- Saturday
- April 19th, 2025

ಆನೆ ದಾಳಿಗೆ ಒಳಗಾಗಿ ಗಂಭೀರ ಗಾಯಗೊಂಡಿದ್ದ ವ್ಯಕ್ತಿ ಆಸ್ಪತ್ರೆಯಲ್ಲಿ ಮೃತಪಟ್ಟ ಘಟನೆ ಕಲ್ಮಕಾರಿನಿಂದ ವರದಿಯಾಗಿದೆ. ಕಲ್ಮಕಾರಿನ ಮೆಂಟೆಕಜೆ ಶಿವರಾಮ ಗೌಡ(80) ಎಂಬವರು ಮೃತಪಟ್ಟ ದುರ್ದೈವಿ. ಇವರ ಮನೆಯಿಂದ ಸಮೀಪದ ಕಾಡಿನಿಂದ ಪೈಪ್ ನಲ್ಲಿ ನೀರು ಬರುತ್ತಿತ್ತು. ಇಂದು ಶಿವರಾಮ ಗೌಡರು ಪೈಪ್ ಸರಿ ಮಾಡಲೆಂದು ಹೋದ ಸಂದರ್ಭದಲ್ಲಿ ಕಾಡಾನೆ ದಾಳಿ ನಡೆಸಿದೆ ಎಂದು ತಿಳಿದು ಬಂದಿದೆ....

ಅಪಘಾತದಲ್ಲಿ ಕೈ ಕಳೆದುಕೊಂಡ ಲಲಿತಾ ಅವರಿಗೆ ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ರೂ 2 ಲಕ್ಷ ರೂ ಮಂಜೂರಾಗಿದ್ದು, ಸಚಿವ ಎಸ್ ಅಂಗಾರ ಇಂದು ಚೆಕ್ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ತಹಶೀಲ್ದಾರ್ ಕು.ಅನಿತಾಲಕ್ಷ್ಮೀ , ನ.ಪಂ.ಅಧ್ಯಕ್ಷ ವಿನಯಕುಮಾರ್ ಕಂದಡ್ಕ ಉಪಸ್ಥಿತರಿದ್ದರು.

ವಿಶ್ವ ಹಿಂದು ಪರಿಷದ್ ಭಜರಂಗದಳ, ಹಿಂದೂ ಜಾಗೃತ ಸಮಾವೇಶ ಸಮಿತಿ ಬೆಳ್ಳಾರೆ ವಲಯ ಇವರ ಸಹಯೋಗದೊಂದಿಗೆ ಶ್ರೀ ರಾಮೋತ್ಸವ ಕಾರ್ಯಕ್ರಮವು ಎ.18 ರಂದು ಬೆಳ್ಳಾರೆ ಅಜಪಿಲ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ನಡೆಯಲಿದ್ದು ಆಮಂತ್ರಣ ಪತ್ರಿಕೆ ಬಿಡುಗಡೆಯು ಎ.7 ರಂದು ಅಜಪಿಲ ದೇವಸ್ಥಾನದಲ್ಲಿ ನಡೆಯಿತು.ದೇವಸ್ಥಾನದಲ್ಲಿ ಪೂಜೆ ನಡೆಸಿದ ಬಳಿಕ ಆಮಂತ್ರಣ ಪತ್ರ ಬಿಡುಗಡೆಗೊಳಿಸಲಾಯಿತು. ಈ ಸಂದರ್ಭದಲ್ಲಿ ವಿಶ್ವ...

ಗುತ್ತಿಗಾರು. ಎ.4: ಸರ್ಕಾರಿ ಯೋಜನೆಯನ್ನು ಸರಿಯಾಗಿ ಬಳಸಿಕೊಳ್ಳದಿದ್ದರೆ ಏನಾಗುತ್ತದೆ ಎಂಬುದಕ್ಕೆ ತಾಜಾ ಉದಾಹರಣೆಯಾಗಿದೆ ಗುತ್ತಿಗಾರು ಗ್ರಾ.ಪಂ ಮೂಲಕ ಸ್ಥಾಪನೆಯಾದ ಗರಡಿ ಮನೆ. ಉದ್ಘಾಟನೆಗೊಂಡು ವರ್ಷ ಕಳೆದರೂ ಉಪಯೋಗಕ್ಕೆ ಸಿಗದ ಈ ಗರಡಿಮನೆ ಊಟಕ್ಕಿಲ್ಲದ ಉಪ್ಪಿನಕಾಯಿಯಂತಾಗಿದೆ. ಗ್ರಾಮವಿಕಾಸ ಯೋಜನೆಯಲ್ಲಿ ಗುತ್ತಿಗಾರು ಹಾಗೂ ಸುಬ್ರಹ್ಮಣ್ಯ ಪಂಚಾಯತ್ ಗಳಿಗೆ ಸರಕಾರ ಸ್ಥಳೀಯ ಮಟ್ಟದಲ್ಲಿ ಜಿಮ್ ಸ್ಥಾಪನೆಗೆ ಅನುದಾನ ನೀಡಿತ್ತು. ಅದರಂತೆ...

ಸುಳ್ಯ ತಾಲೂಕು 2ನೇ ತುಳು ಸಾಹಿತ್ಯ ಸಮ್ಮೇಳನ ಮತ್ತು ಕೃಷಿ ಮೇಳ ಎ. 19 ರಂದು ಕಳಂಜ ಗ್ರಾಮದ ಕೋಟೆಮುಂಡುಗಾರು ಶಾಲೆಯಲ್ಲಿ ನಡೆಯಲಿದೆ ಎಂದು ಒಡಿಯೂರು ಷಷ್ಠ್ಯಬ್ದ ಸಂಭ್ರಮ ಸಮಿತಿಯ ಅಧ್ಯಕ್ಷರಾದ ವಿಶ್ವನಾಥ ರೈ ಕಳಂಜ ಹೇಳಿದರು.ಸುಳ್ಯ ಪ್ರೆಸ್‌ಕ್ಲಬ್‌ನಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಅವರು, ಕಾರ್ಯಕ್ರಮದ ವಿವರ ನೀಡಿದರು. ಒಡಿಯೂರು ಶ್ರೀಗಳವರ ಷಷ್ಠ್ಯಬ್ದ ಸಂಭ್ರಮ ತುಳು ತಾಲೂಕು...

