
ಅಚ್ರಪ್ಪಾಡಿ ಸ. ಕಿ. ಪ್ರಾ. ಶಾಲೆ ಮೇ.31ರಂದು ಶಾಲಾ ಪ್ರಾರಂಭೋತ್ಸವ ಕಾರ್ಯಕ್ರಮವನ್ನು ವಸಂತ ಬೊಳ್ಳಾಜೆ ಶಾಲಾ ಹಿತರಕ್ಷಣಾ ಸಮಿತಿಯ ಅಧ್ಯಕ್ಷರು ಇವರ ಅಧ್ಯಕ್ಷತೆಯಲ್ಲಿ ಶಾಲಾ ವಿದ್ಯಾರ್ಥಿಗಳನ್ನು ಆರತಿ ಮಾಡಿ, ಹೂ ನೀಡುವುದರ ಮೂಲಕ ಪ್ರೀತಿಯಿಂದ ಶಾಲೆಗೆ ಶಾಲಾ ಪೋಷಕರು ಬರಮಾಡಿಕೊಂಡರು. ತದನಂತರ ಶಾಲಾ ಹಿತರಕ್ಷಣಾ ಸಮಿತಿಯ ಅಧ್ಯಕ್ಷರು ಶ್ರೀಯುತ ವಸಂತ ಬೊಳ್ಳಾಜೆ ದೀಪ ಬೆಳಗಿ ಕಾರ್ಯಕ್ರಮ ಉದ್ಘಾಟಿಸಿ ಶೈಕ್ಷಣಿಕ ವರ್ಷಕ್ಕೆ ಶುಭ ಕೋರಿದರು. ಶಾಲಾ ಮುಖ್ಯ ಶಿಕ್ಷಕಿ ಶ್ರೀಮತಿ ಶ್ವೇತಾ ಕೆ. ಎಲ್ಲರನ್ನು ಸ್ವಾಗತಿಸಿ “ಗುಣಾತ್ಮಕ ಶೈಕ್ಷಣಿಕ ವರ್ಷ” ಕುರಿತು ಮಾಹಿತಿ ನೀಡಿದರು. ಶಾಲಾ ಪೋಷಕರಾದ ಶ್ರೀ.ಪ್ರೀತೇಶ್ ಹಾಗೂ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿಕೊಂಡಿದ್ದ ಶ್ರೀ. ವಸಂತ ಬೊಳ್ಳಾಜೆ ಮಕ್ಕಳಿಗೆ ಹಾಗೂ ಶಿಕ್ಷಕರಿಗೆ ಶುಭ ಕೋರಿ ಇಲಾಖೆಯಿಂದ ನೀಡಿದ ಸಮವಸ್ತ್ರ ಹಾಗೂ ಪಠ್ಯಪುಸ್ತಕಗಳನ್ನು ಮಕ್ಕಳಿಗೆ ವಿತರಿಸಿದರು. ಮಧ್ಯಾಹ್ನದ ಭೋಜನಕ್ಕೆ SDMC ಅಧ್ಯಕ್ಷರು ಶ್ರೀ. ಜನಾರ್ಧನ ವಿದ್ಯಾರ್ಥಿಗಳಿಗೆ ಹಾಗೂ ಪೋಷಕರಿಗೆ ಪಾಯಸ ಊಟದ ವ್ಯವಸ್ಥೆ ಮಾಡಿದರು.