- Friday
- November 1st, 2024
ಉಬರಡ್ಕ ಮಿತ್ತೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದಲ್ಲಿ ಮುಖ್ಯಕಾರ್ಯನಿರ್ವಹಣಾಧಿಕಾರಿಯಾಗಿ 32 ವರ್ಷಗಳ ಕಾಲ ಸೇವೆ ಸಲ್ಲಿಸಿದ ನಿತ್ಯಾನಂದ ಎನ್. ರವರಿಗೆ ಬೀಳ್ಕೊಡುಗೆ ಸಮಾರಂಭವು ಸೆ.30 ರಂದು ಸಹಕಾರಿ ಸಂಘದ ಸಭಾಭವನದಲ್ಲಿ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ದಾಮೋದರ ಮದುವೆಗದ್ದೆ ವಹಿಸಿದ್ದರು.ಸಮಾರಂಭದಲ್ಲಿ ಸಂಘದ ಉಪಾಧ್ಯಕ್ಷರಾದ ಭಾಸ್ಕರ ಯು.ವಿ, ನಿರ್ದೇಶಕರುಗಳಾದ ರತ್ನಾಕರ ಗೌಡ ಬಳ್ಳಡ್ಕ, ಹರೀಶ್...
ಭಾರತೀಯ ಜನತಾ ಪಾರ್ಟಿ ಯುವ ಮೋರ್ಚಾ ಸುಳ್ಯ ಮಂಡಲ ಮತ್ತು ಸುಳ್ಯ ನಗರ ಮಹಾಶಕ್ತಿ ಕೇಂದ್ರದ ವತಿಯಿಂದ ಅ.2 ರಂದು ಸುಳ್ಯ ಸರಕಾರಿ ಆಸ್ಪತ್ರೆಯ ಆವರಣದಲ್ಲಿ ಪೂರ್ವಾಹ್ನ 7.30ಕ್ಕೆ ಸರಿಯಾಗಿ ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿ ಯವರ ಜನ್ಮದಿನ ಗಾಂಧಿ ಜಯಂತಿ ಯ ಪ್ರಯುಕ್ತ ಪ್ರಧಾನಿ ನರೇಂದ್ರ ಮೋದಿಯವರ ಆದರ್ಶ ಕಾರ್ಯಕ್ರಮವಾದ ಸ್ವಚ್ಛ ಭಾರತ್ ಕಾರ್ಯಕ್ರಮ ನಡೆಯಲಿದೆ....
ಎನ್ ಎಸ್ ಯುಐ ದ.ಕ. ಜಿಲ್ಲಾ ನೂತನ ಅಧ್ಯಕ್ಷರಾಗಿ ಸವಾದ್ ಸುಳ್ಯ ಅವರನ್ನು ನೇಮಕಗೊಳಿಸಿ ಕೂಡಲೇ ಜಾರಿಗೆ ಬರುವಂತೆ ರಾಷ್ಟ್ರೀಯ ಎನ್ ಎಸ್ ಯುಐ ಕಾರ್ಯದರ್ಶಿ ಎರಿಕ್ ಸ್ಟೀಫನ್ ಅವರು ಬುಧವಾರ ಆದೇಶ ಹೊರಡಿಸಿದ್ದಾರೆ. ಸುಳ್ಯದ ಉದ್ಯಮಿ ನಾವೂರು ಅಬೂಬಕ್ಕರ್ ಮತ್ತು ಮೈಮೂನ ದಂಪತಿಯ ಪುತ್ರರಾಗಿರುವ ಮಹಮ್ಮದ್ ಸವಾದ್ ಅವರು ವಿಧ್ಯಾರ್ಥಿ ದೆಸೆಯಿಂದಲೇ ಸಂಘಟನೆ ಮತ್ತು...
ಕೇಂದ್ರ ಹಾಗೂ ರಾಜ್ಯ ಸರಕಾರಗಳ ಭೂ ಸುಧಾರಣಾ ಹಾಗೂ ಎ.ಪಿ.ಎಂ.ಸಿ. ಕಾಯ್ದೆ ತಿದ್ದುಪಡಿ ವಿರೋಧಿಸಿ ಅ.2 ರಂದು ಸುಳ್ಯದ ತಾಲೂಕು ಪಂಚಾಯತ್ ಎದುರು ಕಾಂಗ್ರೆಸ್ ಧರಣಿ ಸತ್ಯಾಗ್ರಹ ನಡೆಸಲಿದೆ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎನ್.ಜಯಪ್ರಕಾಶ್ ರೈಸೆ.30 ರಂದು ಸುಳ್ಯ ಪ್ರೆಸ್ ಕ್ಲಬ್ ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. “ಕೆ.ಪಿ.ಸಿ.ಸಿ. ನಿರ್ದೇಶನದ ಮೇರೆ ರಾಜ್ಯಾದ್ಯಂತ ಈ ಕಾರ್ಯಕ್ರಮ...
ಸುಳ್ಯ ನಗರ ಪಂಚಾಯತ್ ಮೀಸಲಿಟ್ಟ ಗಾಂಧಿನಗರದ ವಾಣಿಜ್ಯ ಕಟ್ಟಡದಲ್ಲಿರುವ ಮಳಿಗೆಗಳು ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ಮೀಸಲ್ಪಟ್ಟಿದ್ದು ಇದರ ಮಾಹಿತಿ ಸಂಗ್ರಹಕ್ಕಾಗಿ ಕಳೆದ ಎರಡು ದಿನಗಳ ಹಿಂದೆ ನಗರ ಪಂಚಾಯಿತಿಗೆ ಮನವಿಯನ್ನು ಮಾಡಿದ್ದೆ. ಈ ಘಟನೆಗೆ ಸಂಬಂಧಿಸಿದಂತೆ ನಗರ ಪಂಚಾಯತಿಯ ಮಾಜಿ ಅಧ್ಯಕ್ಷರು ದೂರವಾಣಿ ಮೂಲಕ ನನಗೆ ಜೀವ ಬೆದರಿಕೆ ಒಡ್ಡಿದ್ದಾರೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ...
