Ad Widget

ಲೀಲಾಕುಮಾರಿ ತೊಡಿಕಾನರವರ ‘ ಹನಿಹನಿ ಇಬ್ಬನಿ’ ಹನಿಗವನ ಬಿಡುಗಡೆ

. . . . . . . . .

ಕುಶಾಲನಗರದ ಅನುಗ್ರಹ ಕಾಲೇಜಿನ ಕನ್ನಡ ಉಪನ್ಯಾಸಕಿ ಶ್ರೀಮತಿ ಲೀಲಾಕುಮಾರಿ ತೊಡಿಕಾನರವರ ‘ ಹನಿಹನಿ ಇಬ್ಬನಿ’ ಹನಿಗವನ ಸಂಕಲನ ಬಿಡುಗಡೆ ಜೂನ್ 10 ರಂದು ಅನುಗ್ರಹ ಕಾಲೇಜಿನಲ್ಲಿ ನಡೆಯಿತು. ದೀಪ ಬೆಳಗುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದ ಟಿ.ಪಿ.ರಮೇಶ್ ರವರು ಉದ್ಘಾಟಿಸಿ ಮಾತನಾಡಿ ಲೀಲಾಕುಮಾರಿಯವರ ಸಾಹಿತ್ಯ ಚಟುವಟಿಕೆಗಳನ್ನು ಕಳೆದ ಹತ್ತು ವರ್ಷದಿಂದ ಗಮನಿಸಿದ್ದೇನೆ.ಕೊಡಗಿನ ಅತ್ಯಂತ ಚಿಕ್ಕ ಗ್ರಾಮವಾದ ಚೆಂಬು ಗ್ರಾಮ ಅತಿ ಹೆಚ್ಚು ಕವಿಗಳನ್ನು ಕೊಟ್ಟ ಗ್ರಾಮ ಎನ್ನುತ್ತಾ ಲೀಲಾಕುಮಾರಿ ಸಾಹಿತ್ಯ ಲೋಕದಲ್ಲಿ ಹೆಜ್ಜೆ ಗುರುತು ಮೂಡಿಸುವ ಭರವಸೆಯನ್ನು ವ್ಯಕ್ತಪಡಿಸಿದರು.
ಕೊಡಗು ಜಿಲ್ಲಾ ಕಸಾಪದ ಅಧ್ಯಕ್ಷರಾದ ಶ್ರೀಎಂ.ಪಿ ಕೇಶವ ಕಾಮತ್ ರವರು ಪುಸ್ತಕ ಮುಖಪುಟದ ಪರದೆ ಸರಿಸುವ ಮೂಲಕ ಪುಸ್ತಕ ಬಿಡುಗಡೆ ಮಾಡಿ, ಲೀಲಾಕುಮಾರಿ ಕೊಡಗಿನ ಸಾಹಿತ್ಯ ಚಟುವಟಿಕೆಗಳಲ್ಲಿ ಹಲವಾರು ವರ್ಷಗಳಿಂದ ತೊಡಗಿಸಿಕೊಂಡಿದ್ದರ ಬಗ್ಗೆ ಸಂತಸ ವ್ಯಕ್ತಪಡಿಸಿದರು.

. . . . . . .

ಹನಹನಿ ಇಬ್ಬನಿ ಪುಸ್ತಕ ಪರಿಚಯ ಮಾಡಿದ ಕುಶಾಲನಗರದ ಚಿತ್ರಕಲಾ ಶಿಕ್ಷಕರಾದ ಉ.ರಾ ನಾಗೇಶರವರು ಡುಂಡಿರಾಜ್ ರವರ ಚುಟುಕುಗಳನ್ನು ಪ್ರಸ್ತಾಪಿಸಿ, ಡುಂಡಿರಾಜ್ ರವರ ಮುನ್ನುಡಿ ಹೊಂದಿದೆ ಎಂದರೆ ಕೃತಿಯ ಗುಣಮಟ್ಟ ಶ್ರೇಷ್ಠವಾಗಿದೆ ಎಂದರ್ಥ.ಕೃತಿಯಲ್ಲಿರುವ ಹಲವು ಹನಿಗವಿತೆಗಳು ನಾಲ್ಕು ಸಾಲನ್ನಷ್ಟೇ ಹೊಂದಿದ್ದರೂ ಹಲವು ಪುಟ ಬರೆಯುವಷ್ಟು ವಿಚಾರವನ್ನು ಸೃಷ್ಟಿಸುತ್ತದೆ ಎಂದು ಶಾಘಿಸಿದರು.

