕೃತಿಕ ಸಮಿತಿ ಸಂಚಾಲಕರಾಗಿ ಗಣೇಶ್ ಮಾವಂಜಿ, ಸಹ ಸಂಚಾಲಕರಾಗಿ ಪದ್ಮನಾಭ ಅರಂಬೂರು, ಸನ್ಮಾನ‌ ಸಮಿತಿಯ ಸಂಚಾಲಕರಾಗಿ ಹಸೈನಾರ್ ಜಯನಗರ, ಸಹ ಸಂಚಾಲಕರಾಗಿ ಪದ್ಮನಾಭ ಮುಂಡೋಕಜೆ, ಪ್ರಚಾರ ಸಮಿತಿ ಸಂಚಾಲಕರಾಗಿ ಸತೀಶ್ ಹೊದ್ದೆಟ್ಟಿ , ಸಹ ಸಂಚಾಲಕರಾಗಿ ಜಯದೀಪ್ ಕುದ್ಕುಳಿ, ಆತಿಥ್ಯ ಸಮಿತಿಯ ಸಂಚಾಲಕರಾಗಿ ಪ್ರಜ್ಞಾ ಎಸ್. ನಾರಾಯಣ್, ಸ್ವಯಂಸೇವಾ ಸಮಿತಿ ಸಂಚಾಲಕರಾಗಿ ಸುದೀಪ್ ಕೋಟೆಮಲೆ, ಸಹ ಸಂಚಾಲಕರಾಗಿ ತೇಜೇಶ್ವರ ಕುಂದಲ್ಪಾಡಿ ಯವರನ್ನು ಆಯ್ಕೆಮಾಡಲಾಯಿತು.

. . . . . . .

Discover more from ಅಮರ ಸುದ್ದಿ

Subscribe to get the latest posts sent to your email.

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading