Ad Widget

ಹರಿಹರ ಕೊಲ್ಲಮೊಗ್ರ ಭಾಗದ ಜನರ ತುರ್ತು ಸೇವೆಗೆ ವಾಹನ ವ್ಯವಸ್ಥೆ – ವೆಚ್ಚ ಭರಿಸಲಿದೆ ಕುಕ್ಕೆ ಆಡಳಿತ ಮಂಡಳಿ

ಕೊಲ್ಲಮೊಗ್ರ ಹರಿಹರ ಬಾಳುಗೋಡು ಕಲ್ಮಕಾರು ಗ್ರಾಮಗಳ ಜನರಿಗೆ ಕೋವಿಡ್ ಹಾಗೂ ಅತೀ ಅಗತ್ಯ ಸೇವೆಗಳಿಗಾಗಿ ವಾಹನವೊಂದು ದಿನದ ಇಪ್ಪತ್ಕಾಲ್ಕು ಗಂಟೆಯು ಉಚಿತವಾಗಿ ಕಾರ್ಯನಿರ್ವಹಿಸಲಿದೆ. ಈ ವಾಹನದ ಸಂಪೂರ್ಣ ವೆಚ್ಚವನ್ನು ಶ್ರೀ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಆಡಳಿತಮಂಡಳಿ ಭರಿಸಲಿದೆ. ತುರ್ತು ಸೇವೆಗಳಿಗೆಉದಯ ಶಿವಾಲ 9483904542, 8431200521, ಕೇಶವ ಅಂಬೆಕಲ್ಲು 6361822198, ಪುಷ್ಪರಾಜ್ ಪಡ್ಪು 9449162052 ಇವರನ್ನು ಸಂಪರ್ಕಿಸಬಹುದು.

ಗುತ್ತಿಗಾರು : ಆಶಾಭಾರತಿ ಎಸೋಸಿಯೇಟ್ಸ್ ಆಡಳಿತ ಪಾಲುದಾರ ಹರ್ಷಿತ್ ಜಿ.ಬಿ. ರವರಿಂದ ಕಿಟ್ ವಿತರಣೆ

ಗುತ್ತಿಗಾರು ಮೇ| ಆಶಾಭಾರತಿ ಎಸೋಸಿಯೇಟ್ಸ್ ಆಡಳಿತ ಪಾಲುದಾರರಾದ ಹರ್ಷಿತ್ ಜಿ.ಬಿ.ರವರು ಕೋರೋನಾ ಪೀಡಿತ ಸಂತ್ರಸ್ತರ ನೆರವಿಗೆ ನೀಡುತ್ತಿರುವ ಕಿಟ್ ಗಳನ್ನು ಗುತ್ತಿಗಾರು ಗ್ರಾ.ಪಂ ಗೆ ಇಂದು ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಗ್ರಾ.ಪಂ‌ ಅಭಿವೃದ್ಧಿ ಅಧಿಕಾರಿ ಶ್ಯಾಂ ಪ್ರಸಾದ್ ಯಂ.ಆರ್ , ಗ್ರಾ.ಪಂ. ಅಧ್ಯಕ್ಷೆ ರೇವತಿ ಆಚಳ್ಳಿ , ಸದಸ್ಯರಾದ ಮಾಯಿಲಪ್ಪ ಕೊಂಬೊಟ್ಟು , ಭರತ್ ಕೆ.ವಿ...
Ad Widget

ಕೊಲ್ಲಮೊಗ್ರ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಸಚಿವ ಅಂಗಾರ ಭೇಟಿ

ಮೀನುಗಾರಿಕೆ, ಬಂದರು ಮತ್ತು ಒಳನಾಡು ಸಾರಿಗೆ ಇಲಾಖೆಯ ಸಚಿವರಾದ ಶ್ರೀ ಅಂಗಾರ ರವರು ಮೇ 25 ರಂದು ಕೊಲ್ಲಮೊಗ್ರ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಬೇಟಿ ನೀಡಿ ಕೋವಿಡ್ ನ ಬಗ್ಗೆ ಮಾಹಿತಿ ಪಡೆದರು. ಈ ಸಂದರ್ಭದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಎರಡು oxigen concentrator ನೀಡಿದರು. ಮತ್ತು ಕೋವಿಡ್ ಕಾರ್ಯಪಡೆಯು ರೋಗಿಗಳನ್ನು ಸಾಗಿಸುವ ತುರ್ತು ವಾಹನದ...

