Ad Widget

ಸವಣೂರು ಪುಣ್ಚಪ್ಪಾಡಿ ಹೊಸಗದ್ದೆ ರಸ್ತೆ ಕಾಮಗಾರಿಗೆ ಶಾಸಕ ಎಸ್.ಅಂಗಾರ ಗುದ್ದಲಿಪೂಜೆ

ಸವಣೂರು ಪುಣ್ಚಪ್ಪಾಡಿ ಹೊಸಗದ್ದೆ ರಸ್ತೆ ಕಾಮಗಾರಿಗೆ ಶಾಸಕ ಶ್ರೀ ಎಸ್ ಅಂಗಾರ ಗುದ್ದಲಿ ಪೂಜೆ ನೆರವೇರಿಸಿದರು, ಸುಮಾರು ರೂ 80 ಲಕ್ಷ ಅನುದಾನದಲ್ಲಿ ಈ ಕಾಮಗಾರಿ ನಡೆಯಲಿದೆ. ಈ ಸಂದರ್ಭದಲ್ಲಿ ಕಡಬ ತಾಲೂಕು ಪಂಚಾಯತ್ ಅಧ್ಯಕ್ಷೆ ಕು ರಾಜೇಶ್ವರಿ , ಸುಳ್ಯ ಬಿಜೆಪಿ ಮಂಡಲ ಸಮಿತಿ ಪ್ರ ಕಾರ್ಯದರ್ಶಿ ರಾಕೇಶ್ ರೈ ಕೆಡೆಂಜಿ, ಕಾರ್ಯದರ್ಶಿ ಶ್ರೀಮತಿ...

ಸೇವಾಜೆ : ಸಂಜೀವಿನಿ ಸಂಘದ ಸದಸ್ಯರಿಂದ ಪೌಷ್ಟಿಕಾಹಾರ ಕೈತೋಟ ರಚನೆ

ಶ್ರೀ ವಿಷ್ಣು ಸಂಜೀವಿನಿ ಗ್ರಾಮ ಪಂಚಾಯತ್ ಮಟ್ಟದ ಒಕ್ಕೂಟ ದೇವಚಳ್ಳ ಇದರ ಮೂಲಕ ಸೇವಾಜೆ ಅಂಗನವಾಡಿ ಕೇಂದ್ರದಲ್ಲಿ ಸಂಜೀವಿನಿ ಸಂಘದ ಸದಸ್ಯರಿಂದ ಪೌಷ್ಟಿಕ ಆಹಾರ ಬೆಳೆಗಳ ಕೈತೋಟ ರಚನೆ ಮಾಡಲಾಯಿತು. ಸಂಜೀವಿನಿ ಸಂಘದ ಸದಸ್ಯರಾದ ಭಾರತಿ, ಪ್ರೇಮ, ಗೌರಿ, ಪ್ರಮೀಳಾ, ಗೀತಾ, ಅಂಗನವಾಡಿ ಕಾರ್ಯಕರ್ತೆ ರೇಣುಕಾ ಗುಡ್ಡನಮನೆ, ದೇವಚಳ್ಳ ಗ್ರಾ.ಪಂ.ಕಾರ್ಯದರ್ಶಿ ಗುರುಪ್ರಸಾದ್ ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.
Ad Widget

