Ad Widget

ಪಳ್ಳಿಮಜಲು ಬೂತ್ ಸಮಿತಿ ವತಿಯಿಂದ ಎಸ್‌ಡಿಪಿಐ ಸಂಸ್ಥಾಪನಾ ದಿನಾಚರಣೆ

ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಬೆಳ್ಳಾರೆ ಗ್ರಾಮ ಸಮಿತಿಯ ಪಳ್ಳಿಮಜಲ್ ಬೂತ್ ವತಿಯಿಂದ ಪಕ್ಷದ 13ನೇ ಸಂಸ್ಥಾಪನಾ ದಿನಾಚರಣೆಯ ಅಂಗವಾಗಿ ಜೂ.21ರಂದು ಧ್ವಜಾರೋಹಣ ಕಾರ್ಯಕ್ರಮವು ನಡೆಯಿತು. ಪಳ್ಳಿಮಜಲು ಬೂತ್ ಅಧ್ಯಕ್ಷರಾದ ಸದ್ದಾಂ ಧ್ವಜಾರೋಹಣ ನೆರವೇರಿಸಿದರು. ಎಸ್‌ಡಿಪಿಐ ಬೆಳ್ಳಾರೆ ಗ್ರಾಮ ಸಮಿತಿ ಉಪಾಧ್ಯಕ್ಷರಾದ ಶಫೀಕ್ ಬೆಳ್ಳಾರೆ ಸಂದೇಶ ಬಾಷಣ ಮಾಡಿದರು. ಕಾರ್ಯಕ್ರಮದಲ್ಲಿ ಪಳ್ಳಿಮಜಲು ಮಸೀದಿ ಕಾರ್ಯದರ್ಶಿ...

ಎಸ್ಸೆಸ್ಸೆಲ್ಸಿ ಟಾಪರ್ ಸಾತ್ವಿಕ್ ಎಚ್ ಎಸ್ ರವರಿಗೆ ಗ್ರಾಮ ಪಂಚಾಯತ್ ವತಿಯಿಂದ ಗೌರವಾರ್ಪಣೆ

ಎಸ್.ಎಸ್.ಎಲ್.ಸಿ ಯಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದ ಬೆಳ್ಳಾರೆ ಕರ್ನಾಟಕ ಪಬ್ಲಿಕ್ ಸ್ಕೂಲ್ ನ ವಿದ್ಯಾರ್ಥಿ ಅಮರಪಡ್ನೂರು ಗ್ರಾಮದ ಕಜೆಮೂಲೆ ಹಾಸನಡ್ಕ ಸಾತ್ವಿಕ್ ಎಚ್ ಎಸ್ ರವರನ್ನು ಗ್ರಾಮ ಪಂಚಾಯತ್ ವತಿಯಿಂದ ಜೂ.19ರಂದು ಗೌರವಿಸಲಾಯಿತು. ಗ್ರಾಮ ಪಂಚಾಯತ್ ಸದಸ್ಯರಾದ ಅಶೋಕ್ ಚೂಂತಾರು, ಮೀನಾಕ್ಷಿ ಚೂಂತಾರು, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಕೆ ಆಕಾಶ್ ರವರು ಗೌರವಿಸಿದರು. ಈ...
Ad Widget

