ಆರೋಗ್ಯ ಇಲಾಖೆಯ ಗುತ್ತಿಗೆ ನೌಕರರಿಂದ ಅನಿರ್ದಿಷ್ಟವಧಿ ಮುಷ್ಕರ ಆರಂಭಗೊಂಡಿದ್ದು, ಇದರ ಹಿನ್ನಲೆಯಲ್ಲಿ ಸುಳ್ಯ ಸರಕಾರ ಆಸ್ಪತ್ರೆಯಲ್ಲಿ ರೋಗಿಗಳು ಮತ್ತು ವೈದ್ಯರುಗಳು, ನರ್ಸ್‌ಗಳು ಸಂಕಷ್ಟವನ್ನು ಎದುರಿಸುತ್ತಿದ್ದಾರೆ. ಸುಳ್ಯ ಸರಕಾರಿ ಆಸ್ಪತ್ರೆಯಲ್ಲಿ ಸುಮಾರು ೨೫ಕ್ಕೂ ಅಧಿಕ ಗುತ್ತಿಗೆ ಮತ್ತು ಹೊರಗುತ್ತಿಗೆ ಅಡಿಯಲ್ಲಿ ಡಿ’ಗ್ರೂಫ್ ನೌಕರರು ಸೇವೆ ಸಲ್ಲಿಸುತ್ತಿದ್ದು, ಆಸ್ಪತ್ರೆಯ ಸ್ವಚ್ಛತೆಯಿಂದ ಹಿಡಿದು ತುರ್ತುವಿಭಾಗದ ಎಲ್ಲಾ ಘಟಕಗಳಲ್ಲಿಯೂ ಇವರ ಕೊರತೆ ವೈದ್ಯರಿಗೆ ಮತ್ತು ರೋಗಿಗಳಿಗೆ ತಟ್ಟಿರುತ್ತದೆ. ಕಳೆದ ಎರಡು ದಿನಗಳಿಂದ ಆಸ್ಪತ್ರೆಯಲ್ಲಿ ಎಲ್ಲಾ ಕೆಲಸ ಕಾರ್ಯವನ್ನು ಹಿರಿಯ ನರ್ಸ್‌ಗಳು, ವೈದ್ಯರುಗಳು ಸೇರಿಕೊಂಡು ಮಾಡುವ ಪರಿಸ್ಥಿತಿ ಬಂದಿದೆ.
ಖಾಯಿಲೆಗಳ ಯುಗದಲ್ಲಿ ಇರುವ ಈ ಸಂದರ್ಭಈ ರೀತಿಯ ಮುಷ್ಕರಗಳು ರೋಗಿಗಳಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ಸರಕಾರವು ಕೂಡಲೇ ಇವರ ಬೇಡಿಕೆಗಳಿಗೆ ಸ್ಪಂದಿಸದಿದ್ದಲ್ಲಿ ಈ ಹೋರಾಟ ಎಲ್ಲಿಯವರೆಗೆ ಎಂದು ಹೇಳಲು ಸಾಧ್ಯವಿಲ್ಲವೆಂದು ಸಂಬಂಧಪಟ್ಟವರು ಹೇಳುತ್ತಿದ್ದಾರೆ.
- Friday
- November 1st, 2024