ಸುಬ್ರಹ್ಮಣ್ಯ: ಇಂದಿನ ಮಕ್ಕಳು ಮುಂದಿನ ಶ್ರೇಷ್ಠ ಪ್ರಜೆಗಳು.ಪದವಿಪೂರ್ವ ಶಿಕ್ಷಣವು ವಿದ್ಯಾರ್ಥಿಗಳ ಮಹತ್ತರವಾದ ಘಟ್ಟ.ಈ ಹಂತದಲ್ಲಿ ಶಿಸ್ತು ಮತ್ತು ಪರಿಶ್ರಮದ ಅಧ್ಯಯನಕ್ಕೆ ಮನಮಾಡಿದರೆ ಬದುಕಿನಲ್ಲಿ ಶ್ರೇಷ್ಠ ಜ್ಞಾನ ಸಂಪಾದಿಸುವುದು ಖಂಡಿತಾ. ವಿದ್ಯಾರ್ಥಿಗಳು ಗುರಿಯುಕ್ತ ಜ್ಞಾನಾರ್ಜನೆಯ ಚಿಂತನೆ ಮಾಡಿದರೆ ಭವಿಷ್ಯ ಉಜ್ವಲವಾಗುತ್ತದೆ. ಅತ್ಯಂತ ಶ್ರೇಷ್ಠವಾದ ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಾಲಯದ ವಿದ್ಯಾಸಂಸ್ಥೆಯಲ್ಲಿ ಅಧ್ಯಾಯನ ಮಾಡುವುದು ಪುಣ್ಯ.ಅಂತಹ ಭಾಗ್ಯ ತಮಗೆ ಲಭಿಸಿರುವುದು ಸಂತಸಕರ ಎಂದು ಎಸ್‌ಎಸ್‌ಪಿಯು ಕಾಲೇಜಿನ ಪ್ರಾಚಾರ್ಯ ಸೋಮಶೇಖರ ನಾಯಕ್ ಹೇಳಿದರು. ಕುಕ್ಕೆಶ್ರೀ ಸುಬ್ರಹ್ಮಣ್ಯ ದೇವಾಲಯದ ಆಡಳಿತಕ್ಕೊಳಪಟ್ಟ ಶ್ರೀ ಸುಬ್ರಹ್ಮಣ್ಯೇಶ್ವರ ಪದವಿಪೂರ್ವ ಕಾಲೇಜಿನಲ್ಲಿ ಶನಿವಾರ ಪ್ರಥಮ ಪಿಯುಸಿ ವಿದ್ಯಾರ್ಥಿಗಳಿಗಾಗಿ ನಡೆದ ಮಾಹಿತಿ ಕಾರ್ಯಾಗಾರದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಐದು ದಶಕಗಳ ಇತಿಹಾಸವಿರುವ ಈ ಸಂಸ್ಥೆಯಲ್ಲಿ ಅಧ್ಯಾಯನ ಮಾಡಿದ ಅಸಂಖ್ಯಾತರು ಅತ್ಯಂತ ಶ್ರೇಷ್ಠವಾದ ಸ್ಥಾನವನ್ನು ಸಂಪಾದಿಸಿದ್ದಾರೆ.ಇದು ಶ್ರೀ ದೇವರ ಆಶೀರ್ವಾದ ಮತ್ತು ಪರಿಶ್ರಮದಿಂದ ಸಾಧ್ಯವಾಗಿದೆ.ಪ್ರಸ್ತುತ ಅಧ್ಯಾಯನ ಮಾಡಲು ನೂತನ ಆಗಮಿಸಿರುವ ನೀವುಗಳು ಶ್ರದ್ಧೆ, ನಿಷ್ಠೆ, ಶಿಸ್ತು ಮತ್ತು ಭಕ್ತಿಯಿಂದ ಜ್ಞಾನಾರ್ಜನೆ ಮಾಡಿ ಎಂದು ಸಲಹೆ ನೀಡಿದರು. ಹಿರಿಯ ಉಪನ್ಯಾಸಕಿ ರೇಖಾರಾಣಿ ಸೋಮಶೇಖರ್, ಉಪನ್ಯಾಸಕರಾದ ಗಿರೀಶ್, ಶ್ರೀಧರ್ ಪುತ್ರನ್, ಯೋಗಣ್ಣ ಎಂ.ಎಸ್, ಜ್ಯೋತಿ.ಪಿ.ರೈ, ಸವಿತಾ ಕೈಲಾಸ್ ಮಾಹಿತಿ ನೀಡಿದರು. ಉಪನ್ಯಾಸಕರಾದ ಮನೋಜ್ ಕುಮಾರ್ ಬಿ.ಎಸ್,ರತ್ನಾಕರ ಸುಬ್ರಹ್ಮಣ್ಯ, ಪ್ರವೀಣ್.ಜೆ, ಭವ್ಯಶ್ರೀ ಕುಲ್ಕುಂದ, ಸುಧಾ, ಪೂರ್ಣಿಮಾ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಉಪನ್ಯಾಸಕ ಜಯಪ್ರಕಾಶ್ ಸ್ವಾಗತಿಸಿದರು.ಪ್ರಜ್ವಲ್.ಜೆ ವಂದಿಸಿದರು.ಶೃತಿ ಕಾರ್ಯಕ್ರಮ ನಿರೂಪಿಸಿದರು.
- Thursday
- November 21st, 2024