
ದಿನಾಂಕ 10-6-23ನೇ ಶನಿವಾರದಂದು ಶಾಲಾ ಮಂತ್ರಿಮಂಡಲ ರಚನೆಯನ್ನು ಚುನಾವಣೆ ಯ ಮೂಲಕ ನಡೆಸಲಾಯಿತು. ವಿದ್ಯಾರ್ಥಿಗಳಿಗೆ ನಾಮಪತ್ರ ಸಲ್ಲಿಕೆ,ನಾಮಪತ್ರ ಹಿಂತೆಗೆತ,ಮತಪ್ರಚಾರ,ಮತದಾನ,ಮತಎಣಿಕೆ ಹಂತಗಳನ್ನು ಅನುಸರಿಸಿ ಚುನಾವಣೆ ನಡೆಸಲಾಯಿತು. ಎಲ್ಲಾ ವಿದ್ಯಾರ್ಥಿಗಳು ಆಸಕ್ತಿಯಿಂದ ಭಾಗವಹಿಸಿದರು. ಮುಖ್ಯಗುರುಗಳಾದ ಶ್ರೀ ಕುಶಾಲಪ್ಪ ಪಾರೆಪ್ಪಾಡಿ ಇವರು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು. ಅಶ್ವಿತ್ ಕೆ ಇವರು ಶಾಲಾ ಮುಖ್ಯಮಂತ್ರಿಯಾಗಿ,ಜನನಿ ಕೆ.ಪಿ. ಉಪಮುಖ್ಯಮಂತ್ರಿ ಆಗಿ ಆಯ್ಕೆ ಆದರು.. ಈ ಸಂದರ್ಭದಲ್ಲಿ ಅತಿಥಿ ಶಿಕ್ಷಕರಾದ ಶ್ರೀಮತಿ ಅಪೂರ್ವ ಚೇತನ್ ಕುಮಾರ್ ಇದ್ದರು.