Ad Widget

ಸುಳ್ಯ : ಎನ್ನೆoಪಿಯುಸಿಯಲ್ಲಿ ವಿಶ್ವ ಪರಿಸರ ದಿನಾಚರಣೆ

ನಾವು ಪರಿಸರಕ್ಕೆ ಪೂರಕವಾದ ರೀತಿಯಲ್ಲಿ ಬದುಕಬೇಕು. ಭೂಮಿಯಲ್ಲಿ ತಾಪಮಾನ ಹೆಚ್ಚುತ್ತಿದ್ದು,ದಟ್ಟ ಕಾಡಿನಲ್ಲಿ ಗಿಡಗಳು ಸುಟ್ಟು ಹೋಗುತ್ತಿದೆ , ಪರಿಸರ ಕಾಳಜಿ ಪ್ರಾಯೋಗಿಕವಾಗಿ ಆಗಬೇಕಿದೆ.ಪ್ಲಾಸ್ಟಿಕ್ ನಿರ್ಮೂಲನೆಯಾಗಬೇಕು ಎಂದು ಸುಳ್ಯ ನೆಹರು ಮೆಮೋರಿಯಲ್ ಪದವಿ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥರಾದ ಪ್ರೊ ಸಂಜೀವ ಕುದ್ಪಾಜೆ ಹೇಳಿದರು. ಅವರು ಸುಳ್ಯ ನೆಹರು ಮೆಮೋರಿಯಲ್ ಪ.ಪೂ ಕಾಲೇಜಿನ ವಿಜ್ಞಾನ ವಿಭಾಗದ ವತಿಯಿಂದ...

ಗುರಿಯುಕ್ತ ಜ್ಞಾನಾರ್ಜನೆಯ ಚಿಂತನೆಯಿಂದ ವಿದ್ಯಾರ್ಥಿಗಳ ಭವಿಷ್ಯ ಉಜ್ವಲ ಎಸ್‌ಎಸ್‌ಪಿಯು ಕಾಲೇಜಿನಲ್ಲಿ ನಡೆದ ಮಾಹಿತಿ ಕಾರ್ಯಾಗಾರದಲ್ಲಿ ಪ್ರಾಚಾರ್ಯ ಸೋಮಶೇಖರ ನಾಯಕ್ ಅಭಿಮತ

ಸುಬ್ರಹ್ಮಣ್ಯ: ಇಂದಿನ ಮಕ್ಕಳು ಮುಂದಿನ ಶ್ರೇಷ್ಠ ಪ್ರಜೆಗಳು.ಪದವಿಪೂರ್ವ ಶಿಕ್ಷಣವು ವಿದ್ಯಾರ್ಥಿಗಳ ಮಹತ್ತರವಾದ ಘಟ್ಟ.ಈ ಹಂತದಲ್ಲಿ ಶಿಸ್ತು ಮತ್ತು ಪರಿಶ್ರಮದ ಅಧ್ಯಯನಕ್ಕೆ ಮನಮಾಡಿದರೆ ಬದುಕಿನಲ್ಲಿ ಶ್ರೇಷ್ಠ ಜ್ಞಾನ ಸಂಪಾದಿಸುವುದು ಖಂಡಿತಾ. ವಿದ್ಯಾರ್ಥಿಗಳು ಗುರಿಯುಕ್ತ ಜ್ಞಾನಾರ್ಜನೆಯ ಚಿಂತನೆ ಮಾಡಿದರೆ ಭವಿಷ್ಯ ಉಜ್ವಲವಾಗುತ್ತದೆ. ಅತ್ಯಂತ ಶ್ರೇಷ್ಠವಾದ ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಾಲಯದ ವಿದ್ಯಾಸಂಸ್ಥೆಯಲ್ಲಿ ಅಧ್ಯಾಯನ ಮಾಡುವುದು ಪುಣ್ಯ.ಅಂತಹ ಭಾಗ್ಯ...
Ad Widget

