- Thursday
- April 3rd, 2025

ಅಂತರಾಷ್ಟ್ರೀಯ ಯೋಗ ದಿನಾಚರಣೆಯ ಅಂಗವಾಗಿ ಜೆಸಿಐ ಸುಳ್ಯ ಸಿಟಿಯ ವತಿಯಿಂದ ವಿಶ್ವ ಯೋಗ ದಿನಾಚರಣೆಯನ್ನು ಮ್ಯಾಟ್ರಿಕ್ಸ್ ವಿದ್ಯಾಸಂಸ್ಥೆ ಸುಳ್ಯದಲ್ಲಿ ಆಚರಿಸಲಾಯಿತು. ಯೋಗ ತರಬೇತಿಯನ್ನು ಚಂದ್ರಶೇಖರ್ ಕನಕಮಜಲು ರವರು ನೆರವೇರಿಸಿದರು ಮ್ಯಾಟ್ರಿಕ್ಸ್ ವಿದ್ಯಾಸಂಸ್ಥೆ ಸುಳ್ಯದ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಘಟಕಾದ್ಯಕ್ಷ ಬಶೀರ್ ಯು ಪಿ ಸ್ವಾಗತಿಸಿ, ಉಪಾಧ್ಯಕ್ಷರಾದ ರಂಜಿತ್ ಪಿಜೆ ವಂದಿಸಿದರು.

ಚೊಕ್ಕಾಡಿ ಪ್ರೌಢಶಾಲೆ ಕುಕ್ಕುಜಡ್ಕದಲ್ಲಿ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯನ್ನು ಜೂ. 21ರಂದು ಹಮ್ಮಿಕೊಳ್ಳಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಚಾಲಕರಾದ ಶ್ರೀ ರಾಧಾಕೃಷ್ಣ ಬೊಳ್ಳೂರು ಅವರು ವಹಿಸಿ, ಜೀವನದಲ್ಲಿ ಆರೋಗ್ಯಯುತವಾದ ಸದೃಢ ಶರೀರವನ್ನು ಇಟ್ಟುಕೊಳ್ಳಬೇಕಾದರೆ ಕನಿಷ್ಠ ಯೋಗಾಭ್ಯಾಸವನ್ನಾದರೂ ಅಳವಡಿಸಿಕೊಳ್ಳಬೇಕು ಹಾಗೂ ಅದನ್ನು ವಿದ್ಯಾರ್ಥಿ ಜೀವನದಲ್ಲೇ ರೂಢಿಸಿಕೊಳ್ಳಬೇಕು ಎಂದು ನುಡಿದರು. ಮುಖ್ಯ ಅತಿಥಿಯಾಗಿ ಆಗಮಿಸಿದ ಯೋಗೇನ ಚಿತ್ತೈಸ್ಯ ಯೋಗ ಕೇಂದ್ರದ ಯೋಗಶಿಕ್ಷಕಿ...

ಕಾಸರಗೋಡಿನಿಂದ ಸುಳ್ಯಕ್ಕೆ ಬರುತ್ತಿದ್ದ ಕೇರಳ ರಾಜ್ಯ ಸಾರಿಗೆ ಸಂಸ್ಥೆಯ ಬಸ್ ಚಾಲಕನ ನಿಯಂತ್ರಣ ತಪ್ಪಿ ತೋಟಕ್ಕೆ ಚಲಿಸಿದ ಘಟನೆ ಜೂ. 21 ರಂದು ನಡೆದಿದೆ. ಪ್ರಯಾಣಿಕರು ಸಣ್ಣ ಪುಟ್ಟ ಗಾಯಗಳಿಂದ ಪಾರಾಗಿದ್ದಾರೆಂದು ತಿಳಿದುಬಂದಿದೆ.

ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಬೆಳ್ಳಾರೆ ಗ್ರಾಮ ಸಮಿತಿ ವತಿಯಿಂದ ಪಕ್ಷದ 13 ನೇ ಸಂಸ್ಥಾಪನಾ ದಿನಾಚರಣೆಯ ಅಂಗವಾಗಿ ಶ್ರಮದಾನ ಕಾರ್ಯಕ್ರಮವು ಬೆಳ್ಳಾರೆಯ ಅಂಗನವಾಡಿ ಕೇಂದ್ರದಲ್ಲಿ ನಡೆಯಿತು. ಗ್ರಾಮ ಸಮಿತಿ ಅಧ್ಯಕ್ಷರಾದ ಶಹೀದ್ ಬೆಳ್ಳಾರೆ, ಎಸ್‌ಡಿಪಿಐ ಬೆಳ್ಳಾರೆ ಬ್ಲಾಕ್ ಕಾರ್ಯದರ್ಶಿ ಮೊಯಿದಿನ್ ಯು ಎಚ್ ಹಾಗು ಎಸ್‌ಡಿಪಿಐ ಗ್ರಾಮ ಸಮಿತಿ, ಬೂತ್ ಸಮಿತಿ ಪದಾಧಿಕಾರಿಗಳು,...

