- Sunday
- November 24th, 2024
ಹರಿಹರ ಪಲ್ಲತ್ತಡ್ಕ ಗ್ರಾಮ ಪಂಚಾಯತ್ ನಲ್ಲಿ ಜೂ.22 ರಂದು 2021-22ನೇ ಸಾಲಿನ ದ್ವಿತೀಯ ಹಂತದ ಗ್ರಾಮ ಸಭೆಯು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಜಯಂತ ಬಾಳುಗೋಡು ಅವರ ಅಧ್ಯಕ್ಷತೆಯಲ್ಲಿ ನಡೆಯಿತು.ಸುಳ್ಯ ಕೃಷಿ ಇಲಾಖೆಯ ಕೃಷಿ ಅಧಿಕಾರಿಗಳಾದ ಮೋಹನ್ ನಂಗಾರು ನೋಡೆಲ್ ಅಧಿಕಾರಿಯಾಗಿ ಉಪಸ್ಥಿತರಿದ್ದರು.ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ವಿಜಯ ಅಂಙಣ, ಗ್ರಾಮ ಪಂಚಾಯತ್ ಸದಸ್ಯರುಗಳಾದ ದಿವಾಕರ...
ಸುಳ್ಯದಿಂದ ಎಲಿಮಲೆ ಮಡಪ್ಪಾಡಿ ಮಾರ್ಗವಾಗಿ ಗುತ್ತಿಗಾರಿಗೆ ಸರಕಾರಿ ಬಸ್ ಪುನರಾರಂಭಗೊಂಡಿದೆ. ಸುಳ್ಯದಿಂದ ಸಂಜೆ 4.30ಕ್ಕೆ ಸರಿಯಾಗಿ ಹೊರಟು ಮಡಪ್ಪಾಡಿಗೆ ಸಂಜೆ 5.30ಕ್ಕೆ ತಲುಪಿ ನಂತರ ಗುತ್ತಿಗಾರಿಗೆ ಸರ್ಕಾರಿ ಬಸ್ ತೆರಳಲಿದೆ ಎಂದು ತಿಳಿದುಬಂದಿದೆ.
ತಾಲೂಕು ಆಡಳಿತದ ವತಿಯಿಂದ ಸರಕಾರಿ ಸವಲತ್ತು ವಿತರಣೆ ಕಾರ್ಯಕ್ರಮ ಹಾಗೂ ಪ್ರಗತಿ ಪರಿಶೀಲನೆ ಸಭೆ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ನಡೆಯಿತು . ಸವಲತ್ತು ವಿತರಣೆ ಕಾರ್ಯಕ್ರಮವನ್ನು ಇಂಧನ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸುನಿಲ್ ಕುಮಾರ್ ಉದ್ಘಾಟಿಸಿ ಸರಕಾರಿ ಸವಲತ್ತು ಮತ್ತು ಯೋಜನೆಗಳ ಬಗ್ಗೆ ಮಾತನಾಡಿ ಮಾಹಿತಿ ಕೊರತೆ ಇದ್ದರೆ ಸ್ಥಳೀಯ ಜನಪ್ರತಿನಿಧಿಗಳಲ್ಲಿ ಮತ್ತು...
ಸುಳ್ಯದ ನೆಹರೂ ಮೆಮೋರಿಯಲ್ ಕಾಲೇಜು ಹಾಗೂ ಕಾಲೇಜಿನ ಪಠ್ಯೇತರ ಚಟುವಟಿಕಾ ಘಟಕಗಳಾದ ಎನ್ ಎಸ್ ಎಸ್, ಎನ್ ಸಿ ಸಿ, ಯುವ ರೆಡ್ ಕ್ರಾಸ್, ರೋವರ್ಸ್ - ರೇಂಜರ್ಸ್ ವತಿಯಿಂದ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯನ್ನು ಕಾಲೇಜಿನಲ್ಲಿ ಹಮ್ನಿಕೊಳ್ಳಲಾಯಿತು. ಕೆ ವಿ ಜಿ ಆಯುರ್ವೇದ ಮೆಡಿಕಲ್ ಕಾಲೇಜಿನ ಅಸೋಸಿಯೇಟ್ ಪ್ರೊಫೆಸರ್ ಡಾ.ಪ್ರಮೋದ್ ಪಿ ಎ ಮುಖ್ಯ ಅತಿಥಿಯಾಗಿ...