ಸುಳ್ಯ :ಸಹಕಾರಿ ಯೂನಿಯನ್ ವತಿಯಿಂದ ಭಾಗೀರಥಿ ಮುರುಳ್ಯರಿಗೆ ಅಭಿನಂದನೆ

ಸುಳ್ಯ ತಾಲೂಕು ಸಹಕಾರಿ ಯೂನಿಯನ್ ವತಿಯಿಂದ ನೂತನ ಶಾಸಕಿಯಾಗಿ ಆಯ್ಕೆಯಾದ ಭಾಗೀರಥಿ ಮುರುಳ್ಯ ರವರಿಗೆ ಅಭಿನಂದನಾ ಸಮಾರಂಭ ಕಾರ್ಯಕ್ರಮವು ಎ. ಪಿ. ಎಂ. ಸಿ. ಸಭಾಂಗಣ ಇಂದು ನಡೆಯಿತು.

ನವೀನ್ ಚಂದ್ರ ಜೋಗಿ ಸುಳ್ಯ ಸರ್ಕಲ್ ಇನ್ಸ್ ಪೆಕ್ಟರ್ ಆಗಿ ಮರು ವರ್ಗಾವಣೆ

ವಿಧಾನ ಸಭಾ ಚುನಾವಣಾ ಹಿನ್ನೆಲೆಯಲ್ಲಿ ವರ್ಗಾವಣೆಗೊಂಡಿದ್ದ ಸರ್ಕಲ್ ಇನ್ಸ್ ಪೆಕ್ಟರ್ ಮತ್ತು ಸಬ್ ಇನ್ಸ್ ಪೆಕ್ಟರ್ ಗಳನ್ನು ಮೊದಲಿದ್ದ ಠಾಣೆಗೆ ಮರು ವರ್ಗಾಯಿಸಿ ಸರಕಾರ ಆದೇಶ ಹೊರಡಿಸಿದ್ದು ಚಿಕ್ಕ ಮಗಳೂರು ವೃತ್ತಕ್ಕೆ ವರ್ಗಾವಣೆಗೊಂಡಿದ್ದ ನವೀನ್ ಚಂದ್ರ ಜೋಗಿಯವರು ಮತ್ತೆ ಸುಳ್ಯ ವೃತ್ತಕ್ಕೆ ವರ್ಗಾವಣೆಗೊಂಡಿದ್ದಾರೆ.ಕಡಬ ಠಾಣೆಯಿಂದ ಪುಂಜಾಲಕಟ್ಟೆಗೆ ವರ್ಗಾವಣೆಗೊಂಡಿದ್ದ ಆಂಜನೇಯ ರೆಡ್ಡಿಯವರಿಗೆ ಮತ್ತೆ ಕಡಬ ಠಾಣೆಗೆ ವರ್ಗಾವಣೆಯಾಗಿದೆ.

ಅಂಬೇಡ್ಕರ್ ರಕ್ಷಣಾ ವೇದಿಕೆಯ ವತಿಯಿಂದ ಬಡ ಮಕ್ಕಳಿಗೆ ಪುಸ್ತಕ ವಿತರಣೆ

ಅಂಬೇಡ್ಕರ್ ರಕ್ಷಣಾ ವೇದಿಕೆಯ ವತಿಯಿಂದ ಬಡ ವಿದ್ಯಾರ್ಥಿಗಳಿಗೆ ಪುಸ್ತಕ ವಿತರಣೆ ಜೂ.4 ರಂದು ಅಡ್ತಲೆ ಸ.ಹಿ.ಪ್ರಾ.ಶಾಲೆಯಲ್ಲಿ ನಡೆಯಿತು. ನಿವೃತ್ತ ಮಾಜಿ ಸೈನಿಕರಾದ ಕಮಲಾಕ್ಷಯವರು ಕಾರ್ಯಕ್ರಮ ಉದ್ಘಾಟಿಸಿ, ಸುಮಾರು 20 ಬಡ ವಿದ್ಯಾರ್ಥಿಗಳಿಗೆ ಪುಸ್ತಕ ವಿತರಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಿಲ್ಲಾಧ್ಯಕ್ಷರಾದ ಪಿ.ಸುಂದರ ಪಾಟಾಜೆ ವಹಿಸಿ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು. ಕರ್ನಾಟಕ ರಕ್ಷಣಾ ವೇದಿಕೆ...

