- Tuesday
- April 1st, 2025

ಸುಬ್ರಹ್ಮಣ್ಯ ವಲಯ ವಿಪತ್ತು ನಿರ್ವಹಣಾ ಘಟಕದ ಸ್ವಯಂಸೇವಕರು ಕೊಲ್ಲಮೊಗ್ರದಲ್ಲಿ ಎರಡು ಕೊರೋನಾ ಬಾಧಿತರ ಮನೆಗಳಿಗೆ ಭೇಟಿ ನೀಡಿ ಅವರ ಆರೋಗ್ಯ ವಿಚಾರಿಸಿ ಧೈರ್ಯ ತುಂಬುವ ಕೆಲಸವನ್ನು ನಿರಂತರ ಮಾಡುತ್ತಿದ್ದಾರೆ.ಈ ಸಂದರ್ಭದಲ್ಲಿ ಸುಬ್ರಹ್ಮಣ್ಯ ವಲಯ ವಿಪತ್ತು ನಿರ್ವಹಣಾ ಘಟಕದ ಸಂಯೋಜಕರಾದ ಸತೀಶ್.ಟಿ.ಎನ್, ಮಣಿಕಂಠ ಕಟ್ಟ, ಹಾಗೂ ಸುಬ್ರಹ್ಮಣ್ಯ ವಲಯ ವಿಪತ್ತು ನಿರ್ವಹಣಾ ಘಟಕದ ಸದಸ್ಯರಾದ ಹರ್ಷ ಅಡ್ನೂರುಮಜಲು...

ದೇವಚಳ್ಳ ಗ್ರಾಮದ ಕಂದ್ರಪ್ಪಾಡಿ ಪಡಿತರ ವಿತರಣಾ ಕೇಂದ್ರದಲ್ಲಿ ಕೊರೋನಾ ವಾರಿಯರ್ಸ್ ಗಳಾದ ಶಶಿಧರ್ ಬಾಳೆಗುಡ್ಡೆ,ಮುಖೇಶ್ ಪಡ್ಪು, ಚಂದ್ರಶೇಖರ್ ಕಡೋಡಿ, ರಾಜೇಶ್ ಅಂಬೆಕಲ್ಲು, ಪುನೀತ್ ಮುಂಡೋಡಿ, ಶಿವಪ್ರಕಾಶ್ ಕಡಪಳ, ಪಂಚಾಯತ್ ಸದಸ್ಯ ರಮೇಶ್ ಪಡ್ಪು, ಶೈಲೇಶ್ ಅಂಬೆಕಲ್ಲು ಹಾಗೂ ಸಹಕಾರ ಸಂಘದ ಸಿಬ್ಬಂದಿ ಪಡಿತರ ವಿತರಣೆಗೆ ಸಹಕಾರ ನೀಡಿದರು.

ದೇವಚಳ್ಳ ಗ್ರಾಮ ಪಂಚಾಯತ್ ವ್ಯಾಪ್ತಿಯ ವಾಲ್ತಾಜೆ ಕಾಲೋನಿಯಲ್ಲಿ ಅನಾರೋಗ್ಯ ಪೀಡಿತರ ಮನೆ ಭೇಟಿ ಮಾಡಿದ ಗ್ರಾ.ಪಂ.ಸದಸ್ಯರು ಅವರಿಗೆ ಮಾನಸಿಕ ಸ್ಥೈರ್ಯ ತುಂಬಿದರು. ಈ ವೇಳೆ ಗ್ರಾ.ಪಂ. ಸದಸ್ಯ ಶೈಲೇಶ್ ಅಂಬೆಕಲ್ಲು, ರಮೇಶ್ ಪಡ್ಪು, ಪಿಡಿಓ ಗುರುಪ್ರಸಾದ್ ಉಪಸ್ಥಿತರಿದ್ದರು.

ಗುತ್ತಿಗಾರಿನ ಕಿರಣ ರಂಗ ಅಧ್ಯಯನ ಸಂಸ್ಥೆ ಮತ್ತು ಕಲಾಮಾಯೆ ಏನೆಕಲ್ಲು ಪ್ರಸ್ತುತ ಪಡಿಸುವ ಅರೆಬಾಸೆ ಪದ್ಯ ಕವನಗಳ ಗಮ್ಮತ್ ಆನ್ಲೈನ್ ನಲ್ಲಿ ನಡೆಯಲಿದೆ. ಕವಿಗಳಿಗೆ, ಕವನ ವಾಚಕರಿಗೆ ಉಚಿತ ಅವಕಾಶವಿರುವ ಈ ವಿನೂತನ ಕಾರ್ಯಕ್ರಮದಲ್ಲಿ ಭಾಗವಹಿಸಿ ಅರೆಬಾಸೆ ಘನತೆ ಗೌರವ ಹೆಚ್ಚಿಸುವಂತೆ ಹಾಗೂ ಅತೀ ಹೆಚ್ಚು ವ್ಹೀವ್ಸ್ ಪಡೆದವರಿಗೆ ಕಿರಣ ಗೌರವ ಸನ್ಮಾನ ನೀಡಿ ಗೌರವಿಸಲಾಗುವುದು...

ಪ್ರತಿಷ್ಠಿತ ಗ್ರಾಮ ಮಡಪ್ಪಾಡಿ ಆದರೇ ರಸ್ತೆ ಬಗ್ಗೆ ಮಾತ್ರ ಅದೆಷ್ಟೋ ವರ್ಷಗಳಿಂದ ನಿರ್ಲಕ್ಷ್ಯಕ್ಕೆ ಒಳಗಾಗುತ್ತಾ ಬಂದಿದೆ. ಸೇವಾಜೆಯಿಂದ ಮಡಪ್ಪಾಡಿಗೆ ಸಾಗುವ ರಸ್ತೆ ಕೆಲವೆ ವರ್ಷಗಳ ಹಿಂದೆ ಮರುಡಾಮರೀಕರಣ ನಡೆದಿದ್ದರೂ ಡಾಮರು ಕಿತ್ತು ಹೋಗಿ ರಸ್ತೆ ಮತ್ತೆ ಅಸ್ತವ್ಯಸ್ತವಾಗಿದೆ ಸೇವಾಜೆಯಿಂದ ಕಜೆವರೆಗಿನ ರಸ್ತೆ ಗುಂಡಿಗಳಿಗೆ ಕಳೆದ ಬೇಸಿಗೆಯಲ್ಲಿ ಮಣ್ಣು ಹಾಕಿ ಮುಚ್ಚಲಾಗಿತ್ತು. ಈ ಮಣ್ಣು ಬೇಸಿಗೆ ಕಾಲವಿಡೀ...