- Monday
- November 25th, 2024
ಸಾಹಿತಿ, ಜಾನಪದ ಸಂಶೋಧಕ ಡಾ.ಸುಂದರ ಕೇನಾಜೆಯವರು ಇತರ ಲೇಖಕರೊಂದಿಗೆ ಸೇರಿ ರಚಿಸಿದ ಮಂಟೇಸ್ವಾಮಿ ಪರಂಪರೆಯ ನೀಲಗಾರರ ಆತ್ಮಕಥೆಗಳ ಗ್ರಂಥ "ನಾವು ಕೂಗುವ ಕೂಗು" ಜೂ 15 ರಂದು ಡಾ.ಬಿ.ಆರ್. ಅಂಬೇಡ್ಕರ್ ಸ್ನಾತಕೋತ್ತರ ಕೇಂದ್ರ ಚಾಮರಾಜನಗರ ಇಲ್ಲಿ ಬಿಡುಗಡೆಗೊಂಡಿತು. ಕೇಂದ್ರದ ಶ್ರೀ ಮಂಟೇಸ್ವಾಮಿ, ರಾಚಪ್ಪಾಜಿ, ಸಿದ್ದಪ್ಪಾಜಿ ಅಧ್ಯಯನ ಪೀಠದ ಆಶ್ರಯದಲ್ಲಿ ನಡೆದ ಈ ಬಿಡುಗಡೆ ಕಾರ್ಯಕ್ರಮದಲ್ಲಿ ಸುತ್ತೂರು...
ವಿಶ್ವ ಪರಿಸರ ದಿನದ ಪ್ರಯುಕ್ತ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಬಿಜೆಪಿ ಯುವ ಮೋರ್ಚಾ ಸುಳ್ಯ ಮಂಡಲದ ವತಿಯಿಂದ ಜೂ.15ರಂದು ಸಸಿ ನೆಡುವ ಮುಖಾಂತರ ಆಚರಿಸಲಾಯಿತು. ಈ ಸಂದರ್ಭದಲ್ಲಿ ಸುಳ್ಯ ಮಂಡಲ ಯುವಮೋರ್ಚಾ ಪ್ರಧಾನ ಕಾರ್ಯದರ್ಶಿ ಮನುದೇವ್ ಪರಮಲೆ, ಉಪಾಧ್ಯಕ್ಷರಾದ ದಿಲೀಪ್ ಉಪ್ಪಳಿಕೆ, ಸದಸ್ಯರಾದ ಮನೀಶ್ ಪದೇಲ ಹಾಗೂ ಸ್ಥಳೀಯ ಕಾರ್ಯಕರ್ತರು ಉಪಸ್ಥಿತರಿದ್ದರು.
ಸುಳ್ಯ ವಲಯದ ಎಸ್ ಕೆ ಪಿ ಯ ಸ್ಥಾಪಕಾಧ್ಯಕ್ಷರು, ಎಸ್ ಕೆ ಪಿ ಮಾಜಿ ಜಿಲ್ಲಾಧ್ಯಕ್ಷರು, ಸುಳ್ಯದ ಹಿರಿಯ ಛಾಯಾಗ್ರಾಹಕ, ಸುಳ್ಯ ಗೋಪಾಲ್ ಸ್ಟುಡಿಯೋ ಮಾಲಕ ಗೋಪಾಲ್ ಸುಳ್ಯ ರವರಿ ಕೆ ಪಿ ಎ ರಾಜ್ಯ ಮಟ್ಟದ ಛಾಯಾ ಸಾಧಕ ರಾಜ್ಯ ಪ್ರಶಸ್ತಿ ಪುರಸ್ಕಾರಕ್ಕೆ ಆಯ್ಕೆಯಾಗಿದ್ದಾರೆ.
