- Tuesday
- April 1st, 2025

ಲಸಿಕೆ ಕೊರತೆಯಾಗಿರುವ ಕಾರಣದಿಂದ ತಾಲೂಕು ಸಾರ್ವಜನಿಕ ಆಸ್ಪತ್ರೆಯ ವತಿಯಿಂದ ಕೆವಿಜಿ ಪುರಭವನದಲ್ಲಿ ನಡೆಯುತ್ತಿರುವ ಕೋವಿಡ್ ಲಸಿಕಾ ಕೇಂದ್ರದಲ್ಲಿ ನಾಳೆ(ಮೇ4) ಲಸಿಕಾ ಕಾರ್ಯಕ್ರಮ ಸ್ಥಗಿತಗೊಳಿಸಲಾಗಿದೆ ಎಂದು ತಿಳಿದುಬಂದಿದೆ. ಯಾವುದೇ ಲಸಿಕೆ ಲಭ್ಯವಿಲ್ಲದ ಕಾರಣ ಲಸಿಕಾ ಕಾರ್ಯಕ್ರಮ ನಾಳೆ ಇರುವುದಿಲ್ಲ. ಕೋವಿಡ್ ಲಸಿಕೆ ಬಂದಾಗ ತಿಳಿಸಲಾಗುವುದು ಎಂದು ತಾಲೂಕು ಆಡಳಿತ ಪ್ರಕಟಣೆಯಲ್ಲಿ ತಿಳಿಸಿದೆ. ಕೋವಿಡ್ ಪ್ರತಿರೋಧಕವಾಗಿ ನೀಡುವ ಕೋವ್ಯಾಕ್ಸಿನ್...

ಕಾಂಚೋಡು ಶ್ರೀ ಮಂಜುನಾಥೇಶ್ವರ ದೇವಾಲಯದ ಕೆರೆಯ ಸ್ವಚ್ಛತೆ ಮತ್ತು ಹೂಳೆತ್ತುವ ಕಾರ್ಯವನ್ನು ದೇವಾಲಯದ ಧರ್ಮದರ್ಶಿಗಳಾದ ಪರಮೇಶ್ವರಯ್ಯ ಕಾಂಚೋಡು ಅವರ ಮಾರ್ಗದರ್ಶನದಲ್ಲಿ ಮೇ 2 ರಂದು ಕರಸೇವೆಯ ಮೂಲಕ ನಡೆಸಲಾಯಿತು. ಗೋವಿಂದಯ್ಯ ಕಾಂಚೋಡು, ಸತ್ಯನಾರಾಯಣ ಕಾಂಚೋಡು,ರಾಮಪ್ರಸಾದ ಕಾಂಚೋಡು, ಮಹಾಬಲೇಶ್ವರ ಕಾಂಚೋಡು,ರವಿಶಂಕರ ಕಾಂಚೋಡು, ಅಣ್ಣಪ್ಪ ನಾೖಕ ಅಯ್ಯನಕಟ್ಟೆ, ಗುರುವಪ್ಪ ನಾೖಕ ಚಾಕೊಟೆಡ್ಕ, ಶಿವಪ್ಪ ನಾೖಕ ಚಾಕೊಟೆಡ್ಕ, ಜಾಹ್ನವಿ ಕಾಂಚೋಡು,...

ಕೋವಿಡ್ 19 ಮಹಾಮಾರಿ ವಿಶ್ವವನ್ನೇ ಕಂಗೆಡಿಸಿ ಇದೀಗ ಒಂದು ವರ್ಷ ಕಳೆದಿದ್ದು ಕೋವಿಡ್ನ ಎರಡನೇ ಅಲೆ ಬರಸಿಡಿಲಿನಂತೆ ಸಮಾಜಕ್ಕೆ ಅಪ್ಪಳಿಸಿದೆ. ಕಳೆದ ವರ್ಷಕ್ಕಿಂತ ಹೆಚ್ಚು ಭೀಕರತೆ ಕಾಣಿಸುತ್ತಿದೆಯಾದರೂ ಈ ವೈರಸ್ ಅನ್ನು ಸಮರ್ಥವಾಗಿ ಎದುರಿಸಲು ದೇಶದ ವೈದ್ಯರು, ವಿಜ್ಞಾನಿಗಳು, ತಜ್ಞರು ಸದೃಢವಾಗಿ ಸಿದ್ಧರಾಗಿರುವುದು ಆಶಾಸ್ಪದ ಸಂಗತಿ. ಸಾಮಾಜಿಕ ಅಂತರ ಕಾಪಾಡುವುದು ಮತ್ತು ಆದಷ್ಟು ಮನೆಯಲ್ಲೇ ಇದ್ದು...

ಸುಳ್ಯ ತಾಲೂಕಿನಲ್ಲಿ ಕೊರೋನಾ ಪ್ರಕರಣಗಳ ಸಂಖ್ಯೆ ಏರಿಕೆಯಾಗುತ್ತ ಹೋಗುತ್ತಿದ್ದು ಇಂದು 86 ಪ್ರಕರಣಗಳು ದೃಢಪಟ್ಟಿರುವುದಾಗಿ ಆರೋಗ್ಯ ಇಲಾಖೆ ವರದಿ ನೀಡಿದೆ. ನಿನ್ನೆ 65 ಪ್ರಕರಣ ಪತ್ತೆಯಾಗಿದ್ದು, ಇಂದು 86 ಮಂದಿಗೆ ಪಾಸಿಟಿವ್ ಬಂದಿದ್ದು, ಪ್ರಕರಣದ ಸಂಖ್ಯೆ ಇನ್ನೂ ಹೆಚ್ಚಾಗುವ ಸಾಧ್ಯತೆ ಹೆಚ್ಚಿದೆ. ಸಾರ್ವಜನಿಕರು ಕಡ್ಡಾಯವಾಗಿ ಮಾಸ್ಕ್ ಹಾಕುವುದರ ಜತೆಗೆ ಕೋವಿಡ್ ಮಾರ್ಗಸೂಚಿ ಪಾಲಿಸಬೇಕೆಂದು ವೈದ್ಯಾಧಿಕಾರಿಗಳು ತಿಳಿಸಿದ್ದಾರೆ.