ಪಂಜಿಗಾರು : ಶ್ರೀ ಕಾಳಿಕಾಂಬಾ ಮೊಬೈಲ್ಸ್ & ಅಲ್ಯುಮಿನಿಯಂ ಫ್ಯಾಬ್ರಿಕೇಶನ್ ಶುಭಾರಂಭ

ಬೆಳ್ಳಾರೆ ಸಮೀಪದ ಪಂಜಿಗಾರು ಕೆ.ಜೆ.ಬಿಲ್ಡಿಂಗ್ ನಲ್ಲಿ ಶ್ರೀ ಸತೀಶ್ ಪದವು ಮಾಲಕತ್ವದ ಶ್ರೀ ಕಾಳಿಕಾಂಬಾ ಮೊಬೈಲ್ಸ್ & ಅಲ್ಯುಮಿನಿಯಂ ಫ್ಯಾಬ್ರಿಕೇಶನ್ ಸೆ.18 ರಂದು ಶುಭಾರಂಭಗೊಂಡಿತು. ಇಲ್ಲಿ ಎಲ್ಲಾ ಕಂಪೆನಿಯ ಮೊಬೈಲ್ ರೀಚಾರ್ಜ್ ಮತ್ತು ಟಿ.ವಿ. ರೀಚಾರ್ಜ್ ಲಭ್ಯವಿರಲಿದೆ. ಜೊತೆಗೆ ಅಲ್ಯುಮಿನಿಯಂ ಕಿಟಕಿ, ಫೈಬರ್ ಡೋರ್, ಕಿಚನ್ ವರ್ಕ್ಸ್, ಡಿಸೈನ್ ಡೋರ್ ಹಾಗೂ ಫಾಲ್ಟ್ರೇಶನ್ ಕೆಲಸಗಳನ್ನು ಮಾಡಿಕೊಡಲಾಗುವುದೆಂದು...

ಅತಿವೃಷ್ಟಿ- ಪ್ರವಾಹ ಪೀಡಿತ ಪಟ್ಟಿಯಿಂದ ಸುಳ್ಯವನ್ನು ಕೈಬಿಟ್ಟ ಅಧಿಕಾರಿಗಳ ನಡೆಗೆ ಮಲೆನಾಡು ಹಿತರಕ್ಷಣಾ ವೇದಿಕೆ ಖಂಡನೆ

ರಾಜ್ಯದ ಅತಿವೃಷ್ಟಿ- ಪ್ರವಾಹ ಪೀಡಿತ ತಾಲೂಕುಗಳ ಪಟ್ಟಿಯಿಂದ ಮಲೆನಾಡು ಪ್ರದೇಶವಾದ ಸುಳ್ಯ ತಾಲೂಕನ್ನು ಕೈಬಿಟ್ಟಿರುವ ಇಲಾಖೆಯ ಅಧಿಕಾರಿಗಳ ನಡೆಯನ್ನ ಮಲೆನಾಡು ಹಿತರಕ್ಷಣಾ ವೇದಿಕೆ ಖಂಡಿಸಿದ್ದು, ಈ ಬಗ್ಗೆ ಸರಕಾರ ಗಮನವಹಿಸದಿದ್ದಲ್ಲಿ ತಾಲೂಕು ಕೇಂದ್ರದ ಎದುರು ಪ್ರತಿಭಟನೆ ನಡೆಸುವುದಾಗಿ ತೀರ್ಮಾನಿಸಿದೆ. ಸುಬ್ರಹ್ಮಣ್ಯ ಐನೆಕಿದು ಪ್ರಾಥಮಿಕ ಸಹಕಾರಿ ಸಂಘದಲ್ಲಿ ಸೆ.18 ರಂದು ಜರಗಿದ ವೇದಿಕೆಯ ಸಭೆಯಲ್ಲಿ ಈ ನಿರ್ಧಾರ...

ಸುಳ್ಯ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾಗಿ ಕೃಷ್ಣ ಬೆಟ್ಟ – ಕಾರ್ಯದರ್ಶಿ ಪದ್ಮನಾಭ ಮುಂಡಕಜೆ

Padmanabha mundakaje Lokesh Guddemane ಸುಳ್ಯ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಮಹಾಸಭೆ ಇಂದು ಪ್ರೆಸ್ ಕ್ಲಬ್ ನಲ್ಲಿ ನಡೆಯಿತು. ಸಂಘದ ಅಧ್ಯಕ್ಷ ಮುರಳೀಧರ ಅಡ್ಡನಪಾರೆ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು. ಸಂಘದ ನೂತನ ಅಧ್ಯಕ್ಷರಾಗಿ ಕೃಷ್ಣ ಬೆಟ್ಟ, ಗೌರವಾಧ್ಯಕ್ಷರಾಗಿ ಮುರಳೀಧರ ಅಡ್ಡನಪಾರೆ, ಕಾರ್ಯದರ್ಶಿಯಾಗಿ ಪದ್ಮನಾಭ ಮುಂಡಕಜೆ, ಜತೆ ಕಾರ್ಯದರ್ಶಿಯಾಗಿ ಶಿವಪ್ರಸಾದ್...

