- Thursday
- November 21st, 2024
ಈ ಹಿಂದೆ ಲಸಿಕೆಗಳು ಅಧಿಕವಿರುವಾಗ ಜನತೆ ಲಸಿಕೆ ತೆಗೆದುಕೊಳ್ಳಲು ಹಿಂದೇಟು ಹಾಕಿದರು.ಇದೀಗ ಅಧಿಕ ಪ್ರಮಾಣದಲ್ಲಿ ಬೇಡಿಕೆ ಇರುವುದರಿಂದ ಪೂರೈಕೆ ಮಾಡುವುದು ಕಷ್ಟವಾಗಿದೆ. ಮುಂದಿನ ಒಂದು ವಾರದ ಒಳಗೆ ಅಧಿಕ ಪ್ರಮಾಣದಲ್ಲಿ ಸಾರ್ವಜನಿಕರಿಗೆ ಲಸಿಕೆ ವಿತರಣೆಯಾಗಲಿದೆ. ಈ ಮೂಲಕ ಸರ್ವರಿಗೂ ಲಸಿಕೆ ದೊರಕುವಂತೆ ಮಾಡಲು ಸರಕಾರ ಕಾರ್ಯಪ್ರವೃತ್ತವಾಗಿದೆ. ಸುಳ್ಯ ವಿಧಾನ ಸಭಾ ಕ್ಷೇತ್ರವು ಗ್ರಾಮೀಣ ಪ್ರದೇಶಗಳಿಂದ ಕೂಡಿರುವ...
ಕೋವಿಡ್-19 ವೈರಸ್ ವ್ಯಾಪಕವಾಗಿ ಹರಡುತ್ತಿರುವ ಈ ಸಂದರ್ಭದಲ್ಲಿ ಕೊಲ್ಲಮೊಗ್ರ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಜನರ ಕೋವಿಡ್-19 ಹಾಗೂ ಇತರ ವೈಧ್ಯಕೀಯ ತುರ್ತು ಸೇವೆಗಳಿಗಾಗಿ ಕಲ್ಮಕಾರು ಗ್ರಾಮಪಂಚಾಯತ್ ಸದಸ್ಯರಾದ ಪುಷ್ಪರಾಜ್ ಪಡ್ಪು ಅವರ ವಾಹನವನ್ನು ಮೀಸಲಿರಿಸಲಾಗಿದೆ. ಈ ವಾಹನವು ದಿನದ 24 ಗಂಟೆಯೂ ಕಾರ್ಯನಿರ್ವಹಿಸಲಿದ್ದು ಇದರ ನಿರ್ವಹಣೆಯನ್ನು ಸೇವಾಭಾರತಿ ಕೊಲ್ಲಮೊಗ್ರ ಹಾಗೂ ಕೋವಿಡ್-19 ಕಾರ್ಯಪಡೆ ಕೊಲ್ಲಮೊಗ್ರ ನಿರ್ವಹಿಸಲಿದೆ....
ಕಣ್ಣಿಗೆ ಕಾಣದೇ ಬಂದಿರುವ ಈ ಕೊರೊನ ವೈರಸ್ ಮನುಷ್ಯನ ಜೀವನವನ್ನು ಹಾಳು ಮಾಡಿದೆ. ಈ ವೈರಸನ್ನು ಹೋಗಲಾಡಿಸಲು ಲಾಕ್-ಡೌನ್ ಸೃಷ್ಟಿಯಾಗಿ ಇಂದು ಜನರಲ್ಲಿ ಅನೇಕ ರೀತಿಯ ಬದಲಾವಣೆಯನ್ನು ಕಾಣುತ್ತಿದ್ದೇವೆ. ಒಂದು ಕಡೆ ಲಾಕ್ ಡೌನ್ ಇನ್ನೊಂದು ಕಡೆ ಕೊರೊನ ವೈರಸ್ ಆತಂಕ. ಇವೆರಡು ಮನುಷ್ಯರಲ್ಲಿ ಭಯದ ವಾತಾವರಣ ಉಂಟು ಮಾಡಿದೆ. ವೈರಸ್ ಕಾಣಿಸಿಕೊಂಡು ಒಂದು ವರ್ಷ...