ಸುಳ್ಯದಲ್ಲಿ ಇಂದು 29 ಪಾಸಿಟಿವ್

ಸುಳ್ಯ ತಾಲೂಕಿನಲ್ಲಿ ಇಂದು 29 ಕೊರೋನಾ ಪಾಸಿಟಿವ್ ಕಂಡುಬಂದಿದೆ. ನಿನ್ನೆ 55 ಪಾಸಿಟಿವ್ ಬಂದಿತ್ತು. ಒಟ್ಟು 393 ಸಕ್ರೀಯ ಪ್ರಕರಣಗಳಿವೆ.

ಪೆರಾಜೆ : ಲಾರಿ ಗುದ್ದಿ ವಿದ್ಯುತ್ ಕಂಬ ತುಂಡು – ಚಾಲಕ ಪಾರು

ಪೆರಾಜೆ ಸಮೀಪ ಕಲ್ಚರ್ಪೆಯಲ್ಲಿ ಸುಳ್ಯ ಕಡೆಗೆ ಬರುತ್ತಿದ್ದ ಮಿನಿ ಟೆಂಪೋ ವಿದ್ಯುತ್ ಕಂಬಕ್ಕೆ ಗುದ್ದಿದ ಘಟನೆ ಇಂದು ಮುಂಜಾನೆ ನಡೆದಿದೆ. ಗುದ್ದಿದ ರಭಸಕ್ಕೆ ವಿದ್ಯುತ್ ಕಂಬ ತುಂಡಾಗಿದ್ದು ಚಾಲಕ ಅಪಾಯದಿಂದ ಪಾರಾಗಿದ್ದಾರೆಂದು ತಿಳಿದುಬಂದಿದೆ.

ಪಂಜದ ಮೊರಾರ್ಜಿ ವಸತಿ ಶಾಲೆಯಲ್ಲಿ ನಿರ್ಮಿತವಾದ ಕೋವಿಡ್ ಕೇರ್ ಸೆಂಟರ್ ಸಚಿವ ಎಸ್.ಅಂಗಾರರಿಂದ ಉದ್ಘಾಟನೆ – “ಕೋವಿಡ್ ಕೇರ್ ಸೆಂಟರ್‌ ಗ್ರಾಮೀಣ ಜನರ ಆರೋಗ್ಯ ವೃದ್ಧಿಗೆ ಪೂರಕ”

ಪಂಜದ ಮೊರಾರ್ಜಿ ವಸತಿ ಶಾಲೆಯಲ್ಲಿ ನಿರ್ಮಿತವಾದ ಸುವ್ಯವಸ್ಥಿತವಾದ ಕೋವಿಡ್ ಕೇರ್ ಸೆಂಟರ್‌ನಿಂದ ಗ್ರಾಮೀಣ ಭಾಗದಲ್ಲಿ ಆರೋಗ್ಯ ಭಾಗ್ಯ ಸಮೃದ್ಧಿಗೆ ಪೂರಕವಾಗಿದೆ.ಇಲ್ಲಿ ಸೋಂಕಿತರಿಗೆ ಬೇಕಾದ ಸಕಲ ವ್ಯವಸ್ಥೆಯನ್ನು ಸರಕಾರದಿಂದ ಮಾಡಲಾಗಿದೆ.ಅಲ್ಲದೆ ಆಮ್ಲಜನಕ ಕನ್ಸಲೇಟರ್ ಅನ್ನು ಒದಗಿಸಿದ್ದೇವೆ. ಕಾಲಕಾಲಕ್ಕೆ ಬೇಕಾದ ಪೌಷ್ಠಿಕ ಆಹಾರವನ್ನು ವ್ಯವಸ್ಥಿತವಾಗಿ ಒದಗಿಸಲು ಕ್ರಮ ಕೈಗೊಳ್ಳಲಾಗಿದೆ. ಸರ್ವರೂ ಆರೋಗ್ಯ ರಕ್ಷಣೆಗೆ ಕರ ಜೋಡಿಸಬೇಕು. ನಮ್ಮೊಳಗೆ ಉಂಟಾಗುವ...

ಸುಳ್ಯ : ಮೆಸ್ಕಾಂ ಸಿಬ್ಬಂದಿಗಳಿಗೆ ಲಸಿಕೆ ವಿತರಣೆ

ಕೊರೊನಾ ವಾರಿಯರ್ ಗಳೆಂದು ಮೆಸ್ಕಾಂ ಸಿಬ್ಬಂದಿಗಳನ್ನು ಸರಕಾರ ಪರಿಗಣಿಸಿರುವ ಹಿನ್ನೆಲೆಯಲ್ಲಿ ಇಂದು ಪುರಭವನದಲ್ಲಿ ಇಲಾಖೆಯ ಸಿಬ್ಬಂದಿಗಳಿಗೆ ಲಸಿಕೆ ವಿತರಣೆ ನಡೆಯಿತು.