ಯೋಗ ಪಟು ಮೋನಿಷ್ ತಂಟೆಪ್ಪಾಡಿಯವರಿಗೆ ಗ್ರಾಮ ಪಂಚಾಯತ್ ವತಿಯಿಂದ ಗೌರವಾರ್ಪಣೆ

ಥಾಯ್ಲೆಂಡ್ ನಲ್ಲಿ ಜರುಗುವ ಅಂತಾರಾಷ್ಟ್ರೀಯ ಯೋಗ ಸ್ಪರ್ಧೆಗೆ ಆಯ್ಕೆಯಾದ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ಸಾಧಕಅಮರಪಡ್ನೂರು ಗ್ರಾಮದ ತಂಟೆಪ್ಪಾಡಿ ವಿಶ್ವನಾಥ ರವರ ಪುತ್ರ ಮೋನಿಷ್ ತಂಟೆಪ್ಪಾಡಿಯವರಿಗೆ ಅಮರಮೂಡ್ನೂರು ಗ್ರಾಮ ಪಂಚಾಯತ್ ವತಿಯಿಂದ ಸನ್ಮಾನ ಮತ್ತು ಗೌರವಾರ್ಪಣೆಯನ್ನು ಜೂ.19ರಂದು ಗ್ರಾಮ ಪಂಚಾಯತ್ ಸದಸ್ಯರಾದ ಅಶೋಕ್ ಚೂಂತಾರು, ಮೀನಾಕ್ಷಿ ಚೂಂತಾರು, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಕೆ.ಆಕಾಶ್ ರವರು ಹಮ್ಮಿಕೊಂಡರು....

ಶಾಂತಿನಗರ : ಮುಖ್ಯ ಶಿಕ್ಷಕರಾಗಿ ಪದೋನ್ನತಿ ಪಡೆದ ಶಿಕ್ಷಕರಿಗೆ ಸನ್ಮಾನ

ಶಾಂತಿನಗರ ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸಹ ಶಿಕ್ಷಕಿಯರಾಗಿ ಕರ್ತವ್ಯ ನಿರ್ವಹಿಸುತ್ತಿದ್ದು ಇದೀಗ ಮುಖ್ಯ ಶಿಕ್ಷಕಿಯಾಗಿ ಭಡ್ತಿಗೊಂಡು ವರ್ಗಾವಣೆಗೊಂಡ ಶೀಮತಿ ವಸಂತಿ ಹಾಗೂ ಶ್ರೀಮತಿ ಹೇಮಲತಾರಿಗೆ ಸನ್ಮಾನ ಹಾಗೂ ಬೀಳ್ಕೊಡುಗೆ ಸಮಾರಂಭ ಜೂ.22ರಂದು ನಡೆಯಿತು. ಶ್ರೀಮತಿ ವಸಂತಿಯವರು ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ ಜಾಲ್ಸೂರು ಹಾಗೂ ಶ್ರೀಮತಿ ಹೇಮಲತಾ ಎಸ್ ಇವರು ಸರಕಾರಿ...

ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಕುಕ್ಕೆ ಸುಬ್ರಮಣ್ಯ ವತಿಯಿಂದ ವೃಕ್ಷಮಿತ್ರ ಅಭಿಯಾನ

ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಕುಕ್ಕೆ ಸುಬ್ರಮಣ್ಯ ಇದರ ವತಿಯಿಂದ ವೃಕ್ಷಮಿತ್ರ ಅಭಿಯಾನ ಕಾರ್ಯಕ್ರಮವು ಕೆಎಸ್ಎಸ್ ಕಾಲೇಜು ಸುಬ್ರಹ್ಮಣ್ಯ ಇಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಕಾಲೇಜು ಪ್ರಾಂಶುಪಾಲರಾದ ದಿನೇಶ್ ಪಿ ಟಿ ಹಾಗೂ ಪ್ರಸಾದ್ ಎನ್ ಉಪಸ್ಥಿತರಿದ್ದರು ಹಾಗೂ ಕಾರ್ಯಕರ್ತರು ಗಿಡನೆಟ್ಟು ಅಭಿಯಾನವನ್ನು ಪ್ರಾರಂಭಿಸಿದರು.

