- Thursday
- May 15th, 2025

ಆರಂತೋಡು ಗ್ರಾಮ ಪಂಚಾಯತ್ ಸ. ನಂ 127/1 p 1 ರಲ್ಲಿ ಈ ಹಿಂದೆ ಘನತ್ಯಾಜ್ಯ ವಿಲೇವಾರಿ ಘಟಕ ಸ್ಥಾಪಿಸಲು ಯೋಜನೆ ಹಾಕಿದ ಸ್ಥಳ ವಿರೋಧ ಬಂದು ಕೊಡಂಕೇರಿಗೆ ಸ್ಥಳಾಂತರ ಗೊಂಡಿತ್ತು. ಇದೀಗ ಈ ಜಾಗಕ್ಕೆ ಪಂಚಾಯತ್ ಬೇಲಿ ಹಾಕುವ ವೇಳೆ ಮತ್ತೊಮ್ಮೆ ವಿವಾದ ಉಂಟಾಗಿ ದಲಿತ್ ಸೇವಾ ಸಮಿತಿ ಆಕ್ಷೇಪ ವ್ಯಕ್ತಪಡಿಸಿರುವುದರಿಂದ ಕಂದಾಯ ಇಲಾಖೆ...

ಸುಬ್ರಹ್ಮಣ್ಯ ಗ್ರಾಮದ ನೂಚಿಲ ನಿವಾಸಿ, ಖ್ಯಾತ ಯಕ್ಷಗಾನ ಕಲಾವಿದ ಗಂಗಾಧರ ಬಾರಿಗ ಸೆ.07 ರಂದು ತಮ್ಮ ಸ್ವಗೃಹದಲ್ಲಿ ನಿಧನರಾದರು. ಇವರಿಗೆ 54 ವರ್ಷ ವಯಸ್ಸಾಗಿತ್ತು. ಕೆಲ ದಿನಗಳಿಂದ ಇವರು ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದರು.ಯಕ್ಷಗಾನ ಕಲಾವಿದರಾಗಿ ಧರ್ಮಸ್ಥಳ ಮೇಳ ಹಾಗೂ ಬಪ್ಪನಾಡು ಮೇಳಗಳಲ್ಲಿ ಸೇವೆ ಸಲ್ಲಿಸಿರುವ ಇವರು, ಸುಬ್ರಹ್ಮಣ್ಯದಲ್ಲಿ ಶ್ರೀ ವಾಸುಕಿ ಯಕ್ಷಗಾನ ಕಲಾಕೇಂದ್ರ (ರಿ) ಸಂಸ್ಥೆಯ...

ದ.ಕ.ಜಿಲ್ಲಾ ಸ್ಕೌಟ್ ಮತ್ತು ಗೈಡ್ಸ್ ಆಶ್ರಯದಲ್ಲಿ ನಡೆದ ವರ್ಚುವಲ್ ದೇಶಭಕ್ತಿ ಗೀತೆ ಸ್ಪರ್ಧೆಯಲ್ಲಿ ಭಾಗವಹಿಸಿದ ಜಿಲ್ಲೆಯ 28 ಸ್ಕೌಟ್ ವಿದ್ಯಾರ್ಥಿಗಳಲ್ಲಿ ಆಳ್ವಾಸ್ ಹಿರಿಯ ಪ್ರಾಥಮಿಕ ಶಾಲೆಯ 7 ನೇ ತರಗತಿಯ ಮನುಜ ನೇಹಿಗ ಸುಳ್ಯ ಪ್ರಥಮ ಸ್ಥಾನ ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿರುತ್ತಾನೆ.ಈತ ರಂಗನಿರ್ದೇಶಕ ಜೀವನ್ ರಾಂ ಸುಳ್ಯ ಮತ್ತು ಡಾ| ಮೌಲ್ಯ ದಂಪತಿಗಳ ಪುತ್ರನಾಗಿದ್ದಾನೆ.

ಮೆಸ್ಕಾಂ ಸುಳ್ಯ ಉಪವಿಭಾಗ ವ್ಯಾಪ್ತಿಯಲ್ಲಿ 33/11 ಕೆ.ವಿ. ದ್ವಿ. ಮಾರ್ಗ ರಚನೆ ಕಾಮಾಗಾರಿಯನ್ನು ಸೆ. 9 ಬುಧವಾರದಂದು ಹಮ್ಮಿಕೊಂಡಿರುವುದ್ದರಿಂದ ಸುಳ್ಯ 33/11 ಕೆ.ವಿ. ವಿದ್ಯುತ್ ವಿತರಣಾ ಕೇಂದ್ರದಿಂದ ಹೊರಡುವ 11 ಕೆ.ವಿ ಸುಳ್ಯ-1 ಕೇರ್ಪಳ, ಶ್ರೀರಾಂಪೇಟೆ, ಸಂಪಾಜೆ ಫೀಡರುಗಳಲ್ಲಿ ಬೆಳಿಗ್ಗೆ 1೦ ರಿಂದ ಸಾಯಂಕಾಲ 6 ರ ತನಕ ವಿದ್ಯುತ್ ವ್ಯತ್ಯಯ ಉಂಟಾಗಲಿದ್ದು, ಗ್ರಾಹಕರು ಸಹಕರಿಸಬೇಕಾಗಿ...

