Ad Widget

ನಿವೃತ್ತರಾದ ಹಾಲವ್ವರಿಗೆ ಕುಕ್ಕೆ ದೇವಳದ ವತಿಯಿಂದ ಬೀಳ್ಕೊಡುಗೆ

ಸುಬ್ರಹ್ಮಣ್ಯ: ದೇವಳದಲ್ಲಿ ಕರ್ತವ್ಯ ನಿರ್ವಹಿಸಲು ಅವಕಾಶ ದೊರಕುವುದು ಭಾಗ್ಯ. ಇಂತಹ ಪುಣ್ಯದ ಕಾರ್ಯವನ್ನು ಕಾರ್ಯತತ್ಪರತೆ ಮತ್ತು ನಿಷ್ಠಾವಂತಿಕೆಯಿಂದ ನೆರವೇರಿಸಿದರೆ ಭಗವಂತನ ಕೃಪೆ ಬದುಕಿನಾದ್ಯಂತ ಇರುತ್ತದೆ.ವೃತ್ತಿ ಮತ್ತು ನಿವೃತ್ತಿಯು ಒಂದೇ ನಾಣ್ಯದ ಎರಡು ಮುಖಗಳು ಇವೆರಡನ್ನು ಸಮ ಪ್ರಯಾಣದಲ್ಲಿ ಅನುಭವಿಸಿದರೆ ಜೀವನ ಪಾವನ. ಶ್ರೀ ದೇವಳದಲ್ಲಿ ಸೇವೆ ಸಲ್ಲಿಸಿದ ಹಾಲವ್ವ ಅವರ ಸೇವಾಕಾಂಕ್ಷಿತ್ವವು ಸರ್ವರಿಗೂ ಮಾದರಿ.ತಮಗೆ ವಹಿಸಿದ ಕೆಲಸ ಕಾರ್ಯಗಳನ್ನು ನಿಷ್ಠೆಯಿಂದ ನೆರವೇರಿಸುತ್ತಾ ಬರುವವರು ಸದಾ ಸಹೋದ್ಯೋಗಿಗಳ ಮನಸಿನಲ್ಲಿ ಹಸಿರಾಗಿರುತ್ತಾರೆ ಎಂದು ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ಡಾ.ನಿಂಗಯ್ಯ ಹೇಳಿದರು. ಶ್ರೀ ದೇವಳದ ನೌಕರ ಸಂಘದ ವತಿಯಿಂದ ಬುಧವಾರ ನಿವೃತ್ತರಾದದೇ ದೇವಳದ ಸಿಬ್ಬಂದಿ ಹಾಲವ್ವ ಅವರಿಗೆ ಶ್ರೀ ದೇವಳದ ಆಡಳಿತ ಕಚೇರಿ ಮೇಲ್ಮಹಡಿ ಸಭಾಂಗಣದಲ್ಲಿ ನಡೆದ ಬೀಳ್ಕೊಡುಗೆ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಭಗವಂತನ ಸೇವೆಯೊಂದಿಗೆ ಕ್ಷೇತ್ರಕ್ಕೆ ಆಗಮಿಸುವ ಭಕ್ತರ ಅನುಕೂಲತೆಗೆ ಪೂರಕವಾದ ಕರ್ತವ್ಯ ನೆರವೇರಿಸಲು ದೇವಳಗಳಲ್ಲಿ ಮಾತ್ರ ಸಾಧ್ಯ. ಕರ್ತವ್ಯ ನಿಷ್ಠೆಯ ಸೇವೆಯು ಸದಾ ಭಗವಂತನಿಗೆ ಪ್ರೀಯವಾಗಿರುತ್ತದೆ ಎಂದರು. ಬೀಳ್ಕೊಡುಗೆ: ಸಮಾರಂಭದಲ್ಲಿ ನಿವೃತ್ತರಾದ ಹಾಲವ್ವ ಅವರನ್ನು ಕಾರ್ಯನಿರ್ವಹಣಾಧಿಕಾರಿಗಳು ಗೌರವಿಸಿ ಸನ್ಮಾನಿಸಿದರು. ಈ ಸಂದರ್ಭ ವೇದಿಕೆಯಲ್ಲಿ ದೇವಳದ ಅಧೀಕ್ಷಕ ಪದ್ಮನಾಭ ಶೆಟ್ಟಿಗಾರ್ ಉಪಸ್ಥಿತರಿದ್ದರು. ಸುಧಾಕರ ಎಸ್.ಕೆ, ರಾಜಲಕ್ಷ್ಮೀ ಶೆಟ್ಟಿಗಾರ್, ಪುರುಷೋತ್ತಮ್ ಅನಿಸಿಕೆ ವ್ಯಕ್ತಪಡಿಸಿದರು. ದೇವಳದ ಸಿಬ್ಬಂದಿ ಯೋಗೀಶ್ ಸ್ವಾಗತಿಸಿದರು. ಸುಜಾತಾ ಮತ್ತು ಅರ್ಪಿತಾ ಪ್ರಾರ್ಥನೆ ಹಾಡಿದರು.ಮಹೇಶ್ ಕುಮಾರ್ ಎಸ್ ಪರಿಚಯಿಸಿದರು. ರಾಜಲಕ್ಷ್ಮೀ ಶೆಟ್ಟಿಗಾರ್ ವಂದಿಸಿದರು.ನಿಷ್ಠಾವಂತಿಕೆಯ ಸೇವೆ: ಹಾಲವ್ವ ಅವರು ಪ್ರಸ್ತುತ ಜಮಾ ಉಗ್ರಾಣ ಸಹಾಯಕಿಯಾಗಿ ಸೇವೆ ಸಲ್ಲಿಸುತ್ತಿದ್ದರು.೧೯೯೨ರಿಂದ ಸೇವೆ ಆರಂಭಿಸಿದ ಇವರು ಜೂ.೧ ೨೦೦೭ರಲ್ಲಿ ಖಾಯಂಮಾತಿಗೊಂಡು ಮೇ.೩೧ರಂದು ನಿವೃತ್ತರಾದರು. ತಮ್ಮ ಸೇವಾವಧಿಯಲ್ಲಿ ಇವರು ಜಮಾ ಉಗ್ರಾಣ ಸೇರಿದಂತೆ, ಭೋಜನಶಾಲೆ, ವಸತಿಗೃಹಗಳು, ದೇವಳದ ಕೃಷಿ ತೋಟದಲ್ಲಿ ಸಹಾಯಕಿಯಾಗಿ ಕರ್ತವ್ಯ ನಿರ್ವಹಿಸಿದ್ದರು. ಸೇವಾಕೈಂಕರ್ಯ ನೆರವೇರಿಸಿದ ಹಾಲವ್ವ ಅವರಿಗೆ ನೌಕರರ ವೃಂದದ ವತಿಯಿಂದ ಬೀಳ್ಕೊಡುಗೆ ಸಮಾರಂಭ ನಡೆಯಿತು.

. . . . . . .

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!