ವಳಲಂಬೆ ಶಾಲೆ ಮಂತ್ರಿಮಂಡಲ ರಚನೆ ; ಮುಖ್ಯಮಂತ್ರಿಯಾಗಿ ಸುಜನ್ – ಉಪಮುಖ್ಯಮಂತ್ರಿಯಾಗಿ ಶ್ರೇಯಾ

ವಳಲಂಬೆ ಶಾಲಾ ಮಂತ್ರಿಮಂಡಲ ರಚನೆಸರಕಾರಿ ಹಿರಿಯ ಪ್ರಾಥಮಿಕ ಶಾಲೆ ವಳಲಂಬೆ ಇಲ್ಲಿ 2022-23 ನೇ ಸಾಲಿನ ಶಾಲಾ ಮಂತ್ರಿಮಂಡಲವು ಚುನಾವಣೆ ಮೂಲಕ ಇತ್ತೀಚೆಗೆ ರಚನೆಯಾಯಿತು. ಮುಖ್ಯಮಂತ್ರಿಯಾಗಿ ಸುಜನ್ ಎ ಜೆ. ಉಪಮುಖ್ಯಮಂತ್ರಿಯಾಗಿ ಶ್ರೇಯಾ ಎಂ ಯು. ಗೃಹಮಂತ್ರಿ ಯಾಗಿ ಅಚಿಂತ್ಯರಾಮ ಶರ್ಮಾ ಪಿ ಎಂ ಮತ್ತು ಯಜ್ಙೇಶ್ ಎನ್ ಎಸ್ .ಶಿಕ್ಷಣ ಮಂತ್ರಿಯಾಗಿ ಪೃಥ್ವಿ ಕೆ...

ಬೆಳ್ಳಾರೆಯ ಗ್ಯಾಲಕ್ಸಿ ಮೊಬೈಲ್ಸ್ ಶೋರೂಂನಲ್ಲಿ ಆಕಸ್ಮಿಕವಾಗಿ ಸ್ಫೋಟಗೊಂಡ ಮೊಬೈಲ್

ಬೆಳ್ಳಾರೆಯ ಕೆಳಗಿನ ಪೇಟೆಯಲ್ಲಿ ಕಾರ್ಯಾಚರಿಸುತ್ತಿರುವ ನಜೀರ್ ಕಳಂಜ ಮಾಲಕತ್ವದ ಗ್ಯಾಲಕ್ಸಿ ಮೊಬೈಲ್ಸ್ ಶೋರೂಂನಲ್ಲಿ ಇಂದು ರಿಪೇರಿಗೆಂದು ಬಂದಿದ್ದ 'ರೆಡ್ಮಿ ಆಂಡ್ರಾಯ್ಡ್' ಮೊಬೈಲ್ ಫೋನ್ ಆಕಸ್ಮಿಕವಾಗಿ ಸ್ಫೋಟಗೊಂಡಿದೆ. ಸ್ಫೋಟಗೊಂಡ ಮೊಬೈಲ್ ಹೊತ್ತಿಯುರಿದಿದ್ದು, ಘಟನೆಯ ದೃಶ್ಯ ಶೋರೂಂನ ಸಿಸಿಟಿವಿಯಲ್ಲಿ ದಾಖಲಾಗಿದೆ. ಇಂದು ಬೆಳಗ್ಗೆ ಗ್ಯಾಲಕ್ಸಿ ಮೊಬೈಲ್ಸ್ ಶೋರೂಂಗೆ ಗ್ರಾಹಕಿಯೋರ್ವರು ಬಂದಿದ್ದು, ಬ್ಯಾಟರಿ ಸಮಸ್ಯೆ ಇರುವುದಾಗಿ ತಿಳಿಸಿ ರಿಪೇರಿಗೆಂದು ನೀಡಿದ್ದರು....

ಯುವ ರತ್ನ ಅಪ್ಪು ಪ್ರಶಸ್ತಿ ಆಯ್ಕೆಯಾದ ಭವಿತ್ ಬಾಳುಗೋಡು

ಬೆಂಗಳೂರಿನ ಎಸ್.ಎಸ್.ಕಲಾ ಸಂಗಮ ಕೊಡಮಾಡುವ ಯುವ ರತ್ನ ಅಪ್ಪು ಪ್ರಶಸ್ತಿಗೆ ಕಬಡ್ಡಿ ಕ್ರೀಡಾಪಟು ಭವಿತ್ ಜಿ.ಬಿ. ಆಯ್ಕೆಯಾಗಿದ್ದಾರೆ.ಇವರು ಕಬಡ್ಡಿಯಲ್ಲಿ ಮಾಡಿದ ಸಾಧನೆಗಾಗಿ ಈ ಪ್ರಶಸ್ತಿ ನೀಡಲಾಗಿದೆ. ಎಲಿಮಲೆ ಜ್ಞಾನದೀಪ‌ ಶಾಲೆಯ ಮುಖ್ಯೋಪಾಧ್ಯಾಯ ಗದಾಧರ ಬಾಳುಗೋಡು ಮತ್ತು ದೈ.ಶಿ.ಶಿಕ್ಷಕಿ ದಿವ್ಯಾ ಬಾಳುಗೋಡುರವರ ಪುತ್ರ.ಪ್ರಶಸ್ತಿಯನ್ನು ಜೂ.25ರಂದು ಬೆಂಗಳೂರಿನ ಎ.ವಿ.ವರದಚಾರ್ ಮೆಮೊರಿಯಲ್ ಆಟ್೯ ನಲ್ಲಿ ನಡೆಯುವ ಯುವ ರತ್ನ ಅಪ್ಪು...