ವಿಶ್ವ ರಕ್ತದಾನಿಗಳ ದಿನಾಚರಣೆಯ ಅಂಗವಾಗಿ ಜೂ.14 ರಂದು ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಸುಳ್ಯ ಇದರ ವತಿಯಿಂದ ಸುಳ್ಯ ವರ್ತಕರ ಸಂಘದ ಸಭಾಭವನದಲ್ಲಿ ರಕ್ತದಾನಿಗಳ ದಿನಾಚರಣೆಯನ್ನು ಆಚರಿಸಲಾಯಿತು. ಈ ಸಂದರ್ಭದಲ್ಲಿ ರಕ್ತದಾನ ವಾಟ್ಸಾಪ್ ಗುಂಪಿನ ಅಡ್ಮಿನ್ ಗಳನ್ನು, ಸುಳ್ಯ ಯುವ ರೆಡ್ ಕ್ರಾಸ್ ಗಳನ್ನು, ರಕ್ತದಾನಿಗಳನ್ನು ಹಾಗೂ ಪ್ರೋತ್ಸಾಹಕರನ್ನು ಸನ್ಮಾನಿಸಲಾಯಿತು. ಕೆ.ವಿ.ಜಿ ಆಯುರ್ವೇದ ಕಾಲೇಜಿನ ಪ್ರಾಂಶುಪಾಲರಾದ...
ಆಲೆಟ್ಟಿ ಗ್ರಾಮದ ಬಡ ದಲಿತ ಮಹಿಯೊಬ್ಬರು ಸರಕಾರದ ಸವಲತ್ತಿಗಾಗಿ ಅಲೆದಾಡಿದಾಡಿದರೂ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ನಿರ್ಲಕ್ಷ್ಯ ದಿಂದಾಗಿ ಬೀಳುವ ಸ್ಥಿತಿಯಲ್ಲಿರುವ ಮನೆಯಲ್ಲಿಯೇ ಜೀವನ ಸಾಗಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಆಲೆಟ್ಟಿ ಗ್ರಾಮದ ಮೊರಂಗಲ್ಲು ದಲಿತ ಮಹಿಳೆ ಭಾಗೀರಥಿ ಎಂಬವರು ಸುಮಾರು 40 ವರ್ಷಗಳಿಂದ ಸರ್ವೇ ನಂಬರ್ 121 ರಲ್ಲಿ ಸಣ್ಣದೊಂದು ಮನೆಕಟ್ಟಿಕೊಂಡು ವಾಸವಾಗಿದ್ದಾರೆ. ಆದರೆ ಈ ಜಾಗಕ್ಕೆ...
ಬಳ್ಪ ಮತ್ತು ಸುಬ್ರಹ್ಮಣ್ಯದಲ್ಲಿ 1 ರಿಂದ 10 ನೇ ತರಗತಿ ವಿಧ್ಯಾರ್ಥಿಗಳಿಗಾಗಿ ಅನುಭವಿ ಶಿಕ್ಷಕರಿಂದ ಎಕ್ಸಲೆಂಟ್ ಟ್ಯೂಷನ್ ತರಗತಿ ಮತ್ತು ನವೋದಯ,ಮೊರಾರ್ಜಿ ದೇಸಾಯಿ ಪ್ರವೇಶ ಪರೀಕ್ಷೆಯ ತರಬೇತಿ ನೀಡಲಾಗುವುದೆಂದು ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ 97414939247353494386
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಬೆಳ್ಳಾರೆ ಹಾಗೂ ದೊಡ್ಡತೋಟ ವಲಯಗಳ ಸೇವಾಪ್ರತಿನಿಧಿಗಳಿಗೆ ಜೂ.15 ರಂದು ಕುಕ್ಕುಜಡ್ಕ ಗ್ರಾಮ ಪಂಚಾಯತ್ ಕೊರಗ ಭವನದಲ್ಲಿ ಪ್ರಗತಿ ರಕ್ಷಾ ಕವಚದ ಬಗ್ಗೆ ಮಾಹಿತಿ ಮಾಹಿತಿ ಕಾರ್ಯಕ್ರಮ ನಡೆಯಿತು.ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸುಳ್ಯ ತಾಲೂಕು ಯೋಜನಾಧಿಕಾರಿಗಳಾದ ನಾಗೇಶ್ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿದರು.ತಾಲೂಕು ಕೃಷಿ ಅಧಿಕಾರಿ ರಮೇಶ್ ಹಾಗೂ...