ಕೇಂದ್ರ ಸರಕಾರದ ಮಹತ್ವದ ಯೋಜನೆಗಳಲ್ಲಿ ಒಂದಾದ ಭಾರತೀಯ ಜನೌಷಧಿ ಕೇಂದ್ರ ಬಡವರ ಮತ್ತು ಮಧ್ಯಮ ವರ್ಗದ ಪಾಲಿಗೆ ಶ್ರೀರಕ್ಷೆಯಾಗಿದೆ. ಸುಳ್ಯ ತಾಲೂಕಿನ ಒಂದು ಬಡಕುಟುಂಬದ ಒಬ್ಬರು ಸದಸ್ಯರಿಗೆ ದೇಹದ ಒಂದು ಭಾಗದ ನರದಲ್ಲಿ ರಕ್ತ ಸಂಚಾಲನದ ಆಗದೆ ಆರೋಗ್ಯದಲ್ಲಿ ಏರುಪೇರು ಆಗಿತ್ತು. ನಂತರ ಮಂಗಳೂರಿನ ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆ ಮಾಡಲಾಯಿತು. ದುಡಿಯುವ ಕೈ ಶಕ್ತಿ...

ಗ್ರಾಮ ಪಂಚಾಯಿತಿ ಚುನಾವಣೆಯ ಪೂರ್ವ ತಯಾರಿ ಸಭೆ ಯುವಜನ ಸಂಯುಕ್ತ ಮಂಡಳಿ ಸಭಾಂಗಣ ಸೆ. 8 ರಂದು ಪೂ.10.00 ಗಂಟೆಗೆ ನಡೆಯಲಿದೆ.ಗ್ರಾಮ ಪಂಚಾಯಿತಿಗಳಿಗೆ ಶೀಘ್ರವೇ ಚುನಾವಣೆ ಜರುಗಲಿದ್ದು, ಸಂಬಂಧ ಪಟ್ಟಂತೆ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ರಾದ ಶ್ರೀ ಮಿಥುನ್ ರೈ ಯವರು ಸುಳ್ಯಕ್ಕೆ ಆಗಮಿಸಲಿದ್ದು ಚುನಾವಣೆ ಪೂರ್ವ ತಯಾರಿ ಸಭೆ ನಡೆಸಲಿದ್ದಾರೆ ಎಂದು ಬ್ಲಾಕ್...

ಬೆಳ್ಳಾರೆ ಸಮುದಾಯ ಆರೋಗ್ಯ ಕೇಂದ್ರವನ್ನು ಶೀಘ್ರವಾಗಿ ಕಾರ್ಯಾರಂಭ ಗೊಳಿಸುವಂತೆ ಆಗ್ರಹಿಸಿ ಎಸ್ಡಿಪಿಐ ವತಿಯಿಂದ ಮನವಿ
ಸುಳ್ಯ ತಾಲೂಕಿನ ಬೆಳ್ಳಾರೆ ಪ್ರಾರ್ಥಮಿಕ ಆರೋಗ್ಯ ಕೇಂದ್ರವು ಎಲ್ಲಾ ಮೂಲಭೂತ ಸೌಕರ್ಯಗಳೊಂದಿಗೆ ಸಮುದಾಯ ಆರೋಗ್ಯ ಕೇಂದ್ರ ವಾಗಿ ಮಾರ್ಪಾಡುಗೊಂಡು ಮೂರು ವರ್ಷ ಕಳೆದರೂ ಇನ್ನೂ ಕೂಡ ಕಾರ್ಯಾರಂಭ ಗೊಂಡಿರುವುದಿಲ್ಲ. ಬೆಳ್ಳಾರೆ ಗ್ರಾಮ ಸೇರಿದಂತೆ ಸುತ್ತಮುತ್ತಲಿನ ಜನರು ತುರ್ತು ಸಂದರ್ಭದಲ್ಲಿ ಇದೇ ಕೇಂದ್ರವನ್ನು ಅವಲಂಬಿಸಿರುತ್ತಾರೆ. ಆದರೆ ಇಲ್ಲಿ ಖಾಯಂ ವೈದ್ಯರು ಇಲ್ಲದೇ ಇರುವುದರಿಂದ ಆಸುಪಾಸಿನ ಜನರು ಸಂಕಷ್ಟ...

