- Friday
- November 1st, 2024
ಸಾಲ ಪಡೆದು ವಂಚನೆ ನಡೆಸುತ್ತಿರುವ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸಾಲಕ್ಕೆ ಜಾಮೀನು ಹಾಕಿದವರಿಗೆ ಸುಪ್ರೀಂ ಕೋರ್ಟ್ ಬಿಗ್ ಶಾಕ್ ಕೊಟ್ಟಿದೆ. ದಿವಾಳಿತನ ಸಂಹಿತೆ (ಐಬಿಸಿ) ಅಡಿಯಲ್ಲಿ ಸಾಲ ಪಡೆದವರು ಅದನ್ನು ತೀರಿಸಲು ವಿಫಲರಾದರೆ ವೈಯಕ್ತಿಕ ಜಾಮೀನುದಾರರ ವಿರುದ್ಧ ಕ್ರಮ ಜರುಗಿಸಲು ಬ್ಯಾಂಕುಗಳಿಗೆ ಅನುಮತಿ ನೀಡಿದೆ. ಕಾರ್ಪೋರೇಟ್ ಸಾಲಗಾರರಿಗೆ ಇಲ್ಲವೇ ಕಂಪೆನಿಗಳಿಗೆ ನೀಡಲಾದ ಸಾಲಕ್ಕೆ ಜಾಮೀನು...
ಕಡಬ ತಾಲೂಕು ಎಡಮಂಗಲ ಗ್ರಾಮದ ಕೇರ್ಪಡ ಶ್ರೀ ಹರೀಶ ಗೌಡರ ಪುತ್ರಿ ಚೇತನಾರವರ ವಿವಾಹವು ಕಡಬ ತಾಲೂಕು ಚಾರ್ವಾಕ ಗ್ರಾಮದ ನಾಣಿಲ ಶ್ರೀ ತಿಮ್ಮಪ್ಪ ಗೌಡರ ಪುತ್ರ ಗಣೇಶ್ ರವರೊಂದಿಗೆ ಮೇ.20ರಂದು ನಾಣಿಲ ವರನ ಮನೆಯಲ್ಲಿ ನಡೆಯಿತು.
ಮಂಡೆಕೋಲು ಗ್ರಾಮದ ಪೇರಾಲು ಕುಕ್ಕೇಟಿ ದಿ. ಸುಬ್ಬಯ್ಯ ಗೌಡರ ಧರ್ಮಪತ್ನಿ ಶ್ರೀಮತಿ ಮುತ್ತಕ್ಕರವರು ಮೇ.22 ರಂದು ಮುಂಜಾನೆ ನಿಧನರಾದರು.ಮೃತರು ಪುತ್ರರಾದ ಯಶವಂತ ಗೌಡ ಕುಕ್ಕೇಟಿ, ಗಂಗಾಧರ ಗೌಡ ನೆಟ್ಟಣ, ದಯಾನಂದ ಗೌಡ ನಾವೂರು, ಪುರೂಷೋತ್ತಮ ಗೌಡ ಕೊಲ್ಯ, ಶಿವರಾಮ ಗೌಡ ಕುಕ್ಕೇಟಿ, ಪುತ್ರಿಯರಾದ ಶ್ರೀಮತಿ ಶೇಷಮ್ಮ ಉತ್ತಯ್ಯ ಗೌಡ ಬೊಳುಗಲ್ಲು, ಶ್ರೀಮತಿ ಲಲಿತಾ ಚಂದ್ರಶೇಖರ್ ಗೌಡ,...
ಮುಖ್ಯಮಂತ್ರಿ ಯಡಿಯೂರಪ್ಪ ರವರು ಮತ್ತೆ 14 ದಿನಗಳ ಕಾಲ ರಾಜ್ಯದಲ್ಲಿ ಲಾಕ್ ಡೌನ್ ನಿರ್ಧಾರ ಕೈಗೊಂಡಿರುವುದು ಉತ್ತಮವಾಗಿದೆ. ಕೋವಿಡ್ ನಿಯಂತ್ರಣದಲ್ಲಿದ್ದರೂ ಸಂಪೂರ್ಣ ಹತೋಟಿಗೆ ತರುವಂತದ್ದು ಅನಿವಾರ್ಯವಾಗಿದೆ. ರಾಜ್ಯದ ಜನತೆಯ ಆರೋಗ್ಯದ ಹಿತದೃಷ್ಟಿಯಿಂದ ಲಾಕ್ ಡೌನ್ ಅನಿವಾರ್ಯವಾಗಿದೆ. ಸರಕಾರಕ್ಕೆ ಲಾಕ್ ಡೌನ್ ನಿಂದ ನಷ್ಟ ಸಂಭವಿಸಿದ್ದರೂ, ಸರ್ಕಾರ ಜನತೆಯ ಆರೋಗ್ಯದ ಬಗ್ಗೆ ಚಿಂತಿಸುತ್ತಿದೆ. ಯಡಿಯೂರಪ್ಪನವರು ಯಾವಾಗಲೂ ರಾಜ್ಯದ...
