- Monday
- November 25th, 2024
ಸುಳ್ಯ ಬೇಂಗಮಲೆ ಪರಿಸರದಲ್ಲಿ ಬೆಳ್ಳಾರೆಯಿಂದ ಸುಳ್ಯಕ್ಕೆ ಬರುತ್ತಿದ್ದ ಸ್ಕೂಟಿ ಸುಳ್ಯದಿಂದ ಬೆಳ್ಳಾರೆಗೆ ಹೋಗುತ್ತಿದ್ದ ಬೈಕ್ ಪರಸ್ಪರ ಡಿಕ್ಕಿ ಸಂಭವಿಸಿ ಸವಾರರು ಗಂಭೀರವಾಗಿ ಗಾಯಗೊಂಡಿದ್ದಾರೆ. ಇಂದು ಸಂಜೆ 6 ಗಂಟೆಗೆ ಸಂಭವಿಸಿದ ಅಪಘಾತದಲ್ಲಿ ಸವಾರರು ವಾಹನದಿಂದ ನೆಲಕ್ಕೆ ಉರುಳಿ ಕಾಲುಗಳಿಗೆ ಗಂಭೀರ ಗಾಯವಾಗಿದೆ. ಸುಮಾರು ಅರ್ಧಗಂಟೆಗೂ ಹೆಚ್ಚುಕಾಲ ರಸ್ತೆಯಲ್ಲಿ ಚಡಪಡಿಸುತ್ತಿದ್ದ ದೃಶ್ಯ ಕಂಡು ಬರುತ್ತಿತ್ತು ಎಂದು ಸ್ಥಳೀಯರು...
PGSN Prasad Navin mupperya ನಾಗರಿಕ ಸೇವಾ ಸಮಿತಿ ಬಾಳಿಲ - ಮುಪ್ಪೇರ್ಯ ಇದರ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ಇತ್ತೀಚೆಗೆ ನಡೆಯಿತು. ನೂತನ ಸಮಿತಿಯ ಗೌರವಾಧ್ಯಕ್ಷರಾಗಿ ಪಿ.ಜಿ.ಎಸ್.ಎನ್. ಪ್ರಸಾದ್, ಅಧ್ಯಕ್ಷರಾಗಿ ಕೃಷ್ಣಪ್ಪ ಪೂಜಾರಿ ಮೂಲೆಮಜಲು, ಉಪಾಧ್ಯಕ್ಷರಾಗಿ ಕರುಣಾಕರ ದೇವಸ್ಯ, ಕಾರ್ಯದರ್ಶಿಯಾಗಿ ನವೀನ್ ಮುಪ್ಪೇರ್ಯ, ಖಜಾಂಜಿಯಾಗಿ ನಾರಾಯಣ ನಾಯ್ಕ ಕಾಪುತ್ತಡ್ಕ ರನ್ನು ಆಯ್ಕೆ ಮಾಡಲಾಯಿತು. ಇದೇ...
ಕೊಲ್ಲಮೊಗ್ರ ಬಿ.ಜೆ.ಪಿ ಗ್ರಾಮ ಸಮಿತಿ ವತಿಯಿಂದ ಕೇಂದ್ರ ಸರ್ಕಾರದ ಮಹತ್ವಕಾಂಕ್ಷಿ ಯೋಜನೆಯಗಳಲ್ಲೊಂದಾದ ಆಯುಷ್ಮಾನ್ ಕಾರ್ಡ್ ಯೋಜನೆಯ ನೋಂದಣಿ ಅಭಿಯಾನ ಸೆಪ್ಟೆಂಬರ್ 15 ಮತ್ತು 16 ರಂದು ಕೊಲ್ಲಮೊಗ್ರದ ಮಯೂರ ಕಲಾಮಂದಿರದಲ್ಲಿ ನಡೆಯಲಿದ್ದು ಇದರ ಸದುಪಯೋಗವನ್ನು ಪಡೆದುಕೊಳ್ಳಬಹುದು. ನೋಂದಣಿ ವೇಳೆ ಆಧಾರ್ ಕಾರ್ಡ್ ಹಾಗೂ ಪಡಿತರ ಚೀಟಿ ತರಬೇಕೇಂದು ಬಿ.ಜೆ.ಪಿಯ ಬೂತ್ ಸಮಿತಿ ಪ್ರಕಟಣೆಯಲ್ಲಿ ತಿಳಿಸಿದೆ.
