Ad Widget

ಹರಿಹರ ಸೊಸೈಟಿಯಲ್ಲಿ ಬೆಳಿಗ್ಗೆ 9 ರಿಂದ ಮಧ್ಯಾಹ್ನ 1 ರವರೆಗೆ ಸೇವೆ ಲಭ್ಯ

ಕೊರೋನಾ ಮಹಾಮಾರಿಯಿಂದ ರಾಜ್ಯದಲ್ಲಿ ಲಾಕ್ ಡೌನ್ ಇರುವುದರಿಂದ ಎ.28 ರಿಂದ ಮೇ.12 ರವರೆಗೆ ಕೊಲ್ಲಮೊಗ್ರ-ಹರಿಹರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದಲ್ಲಿ ಬೆಳಿಗ್ಗೆ 9:00 ಗಂಟೆಯಿಂದ ಮಧ್ಯಾಹ್ನ 1:00 ಗಂಟೆಯವರೆಗೆ ರಜಾ ದಿನಗಳನ್ನು ಹೊರತು ಪಡಿಸಿ ಉಳಿದ ದಿನ ವ್ಯವಹಾರ ಲಭ್ಯವಿರುತ್ತದೆ. ✍ವರದಿ:-ಉಲ್ಲಾಸ್ ಕಜ್ಜೋಡಿ

ಎನ್ ಎಸ್ ಯು ಐ ವತಿಯಿಂದ ಕೋವಿಡ್ ಸಹಾಯವಾಣಿ

ಸುಳ್ಯ ವಿಧಾನ ಸಭಾ ಕ್ಷೇತ್ರದ ಕೋವಿಡ್ ಸಂಬಂಧಿ ಸೇವೆಗಳ ವಿಚಾರಣೆಗಳಿಗೆ ಎನ್.ಎಸ್.ಯು.ಐ ಸುಳ್ಯ ವತಿಯಿಂದ ಸಹಾಯವಾಣಿ ಸೌಲಭ್ಯವನ್ನು ಆರಂಭಿಸಲಾಗಿದೆ. ವಿಚಾರಣೆಗಳಿಗಾಗಿ 9481309163, 9845628109, 9448088598, 8861191587 ಮೊಬೈಲ್ ಸಂಖ್ಯೆಗಳನ್ನು ಸಂಪರ್ಕಿಸಬಹುದು ಎಂದು ಎನ್ ಎಸ್ ಯು ಐ ಸುಳ್ಯ ವಿಧಾನಸಭಾ ಕ್ಷೇತ್ರದ ಅಧ್ಯಕ್ಷ ಕೀರ್ತನ್ ಕೊಡಪಾಲ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Ad Widget

ಸಾಂಕ್ರಾಮಿಕ ರೋಗ ಹರಡಲು ತಯಾರಾಗಿರುವ ಗಾಂಧಿನಗರದ ಕಸದ ರಾಶಿ

ಸಾಂಕ್ರಾಮಿಕ ರೋಗ ಹರಡಲು ಇದಕ್ಕಿಂತ ಉದಾಹರಣೆ ಬೇರೊಂದು ಬೇಕಾಗಿಲ್ಲ. ಸುಳ್ಯದ ನಗರದ ಹೃದಯ ಭಾಗವಾಗಿರುವ ಗಾಂಧಿನಗರ ಅನ್ಸಾರ್ ಕಾಂಪ್ಲೆಕ್ಸ್ ಗೆ ಹೋಗುವ ರಸ್ತೆಯ ಸಮೀಪದಲ್ಲಿ ಕಸ ರಾಶಿ ಬಿದ್ದಿದೆ. ಇಲ್ಲಿ ದುರ್ನಾತ ಬೀರುತ್ತಿರುವ ತ್ಯಾಜ್ಯಗಳಿಂದಾಗಿ ಪಾದಚಾರಿಗಳಿಗೆ ಮೂಗು ಮುಚ್ಚಿಕೊಂಡು ನಡೆದಾಡುವಂತಹ ಪರಿಸ್ಥಿತಿ ಇದ್ದರೂ ಕೂಡ ಜನಪ್ರತಿನಿಧಿಗಳು ಇತ್ತಕಡೆ ಗಮನಹರಿಸದೇ, ನಗರ ಪಂಚಾಯತ್ ಆವರಣದಲ್ಲಿ ಕಸ ರಾಶಿ...