ಹಿಂದೂ ಜಾಗರಣ ವೇದಿಕೆ ಮಡಪ್ಪಾಡಿ ಘಟಕ ರಚನೆ – ಅಧ್ಯಕ್ಷರಾಗಿ ಹೇಮಕುಮಾರ್ ಹಾಡಿಕಲ್ಲು

ಹಿಂದೂ ಜಾಗರಣ ವೇದಿಕೆ ಸುಳ್ಯ ತಾಲೂಕು, ಗುತ್ತಿಗಾರು ವಲಯದ 'ಮಡಪ್ಪಾಡಿ ಘಟಕ'ವು ಇಂದು ಮಡಪ್ಪಾಡಿಯ 'ಯುವಕ ಮಂಡಲ'ದಲ್ಲಿ ರಾಷ್ಟ್ರಿಯ ಸ್ವಯಂಸೇವಕ ಸಂಘದ ಗುತ್ತಿಗಾರು ಮಂಡಲ ಕಾರ್ಯವಾಹಕರಾದ ಕರುಣಾಕರ ಪಾರೆಪ್ಪಾಡಿ ಇವರ ಸಮ್ಮುಖದಲ್ಲಿ ರಚನೆಗೊಂಡಿತು . ಈ ನೂತನ ಘಟಕದ ಗೌರವಾಧ್ಯಕ್ಷರಾಗಿ ಲೋಕಪ್ಪ ಶೀರಡ್ಕ, ಅಧ್ಯಕ್ಷರಾಗಿ ಹೇಮಕುಮಾರ್ ಹಾಡಿಕಲ್ಲು, ಉಪಾಧ್ಯಕ್ಷರಾಗಿ ವೇಣುಗೋಪಾಲ ಶೀರಡ್ಕ ಪ್ರಧಾನ ಕಾರ್ಯದರ್ಶಿಯಾಗಿ ಕಿರಣ್...

ಎಸ್ ಎಸ್ ಎಫ್ ಸುನ್ನಿ ಸ್ಟೂಡೆಂಟ್ ಫೆಡರೇಶನ್ ಇದರ ವತಿಯಿಂದ ಎಸ್ಎಸ್ಎಫ್ ಧ್ವಜಾದಿನಾಚರಣೆ

ಎಸ್ ಎಸ್ ಎಫ್ ಸುನ್ನಿ ಸ್ಟೂಡೆಂಟ್ ಫೆಡರೇಶನ್ ಇದರ ವತಿಯಿಂದ ಎಸ್ಎಸ್ಎಫ್ ಧ್ವಜಾದಿನಾಚರಣೆ ಸುಳ್ಯ ತಾಲೂಕಿನ ಸಂಘಟನೆಯ ಶಾಖೆಗಳಲ್ಲಿ ಇಂದು ಆಚರಿಸಲಾಯಿತು.