ಕಲ್ಮಡ್ಕ : ಅವೈಜ್ಞಾನಿಕ ಕಾಮಗಾರಿಯಿಂದ ಮೊದಲ ಮಳೆಗೆ ಕೊಚ್ಚಿ ಹೋದ ಮನೆ ನಿವೇಶನ

ದೇಶದ ಪ್ರತಿಯೊಬ್ಬ ಪ್ರಜೆಗೂ ನಿವೇಶನ ಕಲ್ಪಿಸುವುದು ಸರಕಾರದ ಮಹತ್ವದ ಯೋಜನೆ. ಈ ಯೋಜನೆಯ ಅಡಿಯಲ್ಲಿ ಕಲ್ಮಡ್ಕ ಗ್ರಾಮ ಪಂಚಾಯತಿ ವ್ಯಾಪ್ತಿಗೆ ಸೇರಿದ ನಿಂತಿಕಲ್ಲು ಸಮೀಪ ಕಾಪಡ್ಕ ಎಂಬಲ್ಲಿ ಫಲಾಭವಿಗಳಿಗೆ ನಿವೇಶನ ಕಲ್ಪಿಸಲಾಗಿದೆ. ಆದರೆ ಕೈಗೆ ಬಂದ ತುತ್ತು ಬಾಯಿಗೆ ಬಾರದು ಎಂಬಂತೆ ಈ ನಿವೇಶನ ಮೊದಲ ಮಳೆಗೆ ಹಾಕಿದ ಮಣ್ಣೆಲ್ಲಾ ಕೊಚ್ಚಿ ಹೋಗಿದೆ . ಈ...

ವಳಲಂಬೆ : ಬಸ್ ನಿಲ್ದಾಣದ ಮೇಲೆ ಬಿದ್ದಿದ್ದ ಮರದ ಗೆಲ್ಲು ತೆರವು

ಗುತ್ತಿಗಾರು ಗ್ರಾಮದ ವಳಲoಬೆ ಯಲ್ಲಿ ಇರುವ ಕಡ್ತಲ್ ಕಜೆ ಬಸ್ ತಂಗುದಾಣ ದ ಮೇಲೆ ಗಾಳಿ ಮಳೆಗೆ ಮರ ವೊಂದು ಬಿದ್ದು ದರಿಂದ,ಅದನ್ನು ಕಾಂಗ್ರೆಸ್ ಕಾರ್ಯಕರ್ತರು ತೆರವು ಗೊಳಿಸಿದರು, ಈ ಸಂದರ್ಭದಲ್ಲಿ ಸನತ್ ಮುಳುಗಾಡು, ಪರಮೇಶ್ವರ್ ಚಣಿಲ ಕೇಶವ ಹೊಸೋಳಿಕೆ ರಂಜಿತ್, ಸುರೇಶ್, ರವಿ ಪೈಕ, ಲಕ್ಷಣ ಆಚಾರಿ,ಮೊದಲಾದ ವರು ಇದ್ದರು