ಕೊಲ್ಲಮೊಗ್ರ : ಕೊರೊನಾ ಸಂಕಷ್ಟಕ್ಕೆ ಒಳಗಾದವರ ನೆರವಿಗಾಗಿ ಯುವಕರ ತಂಡ, ಸಹಾಯವಾಣಿ ರಚನೆ

ಕೊರೊನಾ ಮಹಾಮಾರಿಯ ಎರಡನೇ ಅಲೆಯು ಲಗ್ಗೆ ಇಟ್ಟಿದ್ದು ಇದು ಮೊದಲನೆಯ ಅಲೆಗಿಂತ ಹೆಚ್ಚು ಭೀಕರವಾಗಿದ್ದು ಈ ಸಂದರ್ಭದಲ್ಲಿ ಕೊಲ್ಲಮೊಗ್ರ ಹಾಗೂ ಸಮೀಪದ ಗ್ರಾಮಗಳದಲ್ಲಿ ಕೊರೋನಾ ಖಾಯಿಲೆಗೆ ಸಂಬಂಧಿಸಿದ ರೋಗಿಗಳಿಗೆ ಯಾವುದೇ ಸಮಯದಲ್ಲಿ ತುರ್ತು ಸಹಾಯಕ್ಕಾಗಿ ಅಥವಾ ಇನ್ನಿತರ ಸೇವೆಗಳಿಗಾಗಿ ಯುವಕರ ತಂಡ ದಿನದ 24 ಗಂಟೆಯೂ ಕೊರೋನಾ ಖಾಯಿಲೆಗೆ ಸಂಬಂಧಿಸಿದ ರೋಗಿಗಳ ಸೇವೆಯಲ್ಲಿ ಇರಲಿದೆ. ಹಾಗೂ...

ಸರಕಾರ ಬಡವರ ಹೊಟ್ಟೆಗೆ ಹೊಡೆಯುವ ಕೆಲಸ ಮಾಡಬಾರದು

ರಾಜ್ಯ ಮತ್ತು ಕೇಂದ್ರ ಸರಕಾರ ಬಡವರ ಪಾಲಿಗೆ ಕೋಮದಲ್ಲಿ ಇರುವ ಸರಕಾರವಾಗಿದೆ. ಕೋರೊಣ ವಿರುದ್ಧ ನಮಗಾಗಿ ದಾದಿಯರು, ವೈದ್ಯರು ಪೋಲಿಸ್, ವಿದ್ಯುತ್ ಕಂಪೆನಿ, ಮಾಧ್ಯಮ ಇವರೆಲ್ಲ ಹಗಲಿರುಳು ಶ್ರಮಿಸುವ ಸಂದರ್ಭದಲ್ಲಿ ನಾಡಿನ ಜನರಿಗೆ ಅನ್ನಭಾಗ್ಯದ ಮುಖಾಂತರ ನೀಡುತ್ತಿದ್ದ ಅಕ್ಕಿ ಕಡಿತಗೊಳಿಸುವ ಹೇಳಿಕೆ ನೀಡಿದ ಆಹಾರ ಸಚಿವರು ಸಾಯುವುದಿದ್ದರೇ ಸಾಯಲಿ ಅನ್ನುವ ಬೇಜಾವಬ್ದಾರಿ ಹೇಳಿಕೆ ನೀಡಿ ಜನರನ್ನು...

ಕೊರೊನಾ ಕಾರುಬಾರು….