ರಾಜ್ಯದಲ್ಲಿ ಕೋವಿಡ್ ಸೋಂಕನ್ನು ಸಂಪೂರ್ಣ ನಿಯಂತ್ರಣ ಮಾಡುವ ನಿಟ್ಟಿನಲ್ಲಿ ಮತ್ತೆ 14 ದಿನಗಳ ಲಾಕ್‌ಡೌನ್ ಮಾಡಲಾಗಿದೆ ಎಂದು ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಈ ಘೋಷಣೆ ಮಾಡಿದ್ದಾರೆ. ಬೆಳಿಗ್ಗೆ 6 ಗಂಟೆಯಿಂದ 10 ಗಂಟೆಯ ವರೆಗೆ ಖರೀದಿಗೆ ಅವಕಾಶ ನೀಡಲಾಗಿದೆ. ಈ ಬಾರಿಯ ಲಾಕ್‌ಡೌನ್‌ನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲಾಗುವುದು. ಈ ಬಗ್ಗೆ ಪೊಲೀಸ್ ಇಲಾಖೆಗೂ ಸೂಚನೆ ನೀಡಿದ್ದೇವೆ....
ಕೊಲ್ಲಮೊಗ್ರ ಗ್ರಾಮದ ಚಾಂತಾಳ ಶ್ರೀಧರ ಗೌಡರ ಪುತ್ರ ಜ್ಞಾನೇಶ್ ರ ವಿವಾಹ ನಿಶ್ಚಿತಾರ್ಥವು ವೆಳ್ಳರಿಕುಂಡು ತಾಲೂಕು ಪನತ್ತಡಿ ಗ್ರಾಮದ ಕಲ್ಲಪ್ಪಳ್ಳಿ ಆಲುಗುಂಜ ಉಡಿಯಾರ ಐತಪ್ಪ ಗೌಡರ ಪುತ್ರಿ ಪೃಥ್ವಿ ಯೊಂದಿಗೆ ಮೇ.20 ರಂದು ವಧುವಿನ ಮನೆಯಲ್ಲಿ ಜರುಗಿತು.
ಲಾಕ್ ಡೌನ್ ವೇಳೆಯಲ್ಲಿ ಕೊಲ್ಲಮೊಗ್ರ ಪರಿಸರದಲ್ಲಿ ಅಕ್ರಮ ಮದ್ಯ ಮಾರಾಟ ಜೋರಾಗಿದ್ದು ರೇಟ್ ಆಗಿದೆ ಎಂದು ತಿಳಿದುಬಂದಿದೆ. ಇದಕ್ಕೆ ಪುಷ್ಟಿ ನೀಡುವಂತೆ ಸ್ಕಿಡ್ ಆಗಿ ಬಿದ್ದ ಬೈಕ್ ಸವಾರ ಲೋಕನಾಥ ರೈ ಶಿವಾಲ ಅವರ ಬೈಕ್ ಬಾಕ್ಸ್ ನ ತುಂಬ ಮದ್ಯ ಪತ್ತೆಯಾಗಿದೆ. ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಲು ಸ್ಥಳೀಯರು ಅಬಕಾರಿ ಇಲಾಖೆಗೆ ದೂರು...
ಕೊಲ್ಲಮೊಗ್ರ ಹರಿಹರ ರಸ್ತೆಯ ನಿಲ್ಕೂರು ಬಳಿ ರಸ್ತೆಗೆ ಇಂದು ಮುಂಜಾನೆ ಮರ ಬಿದ್ದು ಸಂಚಾರ ಸ್ಥಗಿತಗೊಂಡಿತ್ತು. ಕೂಡಲೇ ಸ್ಪಂದಿಸಿದ ಲವಿತ್ ಪಡ್ಪು, ಚಂದ್ರ ನಂಗಾರು, ಶಶಿ ತೋಟದಮಜಲು ಸ್ಥಳಿಯರ ಸಹಕಾರದಿಂದ ತೆರವುಗೊಳಿಸಿದರು.
ಸುಬ್ರಹ್ಮಣ್ಯ ವಲಯ ವಿಪತ್ತು ನಿರ್ವಹಣಾ ಘಟಕದ ಸ್ವಯಂಸೇವಕರು ಕೊಲ್ಲಮೊಗ್ರದಲ್ಲಿ ಎರಡು ಕೊರೋನಾ ಬಾಧಿತರ ಮನೆಗಳಿಗೆ ಭೇಟಿ ನೀಡಿ ಅವರ ಆರೋಗ್ಯ ವಿಚಾರಿಸಿ ಧೈರ್ಯ ತುಂಬುವ ಕೆಲಸವನ್ನು ನಿರಂತರ ಮಾಡುತ್ತಿದ್ದಾರೆ.ಈ ಸಂದರ್ಭದಲ್ಲಿ ಸುಬ್ರಹ್ಮಣ್ಯ ವಲಯ ವಿಪತ್ತು ನಿರ್ವಹಣಾ ಘಟಕದ ಸಂಯೋಜಕರಾದ ಸತೀಶ್.ಟಿ.ಎನ್, ಮಣಿಕಂಠ ಕಟ್ಟ, ಹಾಗೂ ಸುಬ್ರಹ್ಮಣ್ಯ ವಲಯ ವಿಪತ್ತು ನಿರ್ವಹಣಾ ಘಟಕದ ಸದಸ್ಯರಾದ ಹರ್ಷ ಅಡ್ನೂರುಮಜಲು...
Loading posts...
All posts loaded
No more posts