ನಡುಗಲ್ಲು ಸ.ಹಿ.ಪ್ರಾ ಶಾಲೆಯಲ್ಲಿ ಪ್ರಜಾಪ್ರಭುತ್ವದ ಮಾದರಿಯಲ್ಲಿ ಶಾಲಾ ಸಂಸತ್ತು ಚುನಾವಣೆ ನಡೆಯಿತು. ಮುಖ್ಯಮಂತ್ರಿ ಸ್ಥಾನಕ್ಕೆ 4 ಅಭ್ಯರ್ಥಿಗಳು,ಉಪಮುಖ್ಯಮಂತ್ರಿ ಸ್ಥಾನಕ್ಕೆ 5 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿ ಕಣದಲ್ಲಿದ್ದರು. ನಾಮಪತ್ರ ಪರಿಶೀಲನೆ ವೇಳೆ ಓರ್ವ ಅಭ್ಯರ್ಥಿ ನಾಮಪತ್ರ ಹಿಂಪಡೆದರು. ಚುನಾವಣಾಧಿಕಾರಿಗಳಾಗಿ ಶಿಕ್ಷಕರುಗಳಾದ ಕುಶಾಲಪ್ಪ ಟಿ., ಕು.ಸುಧಾರಾಣಿ, ಶ್ರೀಮತಿ ಮೋಕ್ಷ ಸಹಕರಿಸಿದರು. ಚಂದ್ರಶೇಕರ ಪಿ. ಇವರು ಸಲಹೆಗಾರರಾಗಿ ಸಹಕರಿಸಿದರು. ಮತದಾನ...
ಅನುಭವವು ತಾನೇ ಜಗದ ಅತೀ ದೊಡ್ಡ ಪಾಠವು, ಅನುಭವವು ಕಲಿಸುವ ಪಾಠ ಎಂದೂ ಮರೆಯದು, ಬದುಕಿನಲ್ಲಿ ಎಂದೂ ಮರೆಯದು, ಅದು ಸೋಲೇ ಇರಲಿ ಇಲ್ಲ ಗೆಲುವೇ ಇರಲಿ, ಅದು ನೋವೇ ಇರಲಿ ಇಲ್ಲ ನಲಿವೇ ಇರಲಿ…ಬದುಕಿನ ಪ್ರತಿ ನಿಮಿಷ ಅನುಭವವೇ ತಾನೇ, ಒಂದೊಂದು ನಿಮಿಷವು ಇಲ್ಲಿ ಪಾಠವೇ ತಾನೇ…ಅನುಭವದ ಪುಸ್ತಕದಲ್ಲಿ ಸೋಲುನೂ ಒಂದು ಪಾಠ, ಗೆಲುವನ್ನು...
ಸರಕಾರಿ ಪ್ರೌಢಶಾಲೆ ಎಣ್ಮೂರು ಇಲ್ಲಿ ಸುಮಾರು 12 ವರ್ಷಗಳಿಂದ ಮುಖ್ಯ ಶಿಕ್ಷಕಿಯಾಗಿ ಕರ್ತವ್ಯ ಸಲ್ಲಿಸಿ ವರ್ಗಾವಣೆಗೊಂಡ ಶ್ರೀಮತಿ ಶೀತಲ್ ಯು.ಕೆ ಇವರ ಬೀಳ್ಕೊಡುಗೆ ಸಮಾರಂಭ ಜೂ.11ರಂದು ನಿಂತಿಕಲ್ಲಿನ ಧರ್ಮಶ್ರೀ ಆರ್ಕೇಡ್ ನಲ್ಲಿ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಮುರುಳ್ಯ ಗ್ರಾಮ ಪಂಚಾಯತ್ ಅಧ್ಯಕ್ಷೆ ಕುಮಾರಿ ಜಾನಕಿ ಮುರುಳ್ಯ ಮಾತನಾಡಿ ಪ್ರಾಮಾಣಿಕ ಸೇವೆಯನ್ನು ಎಲ್ಲರೂ ಮೆಚ್ಚುತ್ತಾರೆ ಎನ್ನುವುದಕ್ಕೆ...
Loading posts...
All posts loaded
No more posts