ಸುಳ್ಯ ಕ್ಷೇತ್ರದ ಶಾಸಕರೂ, ರಾಜ್ಯದ ಮೀನುಗಾರಿಕೆ ಬಂದರು ಹಾಗೂ ಒಳನಾಡು ಜಲಸಾರಿಗೆ ಸಚಿವ ಎಸ್.ಅಂಗಾರರು ಜೂ.20 ರಂದು ಸುಳ್ಯದ ಪ್ರತಿಷ್ಠಿತ ವಸ್ತ್ರ ಮಳಿಗೆ ಕುಂ…ಕುಂ… ಫ್ಯಾಷನ್ ಗೆ ಭೇಟಿ ನೀಡಿದರು. ವಸ್ತ್ರ ಮಳಿಗೆಗೆ ಭೇಟಿ ನೀಡಿದ ಸಚಿವರನ್ನು ಸಂಸ್ಥೆಯ ಪಾಲುದಾರ ಧನ್ ರಾಮ್ ಪಟೇಲ್ ಬರಮಾಡಿಕೊಂಡರು. ಬಳಿಕ ಸಚಿವರು ಜೂ.21 ರ ಯೋಗ ದಿನಾಚರಣೆ ಗೆ...
ವಿಶ್ವ ಯೋಗ ದಿನಾಚರಣೆಯ ಪ್ರಯುಕ್ತ ಅಯ್ಯನಕಟ್ಟೆ ಬಸ್ಸು ತಂಗುದಾಣದ ಸ್ವಚ್ಚತೆಯನ್ನು ಇಂದು ಮಾಡಲಾಯಿತು. ಈ ಸಂದರ್ಭದಲ್ಲಿ ಕಳಂಜ ಗ್ರಾಮ ಪಂಚಾಯತ್ ಅಧ್ಯಕ್ಷ ಪ್ರಶಾಂತ್ ಕಿಲಂಗೋಡಿ, ಉಪಾಧ್ಯಕ್ಷ ಗಣೇಶ್ ರೈ, ಸದಸ್ಯ ಬಾಲಕೃಷ್ಣ ಬೇರಿಕೆ, ಅರುಣ್ ರೈ, ಸತೀಶ್ಚಂದ್ರ ಅಯ್ಯನಕಟ್ಟೆ ಮತ್ತು ಶಾಂತಮೂರ್ತಿ ಕಿಲಂಗೋಡಿ ಉಪಸ್ಥಿತರಿದ್ದರು.
ಕಡಬ ತಾಲೂಕಿನ ಬಿಳಿನೆಲೆ ಶ್ರೀ ವೇದವ್ಯಾಸ ವಿದ್ಯಾಲಯದಲ್ಲಿ ವಿಶ್ವ ಯೋಗ ದಿನಾಚರಣೆಯನ್ನು ಆಚರಿಸಲಾಯಿತು. ಸಂಸ್ಥೆಯ ಸಹಶಿಕ್ಷಕರಾದ ಗುರುಪ್ರಸಾದ್ ಭಟ್ ಯೋಗ ದಿನಾಚರಣೆಯ ಮಹತ್ವದ ಕುರಿತಾಗಿ ಮಾತನಾಡಿದರು. ವೇದಿಕೆಯಲ್ಲಿ ಸಂಸ್ಥೆಯ ಮುಖ್ಯ ಶಿಕ್ಷಕರಾದ ಪ್ರಶಾಂತ್.ಬಿ ಹಾಗೂ ಸಹ ಶಿಕ್ಷಕರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಸಹ ಶಿಕ್ಷಕರಾದ ವಿನೋದ್ ಕುಮಾರ್ ನಿರೂಪಿಸಿ, ಉಮೇಶ್ ವಂದಿಸಿದರು.