ಮತ್ತೆ ಏರಿಕೆ ಕಂಡ ಕೊರೊನಾ – ಇಂದು ಸುಳ್ಯದಲ್ಲಿ 55 ಪಾಸಿಟಿವ್

ಸುಳ್ಯ ತಾಲೂಕಿನಲ್ಲಿ ಇಂದು 55 ಕೊರೋನಾ ಪಾಸಿಟಿವ್ ದೃಢಪಟ್ಟಿದೆ. ನಿನ್ನೆ 44 ಪ್ರಕರಣ ಸೇರಿದಂತೆ ಕಳೆದೊಂದು ವಾರದಿಂದ ಇಳಿಕೆ ಕಂಡಿದ್ದ ಕೊರೊನಾ ಪ್ರಕರಣ ಪುನಃ ಏರಿಕೆ ಕಂಡಿದೆ.

ಸುಳ್ಯದಲ್ಲಿ ಇಂದು 44 ಪಾಸಿಟಿವ್

ಸುಳ್ಯ ತಾಲೂಕಿನಲ್ಲಿ 44 ಕೊರೋನಾ ಪಾಸಿಟಿವ್ ದೃಢಪಟ್ಟಿದೆ. ಮಡಪ್ಪಾಡಿಯಲ್ಲಿ 3, ನೆಲ್ಲೂರು ಕೆಮ್ರಾಜೆಯಲ್ಲಿ 2, ಆಲೆಟ್ಟಿಯಲ್ಲಿ 3, ಬೆಳ್ಳಾರೆಯಲ್ಲಿ 1, ಸುಳ್ಯದಲ್ಲಿ 6, ಕಳಂಜದಲ್ಲಿ 2, ಉಬರಡ್ಕ ಮಿತ್ತೂರಿನಲ್ಲಿ 3, ಗುತ್ತಿಗಾರಿನಲ್ಲಿ 1, ದೇವಚಳ್ಳದಲ್ಲಿ 4, ಎಡಮಂಗಲದಲ್ಲಿ 2, ಅಮರಮುಡ್ನೂರಿನಲ್ಲಿ 1, ಕೊಡಿಯಾಲದಲ್ಲಿ 5, ಮುರುಳ್ಯದಲ್ಲಿ 2, ಮರ್ಕಂಜದಲ್ಲಿ 1, ನಾಲ್ಕೂರಿನಲ್ಲಿ 2, ಜಾಲ್ಸೂರಿನಲ್ಲಿ 1,...

ಮೆಸ್ಕಾಂ ನೌಕರರನ್ನು ಕೊರೊನಾ ವಾರಿಯರ್ ಗಳೆಂದು ಪರಿಗಣಿಸಿ ಲಸಿಕೆ ನೀಡಲು ಆದೇಶ : ಸುಳ್ಯದಲ್ಲಿ ಮೇ. 24 ರಂದು ಲಸಿಕೆ ವಿತರಣೆ

ರಾಜ್ಯದ ಕವಿಪ್ರನಿನಿ ಮತ್ತು ಎಲ್ಲಾ ವಿದ್ಯುತ್ ಸರಬರಾಜು ಕಂಪೆನಿಗಳ ಅಧಿಕಾರಿ ಮತ್ತು ನೌಕರರನ್ನು ಕೊರೊನಾ ವಾರಿಯರ್‌ ಗಳೆಂದು ಪರಿಗಣಿಸಿ ಲಸಿಕೆ ಹಾಗೂ ಇತರ ಸೌಲಭ್ಯ ನೀಡಲು ಸರ್ಕಾರ ಆದೇಶಿಸಿದೆ. ಇಂದನ ಇಲಾಖೆಯು ಅವಶ್ಯ ಸೇವೆಯಾಗಿರುವುದರಿಂದ ಲಸಿಕೆ ಹಾಗೂ ವಿಮಾ ಯೋಜನೆಗಳನ್ನು ಜಾರಿಗೊಳಿಸಿ ಕರೊನಾ ಸೋಂಕಿನಿಂದ ಮೃತಪಟ್ಟಲ್ಲಿ ಅವಲಂಬಿತರಿಗೆ ರೂ. 50 ಲಕ್ಷದ ಮೊತ್ತವನ್ನು ನೀಡುವಂತೆ ಆದೇಶದಲ್ಲಿ...
Loading posts...

All posts loaded

No more posts

error: Content is protected !!