- Thursday
- November 21st, 2024
ಬಾಳಿಲ ಗ್ರಾಮ ಪಂಚಾಯತ್‌ನಲ್ಲಿ ವಿಶೇಷ ಗ್ರಾಮಸಭೆಯು ಸೆ.19ರಂದು ಬಾಳಿಲ ಪರಿಶಿಷ್ಟ ವರ್ಗಗಳ ಆಶ್ರಮ ಶಾಲೆ ಸಭಾಭವನದಲ್ಲಿ ನಡೆಯಿತು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಆಡಳಿತಾಧಿಕಾರಿ ನಿರಂಜನ ಚಿದಾನಂದ ಹಿರೇಮಠ ವಹಿಸಿದ್ದರು. ಸಭೆಯಲ್ಲಿ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷೆ ಜಾಹ್ನವಿ ಕಾಂಚೋಡು ಉಪಸ್ಥಿತರಿದ್ದರು. ಜೂನಿಯರ್ ಇಂಜಿನಿಯರ್ ಜನಾರ್ಧನರವರು ಜಲಜೀವನ್ ಮಿಷನ್ ಬಗ್ಗೆ ಮಾಹಿತಿ ನೀಡಿದರು. ಪ್ರತಿಯೊಬ್ಬರಿಗೂ ಶುದ್ಧಜಲ ಒದಗಿಸುವ ನಿಟ್ಟಿನಲ್ಲಿ...
ಸುಳ್ಯದ ಬಸ್ ನಿಲ್ದಾಣದ ಬಳಿ ಹಲವು ತಿಂಗಳುಗಳಿಂದ ಚರಂಡಿಯ ಸ್ಲಾಬ್ ಮುರಿದುಬಿದ್ದು ಅಪಾಯದ ಸ್ಥಿತಿಯಲ್ಲಿ ನಿಂತಿದ್ದವು. ಇದರ ಬಗ್ಗೆ ಕಳೆದ ಎರಡು ಬಾರಿ ಅಮರ ಸುಳ್ಯ ಸುದ್ದಿ ಪತ್ರಿಕೆಯ ವತಿಯಿಂದ ಸಂಬಂಧಪಟ್ಟ ಅಧಿಕಾರಿಗಳನ್ನು ಎಚ್ಚರಿಸುವ ಕೆಲಸಗಳನ್ನು ಮಾಡಲಾಗಿತ್ತು. ನಗರದ ಪುಟ್ ಪಾತ್ ಗಳ ಅವಸ್ಥೆ ಆದರೆ ಇತ್ತ ಕಡೆ ಗಮನಹರಿಸದ ಇವರು ಇದಕ್ಕೂ ಮುನ್ನ ಹಲವು...
ಸುಳ್ಯ ತಾಲೂಕಿನ ಬೆಳ್ಳಾರೆ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಸಮುದಾಯ ಆರೋಗ್ಯ ಕೇಂದ್ರವಾಗಿ ಉನ್ನತೀಕರಿಸುವಂತೆ ಶಾಸಕರಿಗೆ ಮನವಿ ಸಲ್ಲಿಸಿದ್ದಾರೆ. 2019 ರಲ್ಲಿ ಆಶಾ ತಿಮ್ಮಪ್ಪ ರವರು ಜಿಲ್ಲಾ ಪಂಚಾಯತ್ ಅಧ್ಯಕ್ಷೆಯಾಗಿರುವಾಗ ಜಿ.ಪಂ.ನಿಂದ ನಿರ್ಣಯ ಮಾಡಿ ಕಳಿಸಲಾಗಿತ್ತು. ಸರಕಾರದ ಮಟ್ಟದಲ್ಲಿ ಬಾಕಿ ಉಳಿದಿರುವ ಬಗ್ಗೆ ಅಸಮಾಧಾನಕ್ಕೆ ಕಾರಣವಾಗಿದೆ. ತಾಲೂಕಿನ ಎರಡನೇ ಅತೀ ದೊಡ್ಡ ಪಟ್ಟಣವಾಗಿರುವ ಬೆಳ್ಳಾರೆಯಲ್ಲಿ 24x7...
