ಶ್ರೀ ಧರ್ಮಶಾಸ್ತ್ರ ಸೇವಾ ಟ್ರಸ್ಟ್ (ರಿ.) ಮುಪ್ಪೇರ್ಯ ಹಾಗೂ ಶ್ರೀ ಅಯ್ಯಪ್ಪ ಸ್ವಾಮಿ ಪ್ರತಿಷ್ಠಾ ಮಹೋತ್ಸವ ಸಮಿತಿ ಬಾಳಿಲ ಮುಪ್ಪೇರ್ಯ ಇದರ ವತಿಯಿಂದ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಪದ್ಮವಿಭೂಷಣ ರಾಜರ್ಷಿ ಪೂಜ್ಯ ಡಾ.ಡಿ.ವೀರೇಂದ್ರ ಹೆಗ್ಗಡೆಯವರ ಶುಭಾಶೀರ್ವಾದಗಳೊಂದಿಗೆ, ಅರ್ಚಕ ಶ್ರೀ ನರಸಿಂಹ ಭಟ್.ಆರ್ ಬಾಳಿಲ ಇವರ ನೇತೃತ್ವದಲ್ಲಿ ಮುಪ್ಪೇರ್ಯದಲ್ಲಿ ನಿರ್ಮಿಸಿದ ಶ್ರೀ ಅಯ್ಯಪ್ಪ ಸ್ವಾಮಿ ಗುಡಿಯಲ್ಲಿ ಪ್ರತಿಪ್ಠಾ ವಾರ್ಷಿಕೋತ್ಸವವು ಎ.24 ಹಾಗೂ 25ರಂದು ಜರುಗಲಿದೆ.
ಎ.24ರಂದು ಸಂಜೆ ಗಂಟೆ 6.00ಕ್ಕೆ ವಿಶ್ವಕರ್ಮ ಪ್ರಾರ್ಥನೆ, ಗುಡಿ ಸ್ವೀಕರಣೆ, ಸ್ವಸ್ತಿ ಪುಣ್ಯಾಹ, ಆಚಾರ್ಯ ವರಣ, ವಾಸ್ತುಪೂಜೆ, ವಾಸ್ತುಹೋಮ, ವಾಸ್ತುಬಲಿ, ಪ್ರಾಕಾರ ಬಲಿ, ಪ್ರಸಾದ ವಿತರಣೆ ನಂತರ ಅನ್ನಸಂತರ್ಪಣೆ ನಡೆಯಲಿದೆ. ರಾತ್ರಿ ಗಂಟೆ 8.30ರಿಂದ 9.30ರ ವರೆಗೆ ಯುವಕ ಮಂಡಲ(ರಿ) ಕಳಂಜ ಪ್ರವರ್ತಿತ ಶ್ರೀ ಮಂಜುನಾಥ ಭಜನಾ ಮಂಡಳಿ ಕೋಟೆಮುಂಡುಗಾರು ಇವರಿಂದ ಭಜನಾ ಕಾರ್ಯಕ್ರಮ ನಡೆಯಲಿದೆ.
ಎ.25 ರಂದು ಪೂರ್ವಾಹ್ನ ಗಂಟೆ 6.00ರಿಂದ ಗಣಪತಿ ಹೋಮ, ಶ್ರೀ ಸತ್ಯನಾರಾಯಣ ಪೂಜೆ, ಚರದೀಪದ ಮೂಲಕ ಅಯ್ಯಪ್ಪ ಸ್ವಾಮಿ ಪೀಠದಲ್ಲಿ ಪ್ರತಿಷ್ಠೆ, ಅಯ್ಯಪ್ಪ ಸ್ವಾಮಿ ಪೂಜೆ, ನಿತ್ಯ ನಿಯಮಾನುಷ್ಠಾನ ನಿರ್ಣಯ, ಮಹಾಮಂಗಳಾರತಿ, ಪ್ರಸಾದ ವಿತರಣೆ ತದನಂತರ ಅನ್ನಸಂತರ್ಪಣೆ ನಡೆಯಲಿದೆ. ಪೂರ್ವಾಹ್ನ ಗಂಟೆ 8.30ರಿಂದ 9.30ರ ವರೆಗೆ ಶ್ರೀ ಮಂಜುನಾಥ ಭಜನಾ ಮಂಡಳಿ ಬಾಳಿಲ-ಮುಪ್ಪೇರ್ಯ ಇವರಿಂದ ಭಜನಾ ಕಾರ್ಯಕ್ರಮ ನಡೆಯಲಿರುವುದು. ಪೂರ್ವಾಹ್ನ ಗಂಟೆ 