ಕಳಂಜ ಗ್ರಾಮದ ಕೋಟೆಮುಂಡುಗಾರು ಶಾಲಾ ವಠಾರದಲ್ಲಿ ತುಳು ಸಾಹಿತ್ಯ ಸಮ್ಮೇಳನ ಮತ್ತು ಕೃಷಿ ಸಮ್ಮೆಳನವು ಎ.19ರಂದು ನಡೆಯಲಿದ್ದು ಈ ಬಗ್ಗೆ ಏ.4 ರಂದು ಆಮಂತ್ರಣ ಪತ್ರಿಕೆ ಬಿಡುಗಡೆ ಕಳಂಜ ಬಾಳಿಲ ಪ್ರಾ.ಕೃ.ಪ.ಸ.ಸಂಘದ ಸಭಾಂಗಣದಲ್ಲಿ ನಡೆಯಿತು. ತುಳು ಸಮ್ಮೇಳನ ಅಧ್ಯಕ್ಷ ಸುಭಾಶ್ಚಂದ್ರ ರೈ, ತುಳು ತುಡರ್ ಕೂಟ ಸುಳ್ಯ ಇದರ ಅಧ್ಯಕ್ಷ ಜೆ.ಕೆ. ರೈ, ಕಾರ್ಯಾಧ್ಯಕ್ಷ ಕೂಸಪ್ಪಗೌಡ...

ದೇಶಾದ್ಯಂತ ಕೊರೊನಾ ವೈರಸ್ ನ 2ನೇ ಅಲೆ ಪ್ರಾರಂಭವಾಗಿದ್ದು ಜಿಲ್ಲೆಯಲ್ಲೂ ಕೂಡಾ ದಿನದಿಂದ ದಿನಕ್ಕೆ ಕೊರೊನಾ ಪ್ರಕರಣಗಳು ಹೆಚ್ಚುತ್ತಿದೆ. ಈ ವೈರಾಣುವಿನ ವಿರುದ್ದ ಹೋರಾಡಲು ಈಗಾಗಲೇ ದೇಶಾದ್ಯಂತ ಕೋವಿಡ್ ಲಸಿಕೆಯನ್ನು ಸಾರ್ವಜನಿಕರಿಗೆ ನೀಡಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಇದೇ ಬರುವ ಎ. 8ನೇ ಗುರುವಾರ ಬೆಳಿಗ್ಗೆ ಗಂಟೆ 10 ರಿಂದ ಸಂಜೆ 4 ಗಂಟೆಯವರೆಗೆ ಪೆರುವಾಜೆ ಗ್ರಾಮ...

ಅರಣ್ಯ ಇಲಾಖೆಯ ಜನಹಿತ ವಿರೋಧಿ ಕಾರ್ಯಯೋಜನೆಯ ಆದೇಶವನ್ನ ಪರಾಮರ್ಶಿಸಿ, ಕಾರ್ಯ ಗತಗೊಳಿಸುವಂತೆ ಆಗ್ರಹಿಸಿ ಮಲೆನಾಡು ಜನಹಿತ ರಕ್ಷಣಾ ವೇದಿಕೆ ವತಿಯಿಂದ ಎ.𝟎𝟓 ರಂದು ಮಂಗಳೂರಿನಲ್ಲಿ ಅಪರ ಜಿಲ್ಲಾಧಿಕಾರಿ ಎಂ.ಜೆ ರೂಪಾ ಅವರ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಮಲೆನಾಡು ಜನಹಿತ ರಕ್ಷಣಾ ವೇದಿಕೆಯ ಜಿಲ್ಲಾ ಸಮಿತಿ ಪ್ರಮುಖರುಗಳಾದ ರವೀಂದ್ರ ರುದ್ರಪಾದ, ಭಾನುಪ್ರಕಾಶ್ ಪೆರುಮುಂಡ,...

ಹರಿಹರ ಪಲ್ಲತ್ತಡ್ಕ ಮತ್ತು ಕೊಲ್ಲಮೊಗ್ರು ಗ್ರಾಮಪಂಚಾಯತ್ ಕ್ಷೇತ್ರದಲ್ಲಿ ಯಾವುದೇ ಮದ್ಯದಂಗಡಿ ಮತ್ತು ಬಾರ್ & ರೆಸ್ಟೋರೆಂಟ್ ಗಳನ್ನು ಹೊಸತಾಗಿ ತೆರೆಯದಂತೆಯೂ ಮತ್ತು ಬೇರೆ ಕಡೆಯಿಂದ ಸ್ಥಳಾಂತರಗೊಳ್ಳದಂತೆ ಹರಿಹರ ಪಲ್ಲತ್ತಡ್ಕ ಗ್ರಾಮದ ಮದ್ಯಮುಕ್ತ ಗ್ರಾಮ ಹೋರಾಟ ಸಮಿತಿ ಹರಿಹರ ಪಲ್ಲತ್ತಡ್ಕ ಇದರ ವತಿಯಿಂದ ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ಅಬಕಾರಿ ಜಿಲ್ಲಾಧಿಕಾರಿಗಳಿಗೆ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ...

All posts loaded
No more posts