ಸೆ. 20 ಅಗಲಿದ ಸಮಸ್ತ ನೇತಾರರ ಅನುಸ್ಮರಣ ಕಾರ್ಯಕ್ರಮ

SKSSF ತ್ವಲಬಾ ವಿಂಗ್ ಸುಳ್ಯ ವಲಯಇದರ ವತಿಯಿಂದ ಸಮಸ್ತ ನೇತಾರರ ಅನುಸ್ಮರಣೆ ಮತ್ತು ಬಹುಮಾನ ವಿತರಣೆ ಸೆ.20 ರಂದು ಸುದಳ್ಯ ಸುಪ್ರೀಂ ಹಾಲ್ ನಲ್ಲಿ ನಡೆಯಲಿದೆ. ಅಧ್ಯಕ್ಷತೆ ಜಮಾಲ್ ಕೆ ಎಸ್ ಅಧ್ಯಕ್ಷರು, SKSSF ಸುಳ್ಯ ವಲಯ ವಹಿಸಲಿದ್ದು ಸಮಸ್ತ ಮುಶಾವರ ಸದಸ್ಯರಾದ ಅಬ್ದುಲ್ ಖಾದರ್ ಅಲ್ ಖಾಸಿಮಿ ಬಂಬ್ರಾಣ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಪ್ರಾಸ್ತಾವಿಕ ಭಾಷಣ...

ನೆಟ್ಟಾರು : ಯುವಕ ಆತ್ಮಹತ್ಯೆ

ನೆಟ್ಟಾರು ಗ್ರಾಮದ ಲಕ್ಷ್ಮೀಶ ಕಿನ್ನಿಮಜಲು (34 ವರ್ಷ) ಎಂಬವರು ಆತ್ಮಹತ್ಯೆ ಮಾಡಿಕೊಂಡ ಘಟನೆ ನೆಟ್ಟಾರಿನಿಂದ ವರದಿಯಾಗಿದೆ. ವೃತ್ತಿಯಲ್ಲಿ ಆಟೋ ಚಾಲಕರಾಗಿದ್ದ (ನಾಗಶ್ರೀ ಆಟೋ) ಇವರು ಬೆಳ್ಳಾರೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದರು. ಸೆ.18 ರಂದು ಎಂದಿನಂತೆ ತನ್ನ ಕೆಲಸ ಮುಗಿಸಿ ಮನೆಗೆ ಹಿಂದಿರುಗಿದ್ದು, ಮನೆಯ ಹಿಂಬದಿಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ತಿಳಿದುಬಂದಿದೆ. ಘಟನೆ ನಿನ್ನೆ ಸಂಜೆ ವರದಿಯಾಗಿದ್ದು...

ತಾಲೂಕಿನ 14 ರಸ್ತೆಗಳನ್ನು ಮೇಲ್ದರ್ಜೆಗೇರಿಸಿ ಸರಕಾರದಿಂದ ಆದೇಶ

ತಾಲೂಕಿನ 12 ತಾಲೂಕು ರಸ್ತೆಗಳನ್ನು ಜಿಲ್ಲಾ ರಸ್ತೆಗಳನ್ನಾಗಿ, 2 ಜಿಲ್ಲಾ ರಸ್ತೆಗಳನ್ನು ರಾಜ್ಯ ರಸ್ತೆಯಾಗಿ ಮೇಲ್ದರ್ಜೆಗೇರಿಸುವಂತೆ ಶಾಸಕರು ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದು ಇದೀಗ ಆ ರಸ್ತೆಗಳನ್ನು ಮೇಲ್ದರ್ಜೆಗೇರಿಸಿ ಸರಕಾರ ಆದೇಶ ಮಾಡಿದೆ. ದೊಡ್ಡತೋಟ – ಕುಕ್ಕುಜಡ್ಕ-ಪಾಜಪಳ್ಳ ರಸ್ತೆ 15.05 ಕಿ.ಮೀ, ಗುತ್ತಿಗಾರು-ಬಳ್ಳಕ-ಪಂಜ ರಸ್ತೆ 10.20ಕಿ.ಮೀ, ಗುತ್ತಿಗಾರು-ಕಮಿಲ- ಬಳ್ಪ ರಸ್ತೆ 5.40ಕಿ.ಮೀ, ಆಲೆಟ್ಟಿ-ಬಡ್ಡಡ್ಕ-ಕೂರ್ನಡ್ಕ ರಸ್ತೆ 11.90 ಕಿ.ಮೀ,...
Loading posts...

All posts loaded

No more posts

error: Content is protected !!