
ಕೊಲ್ಲಮೊಗ್ರು ಗ್ರಾಮದ ಕಟ್ಟ ಗೋವಿಂದನಗರದ ನಿವಾಸಿ ರಾಮ ಕಟ್ಟ ಎಂಬುವವರು ಜೂ.08 ರಂದು ಹೃದಯಾಘಾತದಿಂದ ಮಂಗಳೂರಿನ ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ ನಿಧನರಾದರು.
4 ದಿವಸಗಳ ಹಿಂದೆ ಬೈಪಾಸ್ ಸರ್ಜರಿ ಮಾಡಿದ್ದು, ಜೂ.07 ರಂದು ಸಂಜೆ ಎದೆನೋವು ಪ್ರಾರಂಭವಾಗಿದ್ದು, ಮಂಗಳೂರಿನ ಫಾದರ್ ಮುಲ್ಲರ್ ಆಸ್ಪತ್ರೆಗೆ ಕೊಂಡೊಯ್ಯಲಾಯಿತು. ಅಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಜೂ.08 ರಂದು ಆಸ್ಪತ್ರೆಯಲ್ಲಿ ನಿಧನರಾದರು.
ಮೃತರು ಪತ್ನಿ ಗಿರಿಜಾ, ಪುತ್ರ ಸಚಿನ್, ಪುತ್ರಿ ಅರ್ಚನಾ ಹಾಗೂ ಕುಟುಂಬಸ್ಥರು, ಬಂಧುಮಿತ್ರರನ್ನು ಅಗಲಿದ್ದಾರೆ.