ಆಲೆಟ್ಟಿ ಗ್ರಾಮದ ನಾರ್ಕೋಡು ಎಂಬಲ್ಲಿ ಸುಳ್ಯ ಪ್ರಾದೇಶಿಕ ವಲಯದ ವತಿಯಿಂದ ಜೂ.11 ರಂದು ವಿಶ್ವ ಪರಿಸರ ದಿನಾಚರಣೆ ನಡೆಯಿತು.
ಈ ಸಂದರ್ಭದಲ್ಲಿ ಸ. ಹ.ಪ್ರಾ.ಶಾಲೆ ಯ ವಿದ್ಯಾರ್ಥಿಗಳೊಂದಿಗೆ ಮೇದಿನಡ್ಕ ಪಶ್ಚಿಮ ಮೀಸಲು ಬೆಳ್ಳಿಪ್ಪಾಡಿ ಅರಣ್ಯದಲ್ಲಿ ಹಲಸು, ಮಾವು, ಹುಣಸೆ, ಹೆಬ್ಬಲಸು ಪುನರ್ಪುಳಿ ಜಾತಿಯ ಬೀಜಗಳನ್ನು ಬಿತ್ತುವ ಕಾರ್ಯಕ್ರಮ ನಡೆಸಲಾಯಿತು. ಕಾರ್ಯಕ್ರಮದಲ್ಲಿ ಸುಳ್ಯದ ವಲಯ ಅರಣ್ಯಾಧಿಕಾರಿ ಗಿರೀಶ್.ಆರ್, ಗ್ರಾಮ ಪಂಚಾಯತ್ ಸದಸ್ಯ ಚಂದ್ರಕಾಂತ, ಆಲೆಟ್ಟಿಯ ಉಪ ವಲಯ ಅರಣ್ಯಾಧಿಕಾರಿ ವೆಂಕಟೇಶ, ಮುಖ್ಯ ಶಿಕ್ಷಕರು ಸುನಂದಾ, ಅರಣ್ಯಾಧಿಕಾರಿ ಪತ್ರಪ, ವಾರಿಜ, ಇಲಾಖಾ ಸಿಬ್ಬಂದಿಗಳು, ಎಸ್.ಡಿ.ಎಂ.ಸಿ ಸದಸ್ಯರು, ಶಾಲಾ ಶಿಕ್ಷಕರು.