ಮುಖ್ಯ ಅತಿಥಿಯಾಗಿ ಆಗಮಿಸಿದ ಫ್ಯಾನ್ಸಿ ಮುತ್ತಣ್ಣರವರು ಮಾತನಾಡಿ ಲೀಲಾಕುಮಾರಿ ತೊಡಿಕಾನರು ಕವಿತೆಗೆ ಆಯ್ದುಕೊಳ್ಳುವ ವಸ್ತು ದಿನನಿತ್ಯ ಜೀವನದ ಭಾಗವೇ ಆಗಿದ್ದು, ಅಭಿವ್ಯಕ್ತಿಸುವ ರೀತಿ ಅತ್ಯದ್ಭುತವಾಗಿದೆ. ಎನ್ನುತ್ತಾ ಕುವೆಂಪು ಕಾವ್ಯ ಪುರಸ್ಕಾರ ತಂದುಕೊಟ್ಟ ಕವಿತೆಯ ಕುರಿತಾಗಿ ತಿಳಿಸಿದರು.
ಇನ್ನೊರ್ವ ಅತಿಥಿ ಶಿಕ್ಷಕಿ ಹಾಗೂ ಸಾಹಿತಿಯಾಗಿರುವ ಸುನೀತ ಕುಶಾಲನಗರ ಮಾತನಾಡಿ, ಕಡಿಮೆ ಪದಗಳಲ್ಲಿ ಹೆಚ್ಚಿನ ವಿಷಯವನ್ನು ಹೇಳಿದಾಗ ಕವಿತೆ ಗೆಲ್ಲುತ್ತದೆ.ಈ ನಿಟ್ಟಿನಲ್ಲಿ ಲೀಲಾಕುಮಾರಿಯವರ ಹನಿಗವಿತೆಗಳು ಯಶಸ್ಸು ಕಂಡಿವೆ ಎಂದರು.ಅನುಗ್ರಹ ಎಜುಕೇಶನಲ್ ಟ್ರಸ್ಟ್ ನ ಟ್ರಸ್ಟಿ ಹಾಗೂ ವಕೀಲರಾದ ಶ್ರೀ ನಾಗೇಂದ್ರ ಬಾಬುರವರು ಮಾತನಾಡಿ, ಮೊಬೈಲ್ ನ ವಾಟ್ಸಾಪ್ ಹಾವಳಿಯಿಂದಾಗಿ ಯುವಜನತೆ ಸಾಹಿತ್ಯದಿಂದ ವಿಮುಖರಾಗುವ ಬಗ್ಗೆ ಕಳವಳ ವ್ಯಕ್ತಪಡಿಸಿ, ಶಾಸ್ತ್ರೀಯ ಸಾಹಿತ್ಯ ರಚನೆಯಾಗಬೇಕಾದ ಅವಶ್ಯಕತೆ ಬಗ್ಗೆ ತಿಳಿಸಿದರು. ಸಮಾರಂಭಧ ಅಧ್ಯಕ್ಷತೆ ವಹಿಸಿದ ಕಾಲೇಜಿನ‌ ಪ್ರಾಂಶುಪಾಲರಾದ ಶ್ರೀ ಪಂಡರಿನಾಥ ನಾಯ್ಡುರವರು ಮಾತನಾಡಿ , ಯಾವುದೇ ಸಾಹಿತ್ಯದ ಮೂಲ ಒಲವು ಎಂಬುದನ್ನು ಬೇಂದ್ರೆಯವರ ಕವಿತೆಯ ಮೂಲಕ ತಿಳಿಸಿದರು.ವೇದಿಕೆಯಲ್ಲಿ ಅನುಗ್ರಹ ಎಜುಕೇಶನಲ್ ಟ್ರಸ್ಟ್ ನ ಸಹಕಾರ್ಯದರ್ಶಿ ಶ್ರೀಯುತ ಚಂದ್ರಶೇಖರರವರು ಉಪಸ್ಥಿತರಿದ್ದರು.ಕಾಲೇಜಿನ ಇತಿಹಾಸ ಉಪನ್ಯಾಸಕಿ ಶ್ರೀಮತಿ ಸೀಮಾರವರು ಲೇಖಕಿಯ ಪರಿಚಯ ಮಾಡಿದರು.ಕಾಲೇಜಿನ ವಿದ್ಯಾರ್ಥಿ ವಿನಯಪ್ರಕಾಶ್ ಪ್ರಾರ್ಥಿಸಿದರು.ಕಾಲೇಜಿನ ವಾಣಿಜ್ಯ ವಿಭಾಗದ ಉಒನ್ಯಾಸಕರಾದ ನೌಷದ್ ಕಾರ್ಯಕ್ರಮವನ್ನು ನಿರೂಪಿಸಿದರು.ಲೇಖಕಿ,‌ಉಪನ್ಯಾಸಕಿ ಲೀಲಾಕುಮಾರಿ ತೊಡಿಕಾನರವರು ವಂದಿಸಿದರು. ಸಭಾಕಾರ್ಯಕ್ರಮದ ನಂತರ ಸುಳ್ಯದ ಮಿಮಿಕ್ರಿ ಕಲಾವಿದ ಶ್ರೀ ಪಟ್ಟಾಭಿರಾಮರವರಿಂದ ಮನೋರಂಜನಾ ಕಾರ್ಯಕ್ರಮ‌ ನಡೆಯಿತು.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading