Ad Widget

ಅಚ್ರಪ್ಪಾಡಿ ಶಾಲೆಯಲ್ಲಿ ವಿಶ್ವ ಯೋಗ ದಿನಾಚರಣೆ

ಅಚ್ರಪ್ಪಾಡಿ ಸ.ಕಿ ಪ್ರಾ ಶಾಲೆಯಲ್ಲಿ ವಿಶ್ವ ಯೋಗ ದಿನಾಚರಣೆ ನಡೆಯಿತು. ಕಾರ್ಯಕ್ರಮದಲ್ಲಿ ಶ್ರೀಮತಿ. ಶಶಿಕಲಾ ಕೃಷ್ಣ (ಶಾಲೆಯ ಮುಖ್ಯಶಿಕ್ಷಕರ ತಾಯಿ) ಇವರು ಯೋಗ ದಿನಾಚರಣೆ ಯ ಮಹತ್ವವನ್ನು ವಿದ್ಯಾರ್ಥಿಗಳಿಗೆ ತಿಳಿಸಿ ಸರಳ ಯೋಗ ಹಾಗೂ ಪ್ರಾಣಾಯಾಮಗಳನ್ನು ಮಕ್ಕಳಿಗೆ ಮಾಡಿಸಿದರು. ಈ ಕಾರ್ಯಕ್ರಮದಲ್ಲಿ ಶಾಲಾ ತಾಯಂದಿರ ಸಮಿತಿ ಅಧ್ಯಕ್ಷೆ ಶ್ರೀಮತಿ ಜಯಶ್ರೀ ಪರಶುರಾಮ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಶಾಲಾ...

ಬುಶ್ರಾ ವಿದ್ಯಾಸಂಸ್ಥೆಯಲ್ಲಿ ಅಂತಾರಾಷ್ಟ್ರೀಯ ಯೋಗ ದಿನಾಚರಣೆ

ಬುಶ್ರಾ ವಿದ್ಯಾಸಂಸ್ಥೆ ಕಾವು ಇಲ್ಲಿ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯನ್ನು ಆಚರಿಸಿದ್ದು ,ಬುಶ್ರಾ ವಿದ್ಯಾ ಸಂಸ್ಥೆಯ ಸ್ಥಾಪಕಧ್ಯಕ್ಷರೂ ಸಂಚಾಲಕರೂ ಆದ ಅಬ್ದುಲ್ ಅಝೀಝ್ ಬುಶ್ರಾ ವಿದ್ಯುಕ್ತವಾಗಿ ಉದ್ಘಾಟಿಸಿ,ಕಾರ್ಯಕ್ರಮ ದ ಅಧ್ಯಕ್ಷತೆ ವಹಿಸಿದ್ದರು .ದೈಹಿಕ ಶಿಕ್ಷಣ ಶಿಕ್ಷಕರಾದ ಚಂದ್ರಶೇಖರ್ ಹಾಗೂ ಶಿಕ್ಷಕ ಪ್ರದೀಪ್ ವಿದ್ಯಾರ್ಥಿ ಗಳಿಗೆ ತರಬೇತಿಯನ್ನು ನೀಡಿದರು.ಶಾಲಾ ಮುಖ್ಯ ಗುರುಗಳಾದ ಅಮರನಾಥ್ ಪ್ರಾಸ್ತಾವಿಕ ಮಾತುಗಳನ್ನಾಡಿ ,ಯೋಗ ದಿನಾಚರಣೆಯ...
Ad Widget

ಚಿತ್ತ ಚಾಂಚಲ್ಯ ಹೋಗಲಾಡಿಸಿ ಏಕಾಗ್ರತೆ ಸಾಧಿಸಲು ಯೋಗ ಅಡಿಗಲ್ಲು – ಗಿರೀಶ್ ನಂದನ್

ಚಿತ್ತ ಚಾಂಚಲ್ಯವನ್ನು ಹೋಗಲಾಡಿಸಲು ಯೋಗ ಪ್ರಧಾನ. ಪ್ರಾಚೀನ ಖುಷಿ ಮುನಿಗಳಿಂದ ಸಂಜಾತ ಯೋಗವು ಸರ್ವರೋಗ ನಿವಾರಕವಾಗಿದೆ. ಪತಂಜಲಿ ಮುನಿಯಿಂದ ಭಾರತದಲ್ಲಿ ಆರಂಭವಾದ ಯೋಗ ಇಂದು ವಿಶ್ವವ್ಯಾಪಿಯಾಗಿದೆ.ವಿಶ್ವ ಇದನ್ನು ಅನುಸರಿಸುತ್ತಿದೆ.ದೇವತೆಯ ಆರಾಧನೆಗೆ ಯೋಗಾಸನವನ್ನು ಬಳಸಲಾಗುತ್ತದೆ. ಸೂರ್ಯನ ಪೂಜನೆಮಾಡುವ ಸೂರ್ಯ ನಮಸ್ಕಾರ ಅತ್ಯಂತ ಶ್ರೇಷ್ಠವಾದ ಆಸನವಾಗಿದೆ. ಯೋಗವು ಭಾರತವು ವಿಶ್ವಕ್ಕೆ ನೀಡಿದ ದೊಡ್ಡ ಕೊಡುಗೆಯಾಗಿದೆ. ಇದೀಗ ವಿಶ್ವಾದ್ಯಂತ ಯೋಗದ...

ನಡುಗಲ್ಲು ಶಾಲೆಯಲ್ಲಿ ಯೋಗ ದಿನಾಚರಣೆ

ನಡುಗಲ್ಲು ಸ.ಹಿ.ಪ್ರಾ. ಶಾಲೆಯಲ್ಲಿ ಇಂದು ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು ಆಚರಿಸಲಾಯಿತು. ಈ ಕಾರ್ಯಕ್ರಮದಲ್ಲಿ ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷರು, ಸದಸ್ಯರು, ಶಿಕ್ಷಕರು, ಶಾಲಾ ಮಕ್ಕಳು ಉತ್ಸಾಹದಿಂದ ಭಾಗವಹಿಸಿದರು.

ಹರಿಹರ ಪಲ್ಲತ್ತಡ್ಕ :- ಪ್ರೌಢಶಾಲೆಯಲ್ಲಿ ಯೋಗ ದಿನಾಚರಣೆ

ಹರಿಹರ ಪಲ್ಲತ್ತಡ್ಕ ಸರಕಾರಿ ಪದವಿ ಪೂರ್ವ ಕಾಲೇಜು ಪ್ರೌಢಶಾಲಾ ವಿಭಾಗದಲ್ಲಿ ಜೂ.21 ರಂದು ಯೋಗ ದಿನಾಚರಣೆ ಆಚರಿಸಲಾಯಿತು.ಈ ಸಂದರ್ಭದಲ್ಲಿ ಪ್ರೌಢಶಾಲಾ ಶಿಕ್ಷಕರುಗಳಾದ ಕೃಪಾ.ಪಿ.ಎಸ್, ಮೇದಪ್ಪ.ಎ, ವೆಂಕಟೇಶ್ ನಾಯಕ್, ವನಿತಾ.ಜಿ, ವೀಣಾ.ಎ, ಜಯಶ್ರೀ, ಸೌಮ್ಯ ಕೋನಡ್ಕ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ವರದಿ :- ಉಲ್ಲಾಸ್ ಕಜ್ಜೋಡಿ

ಜೇಸೀಐ ಸುಳ್ಯ ಸಿಟಿ ವತಿಯಿಂದ ಅಂತಾರಾಷ್ಟ್ರೀಯ ಯೋಗ ದಿನಾಚರಣೆ

ಅಂತರಾಷ್ಟ್ರೀಯ ಯೋಗ ದಿನಾಚರಣೆಯ ಅಂಗವಾಗಿ ಜೆಸಿಐ ಸುಳ್ಯ ಸಿಟಿಯ ವತಿಯಿಂದ ವಿಶ್ವ ಯೋಗ ದಿನಾಚರಣೆಯನ್ನು ಮ್ಯಾಟ್ರಿಕ್ಸ್ ವಿದ್ಯಾಸಂಸ್ಥೆ ಸುಳ್ಯದಲ್ಲಿ ಆಚರಿಸಲಾಯಿತು. ಯೋಗ ತರಬೇತಿಯನ್ನು ಚಂದ್ರಶೇಖರ್ ಕನಕಮಜಲು ರವರು ನೆರವೇರಿಸಿದರು ಮ್ಯಾಟ್ರಿಕ್ಸ್ ವಿದ್ಯಾಸಂಸ್ಥೆ ಸುಳ್ಯದ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಘಟಕಾದ್ಯಕ್ಷ ಬಶೀರ್ ಯು ಪಿ ಸ್ವಾಗತಿಸಿ, ಉಪಾಧ್ಯಕ್ಷರಾದ ರಂಜಿತ್ ಪಿ‌ಜೆ ವಂದಿಸಿದರು.

ಚೊಕ್ಕಾಡಿ ಪ್ರೌಢಶಾಲೆ ಕುಕ್ಕುಜಡ್ಕದಲ್ಲಿ ಯೋಗ ದಿನಾಚರಣೆ

ಚೊಕ್ಕಾಡಿ ಪ್ರೌಢಶಾಲೆ ಕುಕ್ಕುಜಡ್ಕದಲ್ಲಿ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯನ್ನು ಜೂ. 21ರಂದು ಹಮ್ಮಿಕೊಳ್ಳಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಚಾಲಕರಾದ ಶ್ರೀ ರಾಧಾಕೃಷ್ಣ ಬೊಳ್ಳೂರು ಅವರು ವಹಿಸಿ, ಜೀವನದಲ್ಲಿ ಆರೋಗ್ಯಯುತವಾದ ಸದೃಢ ಶರೀರವನ್ನು ಇಟ್ಟುಕೊಳ್ಳಬೇಕಾದರೆ ಕನಿಷ್ಠ ಯೋಗಾಭ್ಯಾಸವನ್ನಾದರೂ ಅಳವಡಿಸಿಕೊಳ್ಳಬೇಕು ಹಾಗೂ ಅದನ್ನು ವಿದ್ಯಾರ್ಥಿ ಜೀವನದಲ್ಲೇ ರೂಢಿಸಿಕೊಳ್ಳಬೇಕು ಎಂದು ನುಡಿದರು. ಮುಖ್ಯ ಅತಿಥಿಯಾಗಿ ಆಗಮಿಸಿದ ಯೋಗೇನ ಚಿತ್ತೈಸ್ಯ ಯೋಗ ಕೇಂದ್ರದ ಯೋಗಶಿಕ್ಷಕಿ...

ಅಡ್ಕಾರು : ತೋಟಕ್ಕೆ ಉರುಳಿದ ಕೇರಳ ಸಾರಿಗೆ ಬಸ್

ಕಾಸರಗೋಡಿನಿಂದ ಸುಳ್ಯಕ್ಕೆ ಬರುತ್ತಿದ್ದ ಕೇರಳ ರಾಜ್ಯ ಸಾರಿಗೆ ಸಂಸ್ಥೆಯ ಬಸ್ ಚಾಲಕನ ನಿಯಂತ್ರಣ ತಪ್ಪಿ ತೋಟಕ್ಕೆ ಚಲಿಸಿದ ಘಟನೆ ಜೂ. 21 ರಂದು ನಡೆದಿದೆ. ಪ್ರಯಾಣಿಕರು ಸಣ್ಣ ಪುಟ್ಟ ಗಾಯಗಳಿಂದ ಪಾರಾಗಿದ್ದಾರೆಂದು ತಿಳಿದುಬಂದಿದೆ.

ಎಸ್ ಡಿ ಪಿ ಐ ಬೆಳ್ಳಾರೆ ವತಿಯಿಂದ ಎಸ್‌ಡಿಪಿಐ ಸಂಸ್ಥಾಪನಾ ದಿನಾಚರಣೆ ಅಂಗವಾಗಿ ಬೆಳ್ಳಾರೆ ಅಂಗನವಾಡಿಯಲ್ಲಿ ಶ್ರಮದಾನ ಕಾರ್ಯಕ್ರಮ

ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಬೆಳ್ಳಾರೆ ಗ್ರಾಮ ಸಮಿತಿ ವತಿಯಿಂದ ಪಕ್ಷದ 13 ನೇ ಸಂಸ್ಥಾಪನಾ ದಿನಾಚರಣೆಯ ಅಂಗವಾಗಿ ಶ್ರಮದಾನ ಕಾರ್ಯಕ್ರಮವು ಬೆಳ್ಳಾರೆಯ ಅಂಗನವಾಡಿ ಕೇಂದ್ರದಲ್ಲಿ ನಡೆಯಿತು. ಗ್ರಾಮ ಸಮಿತಿ ಅಧ್ಯಕ್ಷರಾದ ಶಹೀದ್ ಬೆಳ್ಳಾರೆ, ಎಸ್‌ಡಿಪಿಐ ಬೆಳ್ಳಾರೆ ಬ್ಲಾಕ್ ಕಾರ್ಯದರ್ಶಿ ಮೊಯಿದಿನ್ ಯು ಎಚ್ ಹಾಗು ಎಸ್‌ಡಿಪಿಐ ಗ್ರಾಮ ಸಮಿತಿ, ಬೂತ್ ಸಮಿತಿ ಪದಾಧಿಕಾರಿಗಳು,...

ಬೆಳ್ಳಾರೆ: ಉಪಯೋಗಶೂನ್ಯ ರೀತಿಯಲ್ಲಿದೆ ಸಾರ್ವಜನಿಕ ಶೌಚಾಲಯ

ಸುಳ್ಯ ತಾಲೂಕಿನ ಎರಡನೇ ಅತೀ ದೊಡ್ಡ ಪೇಟೆ ಎನಿಸಿಕೊಂಡಿರುವ ಬೆಳ್ಳಾರೆ ಪೇಟೆಯ ಬೆಳ್ಳಾರೆ-ಸುಳ್ಯ ಮಾರ್ಗದಲ್ಲಿ ಬಸ್ಸು ತಂಗುದಾಣದ ಸಮೀಪವಿರುವ ಸಾರ್ವಜನಿಕ ಶೌಚಾಲಯ ಅವ್ಯವಸ್ಥೆಗಳಿಂದ ಉಪಯೋಗಶೂನ್ಯ ರೀತಿಯಲ್ಲಿದೆ. ಹೆಂಗಸರಿಗೆ ಹಾಗೂ ಗಂಡಸರಿಗೆ ಪ್ರತ್ಯೇಕ ಶೌಚಾಲಯವಿದ್ದರೂ ನೀರಿನ ಪೂರೈಕೆಯಿಲ್ಲದೆ ಶೌಚಾಲಯ ಸಾರ್ವಜನಿಕರಿಗೆ ಉಪಯೋಗವಾಗದೆ ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬಂತಿದೆ. ಶೌಚಾಲಯದ ಎದುರುಗಡೆ ಕರ್ನಾಟಕ ಪಬ್ಲಿಕ್ ಸ್ಕೂಲ್ ಇದ್ದು ವಿದ್ಯಾರ್ಥಿಗಳು ಶಾಲೆ...
Loading posts...

All posts loaded

No more posts

error: Content is protected !!