ದೇಶದ ಭದ್ರತೆಗೆ ಅಗ್ನಿ ಪಥ ಯೋಜನೆ – ಯುವಕರೆ ಅಗ್ನಿ ವೀರರಾಗಿ- ದೇಶದ ಸಮರ್ಥ ನಾಯಕರಾಗಿ

ನಮ್ಮ ದೇಶದ ಭದ್ರತೆಯನ್ನು ಇನ್ನಷ್ಟು ಬಲಪಡಿಸುವ ಉದ್ದೇಶದಿಂದ ಹಾಗೂ ದೇಶದ ಯುವ ಸಮುದಾಯವನ್ನು ಸಮರ್ಥ ನಾಗರಿಕರನ್ನಾಗಿ ಮಾಡಲು ಕೆಲವು ದಿನಗಳ ಹಿಂದೆ ರಕ್ಷಣಾ ಮಂತ್ರಿಯಾದ ಶ್ರೀ ರಾಜನಾಥ ಸಿಂಗ್ ಮತ್ತು ಸೇನೆಯ ಮೂರು ಅಂಗಗಳ ಮುಖ್ಯಸ್ಥರು ಜೊತೆಯಾಗಿ ಸೈನ್ಯಕ್ಕೆ ಬೇಕಾಗಿರುವ ಮಹತ್ವದ ಸುಧಾರಣೆಯನ್ನು ಜಾರಿಗೊಳಿಸಿದರು. ಈ ಯೋಜನೆಯನ್ನು ಸುಮಾರು ಎರಡು ವರ್ಷಗಳಿಂದ ಅಧ್ಯಯನ ಮಾಡಿ  ,ಅದರ...

ಮನಮೋಹನ ಸೂರ್ಯಮನೆ ಆತ್ಮಹತ್ಯೆ

ಉಬರಡ್ಕ ಮಿತ್ತೂರು ಗ್ರಾಮದ ಸೂರ್ಯಮನೆ ಮನಮೋಹನ ಎಂಬ ಯುವಕ ಜೂ.18ರಂದು ರಾತ್ರಿ ಬೆಂಗಳೂರಿನಲ್ಲಿ ಆತ್ಯಹತ್ಯೆಗೆ ಶರಣಾಗಿದ್ದಾರೆ.ಉಬರಡ್ಕ ಮಿತ್ತೂರು ಗ್ರಾಮದ ಸೂರ್ಯಮನೆ ರುಕ್ಮಯ್ಯ ಗೌಡ ಎಂಬವರ ಪುತ್ರರಾದ ಮನಮೋಹನ್ ಹಲವು ವರ್ಷಗಳಿಂದ ಬೆಂಗಳೂರಿನಲ್ಲಿ ಕುಟುಂಬ ಸಮೇತರಾಗಿ ನೆಲೆಸಿದ್ದು, ಕಂಪೆನಿಯೊಂದರಲ್ಲಿ ಕೆಲಸ ನಿರ್ವಹಿಸುತ್ತಿದ್ದರು. ಮೃತರು ಪತ್ನಿ ನಿತ್ಯ, ಪುತ್ರ ಮನೀಶ್ ಹಾಗೂ ಕುಟುಂಬಸ್ಥರು, ಬಂಧು ಮಿತ್ರರನ್ನು ಅಗಲಿದ್ದಾರೆ.ಆತ್ಯಹತ್ಯೆಗೆ ಕಾರಣ...
Loading posts...

All posts loaded

No more posts

error: Content is protected !!