ಗುತ್ತಿಗಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಇದರ ವತಿಯಿಂದ ಸೆ.10 ಮತ್ತು ಸೆ.11 ರಂದು ಉಚಿತ ಆಯುಷ್ಮಾನ್ ಭಾರತ್ ಕಾರ್ಡ್ ನೊಂದಾವಣೆ ಹಾಗೂ ವಿವಿಧ ಹಂತಗಳಲ್ಲಿ ಮಾಸಿಕ ಉಳಿತಾಯ ಮಾಡಿ ಲಕ್ಷಾಧಿಪತಿ ಯೋಜನೆಗೆ ಚಾಲನೆ ನೀಡುವ ಕಾರ್ಯಕ್ರಮ ನಡೆಯಲಿದೆ.ಸೆ.10 ರಂದು ಗುತ್ತಿಗಾರು ಗ್ರಾಮದವರ ಆಯುಷ್ಮಾನ್ ಭಾರತ್ ಕಾರ್ಡ್ ನೋಂದಣೆ ನಡೆದರೆ, ಸೆ.11 ರಂದು ದೇವಚಳ್ಳ...
ಬಡ ಹಾಗೂ ನಿರಾಶ್ರಿತ ಕುಟುಂಬಕ್ಕೆ ಮನೆ ನಿರ್ಮಿಸಿ ನೀಡುವ ಉದ್ದೇಶದಿಂದ ಅಸ್ತಿತ್ವಕ್ಕೆ ಬಂದ ಆಸರೆ ಯೊಜನೆಯ ಸಮಿತಿ ಸಭೆಯು ಮಹಮ್ಮದ್ ಕುಞಿ ಗೂನಡ್ಕರವರ ಕಚೇರಿಯಲ್ಲಿ ನಡೆಯಿತು. ಸಮಿತಿ ಸಂಚಾಲಕರಾದ ಮಹಮ್ಮದ್ ಕುಂಞಿ ಗೂನಡ್ಕ ರವರು ಅಧ್ಯಕ್ಷತೆ ವಹಿಸಿದ್ದರು.ಆಸರೆ ಸಮಿತಿ ಮುಖಾಂತರ ನಿರ್ಮಿಸಲು ಉದ್ದೇಶಿಸಿದ ಮನೆಯ ಕಾಮಗಾರಿಗಳ ಕುರಿತು ಚರ್ಚಿಸಲಾಯಿತು.ಈಗಾಗಲೇ ಮನೆ ನಿವೇಶನ ಸಮತಟ್ಟು ಕಾರ್ಯವು ಪೂರ್ಣಗೊಂಡಿದ್ದು...
ಬಿಎಸ್ಎನ್ಎಲ್ ನೆಟ್ವರ್ಕ್ ಸಮಸ್ಯೆ ಯಿಂದ ಬೇಸತ್ತು ಹೋಗಿರುವ ಜನರಿಗೆ ಸಿಹಿ ಸುದ್ದಿ ಸಿಗುವ ಸಮಯ ಬಂದಿದೆ. ಹರಿಹರ ಪಲ್ಲತ್ತಡ್ಕ ಕೊಲ್ಲಮೊಗ್ರ ಹಾಗೂ ಮಡಪ್ಪಾಡಿಯಲ್ಲಿ ಜಿಯೋ ಟವರ್ ಅಳವಡಿಸಿದ್ದರೂ ಕೇಬಲ್ ಅಳವಡಿಕೆ ಹಾಗೂ ತಾಂತ್ರಿಕ ಕಾರಣಗಳಿಂದ ಬಾಕಿಯಾಗಿತ್ತು. ಇದೀಗ ಎಲ್ಲಾ ತಾಂತ್ರಿಕ ಕೆಲಸಗಳು ಪೂರ್ಣಗೊಂಡಿದ್ದು ಜಿಯೋ ಅಧಿಕಾರಿಗಳು ಇಂದು ಚಾಲನೆ ನೀಡಿದ್ದಾರೆ. ಸಾಪ್ಟ್ ವೇರ್ ಅಪ್ ಲೋಡ್...
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ , ದ.ಕ ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್ ಸುಳ್ಯ ಹಾಗೂ ಪೆರುವಾಜೆ ಗ್ರಾಮ ಪಂಚಾಯತ್ ಇದರ ಸಹಯೋಗದಲ್ಲಿ ಉದ್ಯೋಗ ಖಾತರಿ ಯೋಜನೆಯಡಿ ಸಪ್ಟೆಂಬರ್ ತಿಂಗಳ ವಿಶೇಷ ಅಭಿಯಾನ ಸೋಕ್ ಪಿಟ್( ಬಚ್ಚಲು ಗುಂಡಿ)ಅಭಿಯಾನಕ್ಕೆಚಾಲನೆ ನೀಡಲಾಯಿತು. ಸುಳ್ಯ ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಭವಾನಿಶಂಕರ ಎನ್. ಸೋಕ್ ಪಿಟ್ ಅಭಿಯಾನಕ್ಕೆ ಚಾಲನೆ...