ಬಾಳಿಲ ಪಾಜಪಳ್ಳ ದಿ. ಸೈಯದ್ ಹುಸೈನ್ ರವರ ಪತ್ನಿ ಬೆಹರುನ್ನೀಸಾ ಸೆ.29 ರಂದು ನಿಧನರಾದರು. ಅವರಿಗೆ 74 ವರ್ಷ ವಯಸ್ಸಾಗಿತ್ತು. ಮೃತರು ಮಕ್ಕಳು ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.
ಕೆವಿಜಿ ಸುಳ್ಯ ಹಬ್ಬದ ಅಧ್ಯಕ್ಷರಾಗಿ ಆಯ್ಕೆಯಾದ ವೆಂಕಟರಮಣ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಅಧ್ಯಕ್ಷ ಪಿ.ಸಿ ಜಯರಾಮ ಅವರನ್ನು ಸೊಸೈಟಿ ವತಿಯಿಂದ ಇಂದು ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಉಪಾಧ್ಯಕ್ಷ ಮೋಹನ್ ರಾಂ ಸುಳ್ಳಿ, ನಿರ್ದೇಶಕರುಗಳಾದ, ಎ.ವಿ ತೀರ್ಥರಾಮ, ಕೆ.ಸಿ ನಾರಾಯಣ ಗೌಡ, ಸದಾನಂದ ಕುರುಂಜಿ, ಲತಾ ಮಾವಾಜಿ, ನಳಿನಿ ಸೂರಯ್ಯ, ಚಂದ್ರ ಕೋಲ್ಚಾರ್, ಪಿ.ಎಸ್, ಗಂಗಾಧರ,...
ಕೊಲ್ಲಮೊಗ್ರು ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ಸೆ.28 ರಂದು ಗ್ರಾಮ ಪಂಚಾಯತ್ ವ್ಯಾಪ್ತಿಯ ನಿವಾಸಿಗಳಿಗಾಗಿ ವಿಶೇಷ ಕೋವಿಡ್ -19 ತಪಾಸಣಾ ಶಿಬಿರದಲ್ಲಿ ನಡೆಯಿತು. ಗ್ರಾಮಸ್ಥರು ಸ್ವಯಂ ಪ್ರೇರಿತರಾಗಿ ವಿಶೇಷ ತಪಾಸಣಾ ಶಿಬಿರದಲ್ಲಿ ಪಾಲ್ಗೊಂಡಿದ್ದರು. ಪರೀಕ್ಷೆ ನಡೆಸಿದ ಎಲ್ಲಾ 121 ಗ್ರಾಮಸ್ಥರ ವರದಿ ಕೂಡ ನೆಗೆಟಿವ್ ಬಂದಿದೆ.
ಕಡಬ ತಾಲೂಕಿನ ಸುಬ್ರಹ್ಮಣ್ಯದ ನಿವಾಸಿಯಾಗಿರುವ ಲಕ್ಷ್ಮೀನಾರಾಯಣ ಭಟ್ ಇವರು ಹಲವು ತಿಂಗಳಿನಿಂದ ಹೊಟ್ಟೆ ನೋವಿನಿಂದ ಬಳಲುತ್ತಿದ್ದು, ಈ ಬಗ್ಗೆ ವೈದ್ಯಕೀಯ ಪರೀಕ್ಷೆ ನಡೆಸಿದಾಗ ಹೊಟ್ಟೆಯಲ್ಲಿ ಕ್ಯಾನ್ಸರ್ ಗಡ್ಡೆ ಇರುವುದು ದೃಢ ಪಟ್ಟಿತು. ಆರ್ಥಿಕವಾಗಿ ಸಂಕಷ್ಟದಲ್ಲಿರುವ ಇವರು ಚಿಕಿತ್ಸೆಯ ವೆಚ್ಚಕ್ಕಾಗಿ ಮಾಧ್ಯಮದ ಮೂಲಕ ದಾನಿಗಳಿಂದ ಸಹಾಯಯಾಚಿಸಿದ್ದರು. ಈ ಬಗ್ಗೆ ಅಮರ ಸುದ್ದಿ ವೆಬ್ಸೈಟಿನಲ್ಲಿ ಬಂದ ವರದಿಯನ್ನು ವೀಕ್ಷಿಸಿ...