ಜಗತ್ತು ಎಷ್ಟು ವಿಶಾಲವಾಗಿದೆ. ಹೇಗೆ ಬೇಕಾದರೂ ಬದುಕಬಹುದು ಅಂತ ಅಂದುಕೊಳ್ಳುತ್ತೇವೆ. ನಾನೇನು ಮಾಡಿದ್ರೂ ನಡೆಯುತ್ತೆ ಅಂತಾನೂ ಯೋಚಿಸ್ತೇವೆ. ಅದಕ್ಕಾಗಿ ನಾವು ಏನು ಮಾಡಲೂ ಸಿದ್ಧ. ಆದ್ರೆ ಒಮ್ಮೊಮ್ಮೆ ನಾವಂದುಕೊಂಡಂತೆ ಏನೂ ಆಗೋದಿಲ್ಲ. ಭ್ರಮೆ ಅತಿಯಾಗಿಯೋ, ವಾಸ್ತವದ ಅರಿವು ಕಡಿಮೆಯಾಗಿಯೋ ಪರಿಸ್ಥಿತಿಯನ್ನೇ ಅವಲೋಕಿಸದ ಮುಟ್ಠಾಳರಾಗುತ್ತೇವೆ. ಈಗ ಆಗಿರೋದು ಅದೇ ನೋಡಿ. ಹಿಂದಿನ ವರ್ಷ ನಮ್ಮೆಲ್ಲರನ್ನು ಬೆಚ್ಚಿ ಬೀಳಿಸಿದ...

ಫೇಸ್ ಬುಕ್ ಬಳಕೆದಾರರೇ ಎಚ್ಚರ : ನಕಲಿ ಖಾತೆ ತೆರೆದು ವಂಚಿಸುವ ಜಾಲ ಸಕ್ರೀಯ

ಫೇಸ್ ಬುಕ್ ನಕಲಿ ಖಾತೆ ತೆರೆದು ವಂಚಿಸುವ ಜಾಲವೊಂದು ಸಕ್ರೀಯವಾಗಿದ್ದು ಸುಳ್ಯದಲ್ಲಿ ಹಲವರ ಹೆಸರಿನಲ್ಲಿ ವಂಚನೆ ನಡೆಸಿದ ಘಟನೆ ವರದಿಯಾಗಿದೆ.ಫೇಸ್ ಬುಕ್ ನಕಲಿ ಖಾತೆ ತೆರೆದು ಅವರದೇ ಫೋಟೋ ಡಿಪಿ ಹಾಕಿ, ಇತರರಿಗೆ ಫ್ರೆಂಡ್ ರಿಕ್ವೆಸ್ಟ್ ಕಳಿಸಿ ಎಕ್ಸೆಪ್ಟ್ ಮಾಡಿದವರಿಗೆ ಫೇಸ್‌ಬುಕ್‌ ಮೆಸೆಂಜರ್ ನಲ್ಲಿ ಮೆಸೇಜ್ ಮಾಡಲು ಆರಂಭಿಸುತ್ತಾರೆ. ಬಳಿಕ ನಾನು ಸಂಕಷ್ಟದಲ್ಲಿದ್ದೇನೆ ನನಗೆ ತುರ್ತಾಗಿ...