ಕಳಂಜ ಸಮೀಪದ ಅಯ್ಯನಕಟ್ಟೆ ಸೇತುವೆ ಪಕ್ಕದ ತಿರುವಿನಲ್ಲಿ ಬೈಕ್ ಹಾಗೂ ಸ್ಕೂಟಿ ಮಧ್ಯೆ ಮುಖಾಮುಖಿ ಡಿಕ್ಕಿ ಸಂಭವಿಸಿದ ಘಟನೆ ಸೆ. 30 ರಂದು ವರದಿಯಾಗಿದೆ. ಡಿಕ್ಕಿ ಹೊಡೆದ ರಭಸಕ್ಕೆ ಎರಡೂ ವಾಹನಗಳು ಜಖಾಂಗೊಂಡಿದ್ದು, ಸ್ಕೂಟಿ ಸವಾರ ಕಳಂಜ ಪಟ್ಟೆಯ ಕುಶಾಲಪ್ಪ ಗೌಡ ಹಾಗೂ ಬೈಕ್ ಸವಾರ ಕಳಂಜ ಮಣಿಮಜಲಿನ ಮಾರಪ್ಪ ಮೂಲ್ಯ ಎಂದು ಗುರುತಿಸಲಾಗಿದೆ. ಸವಾರರಿಬ್ಬರಿಗೂ...
ಬಾಳಿಲ ಗ್ರಾಮ ಪಂಚಾಯತ್ ವ್ಯಾಪ್ತಿಯ ನಿವಾಸಿಗಳಿಗಾಗಿ ವಿಶೇಷ ಕೋವಿಡ್ ತಪಾಸಣಾ ಶಿಬಿರವನ್ನು ಅ.01 ರ ಗುರುವಾರದಂದು ಪೂರ್ವಾಹ್ನ 10 ಗಂಟೆಯಿಂದ ಅಪರಾಹ್ನ 1 ಗಂಟೆ ತನಕ ಬಾಳಿಲ ಗ್ರಾಮ ಪಂಚಾಯತ್ ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ. ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಬಂದು ಪರೀಕ್ಷೆ ನಡೆಸಿಕೊಳ್ಳಬಹುದಾಗಿ ಪ್ರಕಟನೆಯಲ್ಲಿ ತಿಳಿಸಲಾಗಿದೆ. ವಿಶೇಷ ಸೂಚನೆ :● ಪರೀಕ್ಷೆ ನಡೆಸಲು ಬರುವವರು ತಮ್ಮ ಮೊಬೈಲ್...
ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ನ ಆದೇಶದಂತೆ ಆರೋಗ್ಯ ಇಲಾಖೆಯ ಸಹಕಾರದಲ್ಲಿ ಕಳಂಜ ಗ್ರಾಮ ಪಂಚಾಯತ್ ವ್ಯಾಪ್ತಿಯ ಸಾರ್ವಜನಿಕರಿಗಾಗಿ ವಿಶೇಷ ಕೋವಿಡ್ -19 ತಪಾಸಣಾ ಶಿಬಿರವನ್ನು ಅ. 02 ರ ಶುಕ್ರವಾರದಂದು ಪೂರ್ವಾಹ್ನ 10 ರಿಂದ ಅಪರಾಹ್ನ ಗಂಟೆ 1 ರವರೆಗೆ ಅಕ್ಷರ ಕರಾವಳಿ ಕಟ್ಟಡ ವಿಷ್ಣುನಗರ ಕಳಂಜ ಇಲ್ಲಿ ಹಮ್ಮಿಕೊಳ್ಳಲಾಗಿದೆ. ಗ್ರಾಮಸ್ಥರು ಸ್ವಯಂ ಪ್ರೇರಿತರಾಗಿ...
ಸೆಪ್ಟೆಂಬರ್ 20ರಂದು ಬೊಳಿಯಮಜಲು ಭಾಗ್ಯಶ್ರೀ ನವೋದಯ ಸ್ವ ಸಹಾಯ ಸಂಘವನ್ನು ಶಾಂತಿ ಪ್ರಭು ಇವರು ಉದ್ಘಾಟಿಸಿದರು. ಸಂಘದ ವಲಯ ಪ್ರೇರಕರಾದ ಶ್ರೀಧರ ಮಾಣಿಮರ್ಧು ಮಾಹಿತಿ ನೀಡಿದರು.ಸಂಘದ ಅಧ್ಯಕ್ಷರಾಗಿ ಪ್ರಸಾದ್ ಹೊಳ್ಳ ಕಾರ್ಯದರ್ಶಿಯಾಗಿ ನವೀನ ಇವರನ್ನು ಆಯ್ಕೆ ಮಾಡಲಾಯಿತು. ಸದಸ್ಯರುಗಳಾಗಿ ಅಕ್ಷರ , ವಿಶ್ವನಾಥ, ಮನೋಜ್, ಮಂಜುನಾಥ್, ಕೇಶವ ಪ್ರಭು, ತಾರನಾಥ್, ತೀರ್ಥ ಪ್ರಸಾದ್, ಕೇಶವ ಮತ್ತು...