ಅರಂತೋಡು – ಅಡ್ತಲೆ ರಸ್ತೆ ಅಭಿವೃದ್ಧಿಗೆ ಅನುದಾನ ಜೂ.10: ಮಾಜಿ ಸಚಿವ ಎಸ್.ಅಂಗಾರರಿಗೆ ಸನ್ಮಾನ

ಅರಂತೋಡು – ಅಡ್ತಲೆ ರಸ್ತೆ ಅಭಿವೃದ್ಧಿಗಾಗಿ ಮಾಜಿ ಶಾಸಕ ಹಾಗೂ ಸಚಿವ ಎಸ್.ಅಂಗಾರರು ಅನುದಾನ ಒದಗಿಸಿ 3.9 ಕಿ.ಮೀ. ರಸ್ತೆ ಅಭಿವೃದ್ಧಿಗೊಳಿಸಿದ್ದಾರೆ. ಅದಕ್ಕಾಗಿ ಅಡ್ತಲೆ ನಾಗರಿಕ ಹಿತರಕ್ಷಣಾ ವೇದಿಕೆ ಹಾಗೂ ಊರವರು ಸೇರಿ ಜೂ.10ರಂದು ಮಾಜಿ ಸಚಿವ ಎಸ್.ಅಂಗಾರರಿಗೆ ನಾಗರಿಕ ಸನ್ಮಾನ ಏರ್ಪಡಿಸಿದ್ದು, ಜತೆಗೆ ರಸ್ತೆ ಅಭಿವೃದ್ಧಿಗೆ ಸಹಕರಿಸಿದ ಪ್ರತಿಯೊಬ್ಬರಿಗೂ ಗೌರವ ಸಲ್ಲಿಸಲಿದ್ದೆವೆಂದು ಅಡ್ತಲೆ ನಾಗರಿಕ...

ಪಾಲಡ್ಕ : ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಕಾರು

ಮಾಣಿ ಮೈಸೂರು ರಾಷ್ಟ್ರೀಯ ಹೆದ್ದಾರಿಯ ಪಾಲಡ್ಕ ಬಳಿ ಟೂರಿಸ್ಟ್ ಕಾರೊಂದು ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಘಟನೆ ಇಂದು ಮುಂಜಾನೆ ನಡೆದಿದೆ. ಈ ಘಟನೆಯಿಂದ ವಿದ್ಯುತ್ ಕಂಬ ಮುರಿದಿದ್ದು, ಕಾರಿನಲ್ಲಿದ್ದ ಹುಣಸೂರು ಮೂಲದ ಪ್ರಯಾಣಿಕರು ಅಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ.

ಪ್ರಕೃತಿ ಕಾಳಜಿ ಮಾಡೋಣ ಬನ್ನಿ

ಪರಿಸರವು ಪ್ರತಿಯೊಂದು ಜೀವರಾಶಿಗೆ ಅತ್ಯಂತ ಅಮೂಲ್ಯವಾದ ಕೊಡುಗೆಯಾಗಿದೆ. ಪರಿಸರದಲ್ಲಿನ ಗಾಳಿ,ನೀರು, ಮಣ್ಣು,ಮರಗಳು, ಕಾಡುಗಳು,ಸಾಗರಗಳು ಇತ್ಯಾದಿಗಳನ್ನು ಎಂದೆಂದಿಗೂ ಇತ್ಯಾದಿಗಳನ್ನು ಎಂದೆಂದಿಗೂ ಉಳಿಸುವುದು ಮುಖ್ಯವಾಗಿದೆ. ನಾವುಗಳು ಅವಲಂಬಿ ಅವಲಂಬಿತವಾಗಿಸಿರುವ ಈ ಪರಿಸರವನ್ನು ಯುಗ ಯುಗಗಳವರೆಗೂ ಉಳಿಸಬೇಕಿದೆ. ಜೀವ ರಾಶಿಗಳ ರಕ್ಷಣೆ ಪೋಷಣೆಗೆ ತನ್ನೆಲ್ಲಾವನ್ನು ನೀಡಿದ ಭೂಮಿ ಇಂದು ಬರಿದಾಗುತ್ತಿದೆ. ತನ್ನೊಡಲಲ್ಲಿ ಬೆಂಕಿಯ ಕೆಂಡವನ್ನೇ ಆವರಿಸಿದರೂ ನಮ್ಮನ್ನು ಇಂದಿಗೂ ತಂಪು...
Loading posts...

All posts loaded

No more posts

error: Content is protected !!