ಮುಂಬರುವ ಗ್ರಾಮ ಪಂಚಾಯತ್ ಚುನಾವಣೆಗೆ ಸಂಬಂಧಿಸಿದಂತೆ ಬೆಳ್ಳಾರೆ ಗ್ರಾಮದ ಚುನಾವಣಾ ಸಮಿತಿಯ ಪೂರ್ವಭಾವಿ ಸಭೆ ಇಂದು ಪಕ್ಷದ ಕಚೇರಿಯಲ್ಲಿ ಚುನಾವಣಾ ಉಸ್ತುವಾರಿ ಶಾಫಿ ಬೆಳ್ಳಾರೆ ಯವರ ನೇತೃತ್ವದಲ್ಲಿ ನಡೆಯಿತು. ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಬೆಳ್ಳಾರೆ ಗ್ರಾಮದ 5 ವಾರ್ಡಗಳಲ್ಲಿ ಎಸ್ ಡಿಪಿಐ ಪಕ್ಷದ ಬೆಂಬಲಿತ ಅಭ್ಯರ್ಥಿಗಳನ್ನು ಕಣಕ್ಕಿಳಿಸುವ ಬಗ್ಗೆ ಚರ್ಚಿಸಿ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿಯನ್ನು ತಾಲೂಕು...

ಸುಳ್ಯ ತಾಲೂಕಿನ ಕಲ್ಲುಗುಂಡಿಯ ದಂಡೆಕಜೆ ಎಂಬಲ್ಲಿಯ ದಲಿತ ಅಪ್ರಾಪ್ತ ಯುವತಿ /ಯರ ಸಾಮೂಹಿಕ ಅತ್ಯಾಚಾರ ಪ್ರಕರಣ ಬೆಳಕಿಗೆ ಬಂದಿರುವ ಹಿನ್ನೆಲೆಯಲ್ಲಿ ಈಗಾಗಲೇ ಎರಡು ಮಂದಿಯನ್ನು ಬಂಧಿಸಲ್ಪಟ್ಟರು ಕೂಡ ಇನ್ನೂ ಹಲವಾರು ಮಂದಿ ಇರುವ ಸಾಧ್ಯತೆಗಳಿರುತ್ತದೆ. ಆದುದರಿಂದ ಇತರೆ ಆರೋಪಿಗಳನ್ನು ತಕ್ಷಣ ಬಂಧಿಸಿ ಕಠಿಣ ಕಾನೂನು ಕ್ರಮ ಕೈಗೊಳ್ಳಲು ಮತ್ತು ಯುವತಿಯ ಕುಟುಂಬಕ್ಕೆ ನ್ಯಾಯ ರಕ್ಷಣೆ ನೀಡಲು...

ಧರ್ಮಸ್ಥಳ ಗ್ರಾಮಾಭಿವೃದ್ಧಿ ಬಿ.ಸಿ.ಟ್ರಸ್ಟ್ ಸುಳ್ಯ ಹಾಗೂ ಪೈಲಾರು ಒಕ್ಕೂದ ಆಶ್ರಯದಲ್ಲಿ ಸೆ.6 ಆದಿತ್ಯವಾರ ದಂದು ಮಿತ್ರ ವೃಂದ ಪೈಲಾರ್ ಕಟ್ಟಡದಲ್ಲಿ ಆಯುಷ್ಮಾನ್ ಕಾರ್ಡ್ ನೋಂದಣಿ ಶಿಬಿರ ನಡೆಯಿತು. ಶ್ರೀ ದೇವಿ ತಂಡದ ಅಧ್ಯಕ್ಷರಾದ ಜಯಶ್ರೀ ಅಧ್ಯಕ್ಷತೆ ವಹಿಸಿದ್ದರು. ಮಿತ್ರ ವೃಂದ ಪೈಲಾರು ಇದರ ಅಧ್ಯಕ್ಷ ಹರ್ಷಿತ್ ದಾತಡ್ಕ ಉದ್ಘಾಟಿಸಿದರು. ಗ್ರಾ.ಪಂ.ಮಾಜಿ ಸದಸ್ಯ ತಿಮ್ಮಪ್ಪ ಕೊಂಡೆಬಾಯಿ ಹಾಗೂ...

All posts loaded
No more posts