ಮಾಣಿ-ಮೈಸೂರು ಹೆದ್ದಾರಿ ಸುಳ್ಯ ಅಡ್ಕಾರು ಪರಿಸರದ ತಿರುವಿನಲ್ಲಿ ಕಳೆದ ಕೆಲವು ತಿಂಗಳ ಹಿಂದೆ ನಿರಂತರವಾಗಿ ಅಪಘಾತಗಳು ಸಂಭವಿಸಿ ಹಲವು ಜೀವಹಾನಿ ಉಂಟಾಗಿದ್ದವು. ಆ ಸಂದರ್ಭದಲ್ಲಿ ಸುಳ್ಯ ಪೊಲೀಸ್ ಅಧಿಕಾರಿಗಳು ಮುನ್ನೆಚ್ಚರಿಕಾ ಕ್ರಮವಾಗಿ ಅಪಘಾತಗಳನ್ನು ತಡೆಯುವ ನಿಟ್ಟಿನಲ್ಲಿ ಎರಡು ಕಡೆಗಳಲ್ಲಿ ಬ್ಯಾರಿಕೇಡ್ ಗಳನ್ನು ಅಳವಡಿಸಿ ವಾಹನಗಳು ನಿಧಾನವಾಗಿ ಚಲಾಯಿಸಲು ಕ್ರಮವನ್ನು ವಹಿಸಲಾಗಿತ್ತು. ಆದರೆ ಕಳೆದ ಕೆಲವು ತಿಂಗಳುಗಳಿಂದ ಕೊರೋನವೈರಸ್ ಹಿನ್ನೆಲೆಯಲ್ಲಿ ವಾಹನಗಳ ಸಂಚಾರ ದಟ್ಟಣೆ ಕಡಿಮೆ ಇದ್ದ ಕಾರಣ ಆ ಸ್ಥಳದಿಂದ ಬ್ಯಾರಿಕಾರ್ಡ್ಗಳನ್ನು ತೆರವುಗೊಳಿಸಲಾಗಿತ್ತು. ಇದೀಗ ಕಳೆದ ವಾರದಲ್ಲಿ ಮತ್ತೊಮ್ಮೆ ಸಣ್ಣಪುಟ್ಟ ವಾಹನ ಅಪಘಾತ ಘಟನೆಗಳು ನಡೆದಿದೆ. ಇದರಿಂದ ಎಚ್ಚೆತ್ತುಕೊಂಡಿರುವ ಸುಳ್ಯ ಪೊಲೀಸರು ಸುಳ್ಯ ಠಾಣ ಉಪನಿರೀಕ್ಷಕ ಹರೀಶ್ ಎಂ ಆರ್ ರವರ ನೇತೃತ್ವದಲ್ಲಿ ಸೆಪ್ಟೆಂಬರ್ 18ರಂದು ಮತ್ತೊಮ್ಮೆ ಬ್ಯಾರಿ ಕೇಡುಗಳನ್ನು ಅಳವಡಿಸುವ ಕಾರ್ಯ ನಡೆಯಿತು. ಈ ಸಂದರ್ಭದಲ್ಲಿ ಸ್ಥಳದಲ್ಲಿದ್ದ ಅಬಿದ್ ಪೈಚಾರ್ ಎಂಬವರು ಸಹಕರಿಸಿದರು ಎಂದು ತಿಳಿದುಬಂದಿದೆ.
- Thursday
- November 21st, 2024