ಸುಳ್ಯ ಫೋಟೋಗ್ರಾಫರ್‍ಸ್ ಎಸೋಸಿಯೇಶನ್ ನ ಸದಸ್ಯತ್ವ ನವೀಕರಣ ಹಾಗೂ ಸಾಮಾನ್ಯ ಸಭೆ ಸುಳ್ಯ ಸಿ.ಎ.ಬ್ಯಾಂಕ್ ಸಭಾಂಗಣದಲ್ಲಿ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಫೋಟೋಗ್ರಾಫರ್‍ಸ್ ಎಸೋಸಿಯೇಶನ್ ನ ಸ್ಥಾಪಕಾಧ್ಯಕ್ಷ ಗೋಪಾಲ್ ಸುಳ್ಯ ಕಾರ್ಯಕ್ರಮ ಉದ್ಘಾಟಿಸಿ ಶುಭಹಾರೈಸಿದರು.ಅಧ್ಯಕ್ಷ ಸುಧಾಕರ ಪಿ.ಎಸ್. ಅಧ್ಯಕ್ಷತೆ ವಹಿಸಿ ಮಾತನಾಡಿದರು.ಗೌರವಾಧ್ಯಕ್ಷ ಹಾಗೂ ಜಿಲ್ಲಾ ವಲಯ ಸಂಘಟಕ ಲೋಕೇಶ್ ಸುಬ್ರಹ್ಮಣ್ಯ, ಜಿಲ್ಲಾ ಎಸ್.ಕೆ.ಪಿ.ಎ ವಿವಿಧೋದ್ದೇಶ ಸಹಕಾರಿ ಸಂಘದ...
ಡ್ರೈವಿಂಗ್ ಲೈಸೆನ್ಸ್, ಪ್ಯಾನ್ ಕಾರ್ಡ್, ರೇಷನ್ ಕಾರ್ಡ್ ಪಡೆಯಲು ನೀವು ಬೇರೆ ಬೇರೆ ಸ್ಥಳಗಳಿಗೆ ಹೋಗಬೇಕಾಗಿಲ್ಲ. ಈಗ ನೀವು ಈ ಎಲ್ಲದಕ್ಕೂ ಅಂಚೆ ಕಚೇರಿಯಲ್ಲಿಯೇ ಅರ್ಜಿ ಸಲ್ಲಿಸಬಹುದು. ಕೇಂದ್ರ ಸರ್ಕಾರ ಪೋಸ್ಟ್ ಆಫೀಸ್ ಸಾಮಾನ್ಯ ಸೇವಾ ಕೇಂದ್ರವನ್ನು ಪ್ರಾರಂಭಿಸಿದೆ. ಸಾಮಾನ್ಯ ಸೇವಾ ಕೇಂದ್ರದ ಮೂಲಕ ಜನರು ಡಿಎಲ್, ಪ್ಯಾನ್ ಕಾರ್ಡ್, ಪಡಿತರ ಚೀಟಿ ಮುಂತಾದ ಕೆಲಸವನ್ನು...
ಸುಬ್ರಹ್ಮಣ್ಯದ ಉದ್ಯಮಿ ಹರೀಶ್ ಇಂಜಾಡಿಯವರ ತಾಯಿ, ನಿವೃತ್ತ ಮುಖ್ಯ ಶಿಕ್ಷಕ ಪುಂಗವ ಗೌಡ ಇಂಜಾಡಿಯವರ ಧರ್ಮಪತ್ನಿ ಶ್ರೀಮತಿ ಕಲ್ಯಾಣಿ ಪುಂಗವ ಗೌಡರು ಅಸೌಖ್ಯದಿಂದ ಸೆ.8 ರಂದು ರಾತ್ರಿ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಇವರಿಗೆ 76 ವರ್ಷ ವಯಸ್ಸಾಗಿತ್ತು. ಇವರು ಸುಬ್ರಹ್ಮಣ್ಯ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮುಖ್ಯ ಶಿಕ್ಷಕಿಯಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದರು. ಮೃತರು...
Loading posts...
All posts loaded
No more posts