12.00ರಿಂದ ಸಭಾ ಕಾರ್ಯಕ್ರಮ ಹಾಗೂ ಆಶೀರ್ವಚನ ಕಾರ್ಯಕ್ರಮ ನೆರವೇರಲಿದೆ. ಕಾರ್ಯಕ್ರಮದಲ್ಲಿ ಶ್ರೀ ಮಹಾಲಕ್ಷ್ಮೀ ಕ್ಷೇತ್ರ, ಶ್ರೀಧಾಮ ಮಾಣಿಲದ ಪರಮಪೂಜ್ಯ ಯೋಗಿಕೌಸ್ತುಭ ಕರ್ಮಯೋಗಿ ಶ್ರೀ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿಯವರು ಆಶೀರ್ವಚನಗೈಯಲಿದ್ದಾರೆ. ಸಭಾಧ್ಯಕ್ಷತೆಯನ್ನು ಅಶೋಕ್ ಶೆಟ್ಟಿ ‘ಅರ್ಚನಾ ನಿಲಯ’ ಬಾಳಿಲ ಇವರು ವಹಿಸಲಿದ್ದಾರೆ. ಗೌರವ ಉಪಸ್ಥಿತಿಯಲ್ಲಿ ಕಾಂಚೋಡು ಶ್ರೀ ಮಂಜುನಾಥೇಶ್ವರ ದೇವಾಲಯ ಬಾಳಿಲ ಇಲ್ಲಿನ ಧರ್ಮದರ್ಶಿಗಳಾದ ಪರಮೇಶ್ವರಯ್ಯ ಕಾಂಚೋಡು, ಬಾಳಿಲ ಗ್ರಾ.ಪಂ. ಅಧ್ಯಕ್ಷರಾದ ಶ್ರೀಮತಿ ಸವಿತಾ ಗುರುರಾಜ್ ಚಾಕೋಟೆಡ್ಕ, ದೇವರಕಾನ
ಶ್ರೀ ಲಕ್ಷ್ಮೀನರಸಿಂಹ ಸೇವಾ ಟ್ರಸ್ಟ್ (ರಿ)ನ ಅಧ್ಯಕ್ಷರಾದ ಡಾ|ಪಿ.ರಾಮಚಂದ್ರ ಭಟ್ ದೇವಸ್ಯ, ಹರಿಹರ ಸಂಗಮಕ್ಷೇತ್ರದ ಗುರುಸ್ವಾಮಿಗಳಾದ ಶ್ರೀ ಗೋಪಾಲಕೃಷ್ಣ ಶಾಂತಲಾ ಕೊಲ್ಲಮೊಗ್ರು, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ(ರಿ) ಸುಳ್ಯದ ಯೋಜನಾಧಿಕಾರಿ ಸಂತೋಷ್ ಕುಮಾರ್ ರೈ, ಸುಳ್ಯ ತಾಲೂಕು ಪಂಚಾಯತ್ ಸಾಮಾಜಿಕ ಸ್ಥಾಯಿ ಸಮಿತಿ ಅಧ್ಯಕ್ಷೆ ಶ್ರೀಮತಿ ಜಾಹ್ನವಿ ಕಾಂಚೋಡು, ಎಣ್ಮೂರು ಬ್ರಹ್ಮಬೈದರ್ಕಳ ಆದಿಗರಡಿಯು ಅನುವಂಶಿಕ ಆಡಳಿತದಾರರಾದ ಕಟ್ಟಬೀಡು ರಾಮಕೃಷ್ಣ ಶೆಟ್ಟಿ, ಕಳಂಜ ಬಾಳಿಲ ಪ್ರಾ.ಕೃ.ಪ.ಸ.ಸಂಘದ ಅಧ್ಯಕ್ಷರಾದ ಕೂಸಪ್ಪ ಗೌಡ ಮುಗುಪ್ಪು ಇರಲಿದ್ದಾರೆ. ಈ ಎಲ್ಲಾ ಕಾರ್ಯಕ್ರಮಗಳಲ್ಲಿ ಭಗವದ್ಭಕ್ತರು ಹಾಜರಿದ್ದು ಶ್ರೀ ದೇವರ ಕೃಪೆಗೆ ಪಾತ್ರರಾಗುವಂತೆ ಸಂಘಟಕರು ವಿನಂತಿಸಿದ್ದಾರೆ.
- Thursday
- November 21st, 2024