ಕಡಬ ತಾಲೂಕಿನ ಬಿಳಿನೆಲೆ ಶ್ರೀ ವೇದವ್ಯಾಸ ವಿದ್ಯಾಲಯದಲ್ಲಿ ನೂತನ ಶೈಕ್ಷಣಿಕ ವರ್ಷಕ್ಕೆ ದಾಖಲಾತಿಗೊಂಡ ವಿದ್ಯಾರ್ಥಿಗಳ ಪ್ರವೇಶೋತ್ಸವ ಕಾರ್ಯಕ್ರಮ ನಡೆಯಿತು. ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಸುಬ್ರಹ್ಮಣ್ಯ ಪದವಿಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ ಮುಖ್ಯಗುರುಗಳಾದ ಯಶವಂತ ರೈ , ಪ್ರೌಢ ಶಾಲೆಯ ಮುಖ್ಯಗುರುಗಳಾದ ಗಣಪತಿ ಭಟ್ ಹಾಗೂ ಶ್ರೀ ವೇದವ್ಯಾಸ ವಿದ್ಯಾಲಯದ ಮುಖ್ಯಗುರುಗಳಾದ ಪ್ರಶಾಂತ್ , ಬಿ.,...
ಯೋಗವು ಭಾರತದ ಪ್ರಾಚೀನ ಸಂಪ್ರದಾಯದ ಅಮೂಲ್ಯ ಕೊಡುಗೆಯಾಗಿದೆ. ಇದು ಮನಸ್ಸು ಮತ್ತು ದೇಹದ ಏಕತೆಯನ್ನು ಸಾರುತ್ತದೆ. ಯೋಗ ಸಾಧನೆಯ ಪ್ರಾಮುಖ್ಯತೆಯನ್ನು ತಿಳಿಯಪಡಿಸಲು ಹಾಗೂ ವಿದ್ಯಾರ್ಥಿಗಳಲ್ಲಿ ಅರಿವನ್ನು ಮೂಡಿಸಲು ಕೆ.ಎಸ್.ಎಸ್ ಕಾಲೇಜು ಸುಬ್ರಹ್ಮಣ್ಯ, ಐ.ಕ್ಯೂ.ಎ.ಸಿ ಘಟಕ, ರಾಷ್ಟ್ರೀಯ ಸೇವಾ ಯೋಜನೆ, ಯುವ ರೆಡ್ ಕ್ರಾಸ್ ಘಟಕ, ರೋವರ್ಸ್ ಮತ್ತು ರೇಂಜರ್ಸ್ ಘಟಕ ಹಾಗೂ ಶ್ರೀ ಪತಂಜಲಿ ಯೋಗ...
ಐವರ್ನಾಡು ಗ್ರಾಮ ಪಂಚಾಯತ್ ವತಿಯಿಂದ ಗ್ರಾಮ ವಿಕಾಸ ಸಭಾ ಭವನದಲ್ಲಿ “ ಮಾನವೀಯತೆಗಾಗಿ ಯೋಗ” ಎಂಬ ಧ್ಯೇಯವಾಕ್ಯದಡಿಯಲ್ಲಿ 8 ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು ಆಚರಿಸಲಾಯಿತು. ಈ ಯೋಗ ದಿನಾಚರಣೆಯಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಬೆಳ್ಳಾರೆ ಪತಂಜಲಿ ಯೋಗ ಸಮಿತಿಯ ಗಣಪಯ್ಯ ಭಟ್ ವನಶ್ರೀ ಇವರು ಭಾಗವಹಿಸಿ ಯೋಗ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಯೋಗ ತರಬೇತಿ ನೀಡಿದರು....
Loading posts...
All posts loaded
No more posts