ಸುಳ್ಯ ತಾಲೂಕಿನ ಎರಡನೇ ಅತೀ ದೊಡ್ಡ ಪೇಟೆ ಎನಿಸಿಕೊಂಡಿರುವ ಬೆಳ್ಳಾರೆ ಪೇಟೆಯ ಬೆಳ್ಳಾರೆ-ಸುಳ್ಯ ಮಾರ್ಗದಲ್ಲಿ ಬಸ್ಸು ತಂಗುದಾಣದ ಸಮೀಪವಿರುವ ಸಾರ್ವಜನಿಕ ಶೌಚಾಲಯ ಅವ್ಯವಸ್ಥೆಗಳಿಂದ ಉಪಯೋಗಶೂನ್ಯ ರೀತಿಯಲ್ಲಿದೆ. ಹೆಂಗಸರಿಗೆ ಹಾಗೂ ಗಂಡಸರಿಗೆ ಪ್ರತ್ಯೇಕ ಶೌಚಾಲಯವಿದ್ದರೂ ನೀರಿನ ಪೂರೈಕೆಯಿಲ್ಲದೆ ಶೌಚಾಲಯ ಸಾರ್ವಜನಿಕರಿಗೆ ಉಪಯೋಗವಾಗದೆ ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬಂತಿದೆ. ಶೌಚಾಲಯದ ಎದುರುಗಡೆ ಕರ್ನಾಟಕ ಪಬ್ಲಿಕ್ ಸ್ಕೂಲ್ ಇದ್ದು ವಿದ್ಯಾರ್ಥಿಗಳು ಶಾಲೆ...

ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಬೆಳ್ಳಾರೆ ಗ್ರಾಮ ಸಮಿತಿಯ ಪಳ್ಳಿಮಜಲ್ ಬೂತ್ ವತಿಯಿಂದ ಪಕ್ಷದ 13ನೇ ಸಂಸ್ಥಾಪನಾ ದಿನಾಚರಣೆಯ ಅಂಗವಾಗಿ ಜೂ.21ರಂದು ಧ್ವಜಾರೋಹಣ ಕಾರ್ಯಕ್ರಮವು ನಡೆಯಿತು. ಪಳ್ಳಿಮಜಲು ಬೂತ್ ಅಧ್ಯಕ್ಷರಾದ ಸದ್ದಾಂ ಧ್ವಜಾರೋಹಣ ನೆರವೇರಿಸಿದರು. ಎಸ್‌ಡಿಪಿಐ ಬೆಳ್ಳಾರೆ ಗ್ರಾಮ ಸಮಿತಿ ಉಪಾಧ್ಯಕ್ಷರಾದ ಶಫೀಕ್ ಬೆಳ್ಳಾರೆ ಸಂದೇಶ ಬಾಷಣ ಮಾಡಿದರು. ಕಾರ್ಯಕ್ರಮದಲ್ಲಿ ಪಳ್ಳಿಮಜಲು ಮಸೀದಿ ಕಾರ್ಯದರ್ಶಿ...

ಎಸ್.ಎಸ್.ಎಲ್.ಸಿ ಯಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದ ಬೆಳ್ಳಾರೆ ಕರ್ನಾಟಕ ಪಬ್ಲಿಕ್ ಸ್ಕೂಲ್ ನ ವಿದ್ಯಾರ್ಥಿ ಅಮರಪಡ್ನೂರು ಗ್ರಾಮದ ಕಜೆಮೂಲೆ ಹಾಸನಡ್ಕ ಸಾತ್ವಿಕ್ ಎಚ್ ಎಸ್ ರವರನ್ನು ಗ್ರಾಮ ಪಂಚಾಯತ್ ವತಿಯಿಂದ ಜೂ.19ರಂದು ಗೌರವಿಸಲಾಯಿತು. ಗ್ರಾಮ ಪಂಚಾಯತ್ ಸದಸ್ಯರಾದ ಅಶೋಕ್ ಚೂಂತಾರು, ಮೀನಾಕ್ಷಿ ಚೂಂತಾರು, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಕೆ ಆಕಾಶ್ ರವರು ಗೌರವಿಸಿದರು. ಈ...

ಥಾಯ್ಲೆಂಡ್ ನಲ್ಲಿ ಜರುಗುವ ಅಂತಾರಾಷ್ಟ್ರೀಯ ಯೋಗ ಸ್ಪರ್ಧೆಗೆ ಆಯ್ಕೆಯಾದ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ಸಾಧಕಅಮರಪಡ್ನೂರು ಗ್ರಾಮದ ತಂಟೆಪ್ಪಾಡಿ ವಿಶ್ವನಾಥ ರವರ ಪುತ್ರ ಮೋನಿಷ್ ತಂಟೆಪ್ಪಾಡಿಯವರಿಗೆ ಅಮರಮೂಡ್ನೂರು ಗ್ರಾಮ ಪಂಚಾಯತ್ ವತಿಯಿಂದ ಸನ್ಮಾನ ಮತ್ತು ಗೌರವಾರ್ಪಣೆಯನ್ನು ಜೂ.19ರಂದು ಗ್ರಾಮ ಪಂಚಾಯತ್ ಸದಸ್ಯರಾದ ಅಶೋಕ್ ಚೂಂತಾರು, ಮೀನಾಕ್ಷಿ ಚೂಂತಾರು, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಕೆ.ಆಕಾಶ್ ರವರು ಹಮ್ಮಿಕೊಂಡರು....