ಅಮರ ಸಂಜೀವಿನಿ ಗ್ರಾಮ ಪಂಚಾಯತ್ ಮಟ್ಟದ ಒಕ್ಕೂಟ ಗುತ್ತಿಗಾರು ಇದರ ಸದಸ್ಯರಿಂದ ವಳಲಂಬೆ ಅಂಗನವಾಡಿಯಲ್ಲಿ ಪೌಷ್ಟಿಕ ತೋಟ ರಚನೆ ಹಾಗೂ ಅಂಗನವಾಡಿಯ ಸುತ್ತಲೂ ಸ್ವಚ್ಛತೆ ಮಾಡಲಾಯಿತು. ಇವರ ಜೊತೆಗೆ ಬಾಲವಿಕಾಸ ಸಮಿತಿಯ ಅಧ್ಯಕ್ಷರು, ಸದಸ್ಯರು, ಸ್ತ್ರೀಶಕ್ತಿ ಸಂಘದ ಸದಸ್ಯರು, ಪಂಚಾಯತ್ ಸದಸ್ಯರು, ಪೋಷಕರು ಸಹಕರಿಸಿದರು.
ಕೃಷಿ ಮಸೂದೆಗಳನ್ನು ವಿರೋಧಿಸಿ ಕರ್ನಾಟಕದಾದ್ಯಂತ ಇಂದು ರೈತ ಸಂಘಟನೆಗಳು ಕರೆ ನೀಡಿರುವ ಬಂದ್ ಹಿನ್ನೆಲೆಯನ್ನು ಬೆಂಬಲಿಸಿ ಸಾಂಕೇತಿಕವಾಗಿ ಸುಳ್ಯದಲ್ಲಿ ಪ್ರತಿಭಟನೆ ನಡೆಸಿ ತಹಶಿಲ್ದಾರರಿಗೆ ಮನವಿಯನ್ನು ಸಲ್ಲಿಸಿದರು.ಕರವೇ ಕಾರ್ಯಕರ್ತರು ಇಂದು ಸುಳ್ಯ ತಾಲೂಕು ಕನ್ನಡ ರಕ್ಷಣಾ ವೇದಿಕೆ ಗೌರವ ಅದ್ಯಕ್ಷ ಅಶೋಕ್ ಕುಮಾರ್ ಮುಂದಾಳತ್ವದಲ್ಲಿ ಕೇರಳ-ಕರ್ನಾಟಕ ರಾಜ್ಯ ಹೆದ್ದಾರಿಯನ್ನು ಕ್ಷಣ ಕಾಲ ತಡೆದು ಸಾಂಕೇತಿಕವಾಗಿ ಪ್ರತಿಭಟನೆ ಮಾಡಿದರು....
ಸ್ಥಳೀಯ ನಗರ ಪಂಚಾಯತಿ ಚುನಾವಣೆ ಕಳೆದು 16 ತಿಂಗಳುಗಳೇ ಕಳೆಯಿತು. ಆದರೆ ಆಡಳಿತ ನಡೆಸಲು ಸಮಿತಿ ರಚನೆಯಾಗದೆ , ಮತನೀಡಿ ಗೆಲ್ಲಿಸಿ ಕಳುಹಿಸಿದ ತಮ್ಮ ತಮ್ಮ ವಾರ್ಡಿನ ಜನತೆಗೆ ಉತ್ತರಿಸಲು ಸಾಧ್ಯವಾಗದೆ ಸಂಕಷ್ಟದ ಪರಿಸ್ಥಿತಿಯಲ್ಲಿ ಸ್ಥಳೀಯ ನಗರ ಪಂಚಾಯತ್ ನ ಸದಸ್ಯರುಗಳು ಸಂಕಷ್ಟದಲ್ಲಿ ಸಿಲುಕಿರುತ್ತಾರೆ.ಸುಳ್ಯದ ಪ್ರತಿಯೊಂದು ವಾರ್ಡ್ಗಳಲ್ಲಿ ಮೂಲಭೂತ ಸಮಸ್ಯೆಗಳ ಮಹಾಪೂರವೇ ಎದ್ದುಕಾಣುತ್ತಿದೆ.ನಗರ ಪ್ರದೇಶಗಳಲ್ಲಿ ಕುಡಿಯುವ...
Loading posts...
All posts loaded
No more posts