ಗುತ್ತಿಗಾರು ರಬ್ಬರ್ ಸೊಸೈಟಿಯಲ್ಲಿ ಬೆಳಿಗ್ಗೆ 9 ರಿಂದ ಮಧ್ಯಾಹ್ನ 1 ರವರೆಗೆ ವ್ಯವಹಾರ

ಕೊರೋನ ಮಹಾಮಾರಿಯಿಂದ ರಾಜ್ಯದಲ್ಲಿ ಲಾಕ್ ಡೌನ್ ಮುಗಿಯುವವರೆಗೆ ಗುತ್ತಿಗಾರು ರಬ್ಬರ್ ಬೆಳೆಗಾರರ ಮಾರಾಟ ಮತ್ತು ಸಂಸ್ಕರಣಾ ಸಹಕಾರಿ ಸಂಘದಲ್ಲಿ ಬೆಳಿಗ್ಗೆ 9.00 ಗಂಟೆಯಿಂದ ಮಧ್ಯಾಹ್ನ 1.00ವರೆಗೆ ಸಂಘದ ವ್ಯವಹಾರ ಇರುತ್ತದೆ. ( ರಜಾ ದಿನ ಹೊರತುಪಡಿಸಿ) ಸಂಘದ ಸದಸ್ಯರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಈ ರೀತಿಯ ವ್ಯವಸ್ಥೆಯನ್ನು ಮಾಡಲಾಗಿದೆ.ಕೋವಿಡ್ ನಿಯಮದ ಪ್ರಕಾರ ಗ್ರಾಹಕರು ಮಾಸ್ಕ್ ಧರಿಸಿ ವ್ಯವಹರಿಸಬೇಕೆಂದು...

ಎ.29 : ಅರಂಬೂರು ಪ್ರಾಥಮಿಕ ಶಾಲೆಯಲ್ಲಿ ಕೋವಿಡ್ ಲಸಿಕೆ ಹಾಕುವ ಕಾರ್ಯಕ್ರಮ

ಅರಂತೋಡು ಪ್ರಾಥಮಿಕ ಕೇಂದ್ರ ವತಿಯಿಂದ ಅರಂಬೂರು ಪ್ರಾಥಮಿಕ ಶಾಲೆಯಲ್ಲಿ ಕೋವಿಡ್ 19 ಲಸಿಕೆ ಹಾಕುವ ಕಾರ್ಯಕ್ರಮ ಎ. 29ರಂದು ನಡೆಯಲಿದೆ. 45 ವರ್ಷ ಮೇಲ್ಪಟ್ಟ ಎಲ್ಲರೂ ಲಸಿಕೆ ಪಡೆದು ಕೊಳ್ಳಬಹುದು. ಅಲ್ಲಿಗೆ ಬರುವವರು ಆಧಾರ್ ಕಾರ್ಡ್ ಅಥವಾ ವೋಟರ್ ಐಡಿ ಮೊಬೈಲ್ ಫೋನ್ ತರಬೇಕು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಬೆಳಿಗ್ಗೆ10 ರಿಂದ ಸಂಜೆ 4 ಗಂಟೆಯ...

ಹಾಡು ಬಾ ಕನಸು ಆನ್ಲೈನ್ ಭಾವಗೀತೆ ಗಾಯನ ಸ್ಪರ್ಧೆಗೆ ಆಹ್ವಾನ

ಕಲಾಮಾಯೆ ಸಾಂಸ್ಕೃತಿಕ ಶಿಕ್ಷಣ ಕೇಂದ್ರ ಏನೆಕಲ್ಲು ಇದರ ಸಾರಥ್ಯದಲ್ಲಿ ಸೋಲಾರ್ ಪಾಯಿಂಟ್ ನಿಂತಿಕಲ್ಲು, ಬ್ಲ್ಯಾಕ್ ವಿಂಡ್ ಸೋಲಾರ್ ಬೆಳ್ತಂಗಡಿ ವತಿಯಿಂದಹಾಡು ಬಾ ಕನಸು ಆನ್‌ಲೈನ್‌ ಭಾವಗೀತೆಗಳ ಗಾಯನ ಸ್ಪರ್ಧೆ ನಡೆಯಲಿದೆ. ಈ ಸ್ಪರ್ಧೆಗೆ ಪ್ರವೇಶ ಉಚಿತವಾಗಿದೆ. ಹಾಗೂ 10 ರಿಂದ 18 ವರ್ಷ (ಜೂನಿಯರ್ ವಿಭಾಗ) 18 ವರ್ಷ ಮೇಲ್ಪಟ್ಟು (ಸೀನಿಯರ್ ವಿಭಾಗ)ಈ ಸ್ಪರ್ಧೆ ನಡೆಯಲಿದೆ....
Loading posts...

All posts loaded

No more posts

error: Content is protected !!