- Thursday
- November 21st, 2024
ಪುತ್ತೂರಿನ ಕುಟ್ಟಿನೋಪಿನಡ್ಕ ಪ್ರಾಥಮಿಕ ಶಾಲೆಯಿಂದ ಮಲ್ಲಿಕಾ ಗೋಪಾಲ್ ಗುಂಡ್ಯ ಪದೋನ್ನತಿ ಹೊಂದಿ ಮರ್ಕಂಜ ಪ್ರೌಢ ಶಾಲಾ ಶಿಕ್ಷಕಿಯಾಗಿ ಕರ್ತವ್ಯಕ್ಕೆ ಹಾಜರಾಗಿದ್ದಾರೆ. ಮಲ್ಲಿಕಾರವರು 16 ವರ್ಷಗಳಿಂದ ಪ್ರಾಥಮಿಕ ಶಾಲಾ ಶಿಕ್ಷಕಿಯಾಗಿದ್ದು , ಬೆಳ್ತಂಗಡಿ , ಬಂಟ್ವಾಳ ಪುತ್ತೂರುಗಳಲ್ಲಿ ಸೇವೆ ಸಲ್ಲಿಸಿ ಪುತ್ತೂರಿನ ಕುಟ್ಟಿನೋಪಿನಡ್ಕ ಶಾಲೆಯಿಂದ ಪ್ರೌಢಶಾಲಾ ಶಿಕ್ಷಕಿಯಾಗಿ ಭಡ್ತಿ ಪಡೆದು ಮರ್ಕಂಜ ಸರಕಾರಿ ಪ್ರೌಢಶಾಲೆಗೆ ಇಂಗ್ಲೀಷ್ ಶಿಕ್ಷಕಿಯಾಗಿ...
ಜೇಸಿಐ ಸುಳ್ಯ ಸಿಟಿ ವತಿಯಿಂದ ಜೇಸಿ ಸಪ್ತಾಹದ ಅಂಗವಾಗಿ ಕೊಡಮಾಡುವ ಜೇಸಿಐ ಯೂತ್ ಇನ್ ಸ್ಪೈಯರ್ ಅವಾರ್ಡ್ ಗೆ ಸುಳ್ಯ ಕೆ.ವಿ.ಜಿ. ಆಯುರ್ವೇದ ಮೆಡಿಕಲ್ ಕಾಲೇಜು ಪ್ರಾಂಶುಪಾಲ ಡಾ.ಲೀಲಾಧರ್ ಡಿ.ವಿ.ಯವರನ್ನು ಆಯ್ಕೆ ಮಾಡಲಾಗಿದೆ ಎಂದು ಜೇಸಿಐ ಸುಳ್ಯ ಸಿಟಿ ಕ್ಲಬ್ ಅಧ್ಯಕ್ಷ ವಿನಯ್ ರಾಜ್ ಮಡ್ತಿಲಸೆ.11 ರಂದು ಸುಳ್ಯ ಪ್ರೆಸ್ ಕ್ಲಬ್ ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ...
ಜೇಸಿಐ ಸುಳ್ಯ ಪಯಸ್ವಿನಿ ಘಟಕದ ವತಿಯಿಂದ "ಜೇಸಿಐ ಸಪ್ತಾಹದ 2 ನೇ ದಿನದ ಅಂಗವಾಗಿ ಇಂದು ಗ್ರಾಮೀಣ ಪ್ರದೇಶವಾದ ಅಮರಪಡ್ನೂರು ಗ್ರಾಮದ ಅಕ್ಕೋಜಿಪಾಲ್ ಅಂಗನವಾಡಿ ಕೇಂದ್ರ ಇಲ್ಲಿ ಕೊರೊನ ವಾರಿಯರ್ ಗಳಿಗೆ ಸನ್ಮಾನ ಮತ್ತು ಸ್ವಚ್ಛತೆಯ ಬಗ್ಗೆ ಕಾರ್ಯಕ್ರಮ ನಡೆಯಿತು. ಉದ್ಘಾಟನೆಯನ್ನು ಜೇಸಿಐ ವಲಯ 15 ರ ಯುವ ಜೇಸಿ ನಿರ್ದೇಶಕರಾದ ಜೇಸಿ ಮರಿಯಪ್ಪ ರವರು...
ಹರಿಹರ,ಕಲ್ಮಕಾರು,ಮಡಪ್ಪಾಡಿ ಗ್ರಾಮದ ಜನರಿಗೆ ಏರಡು ದಿನಗಳ ಹಿಂದೆ ಜೀಯೋ ನೆಟ್ವರ್ಕ್ ನೀಡಿದ್ದು 500 ಮೀಟರ್ ವ್ಯಾಪ್ತಿಯಲ್ಲಿ ಮಾತ್ರ ಸಿಗುತ್ತಿದ್ದು ಬೇರೆ ಯಾವ ಪ್ರದೇಶಕ್ಕೆ ಸಿಗದಿರುವುದು ಜನರಿಗೆ ಜಿಯೋ ಅಧಿಕಾರಿಗಳು ನೀಡಿ ಭರವಸೆ ಸುಳ್ಳಾಗಿದೆ. ಈ ಬಗ್ಗೆ ಜನರು ಆಕ್ರೋಶಗೊಂಡಿದ್ದು ಇಂದು ನಡೆದ ಸಭೆಯಲ್ಲಿ ಸುಮಾರು ನೂರಕ್ಕೂ ಮಿಕ್ಕಿ ಜನ ಸೇರಿ ಹೋರಾಟ ಸಮಿತಿ ರಚಿಸಿದ್ದು ಕೂಡಲೇ...
ಬದ್ರಿಯಾ ಜುಮ್ಮಾ ಮಸೀದಿ ಗುತ್ತಿಗಾರು ಇದರ ಆಡಳಿತ ಮಂಡಳಿ ವತಿಯಿಂದ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ರಾಜ್ಯಮಟ್ಟದಲ್ಲಿ ಪ್ರಥಮ ಸ್ಥಾನ ಗಳಿಸಿದ ಅನುಷ್ ಎ.ಎಲ್ ಗೆ ಸನ್ಮಾನ ಕಾರ್ಯಕ್ರಮ ಇಂದು ನಡೆಯಿತು. ಧರ್ಮ ಗುರುಗಳಾದ ಬಹು| ಅಬ್ದುಲ್ ನಾಸಿರ್ ಜೌಹರಿ, ಬಹು|ಖಾಲಿದ್ ಮಿಸ್ಬಾಯಿ, ಮಸೀದಿ ಆಡಳಿತ ಮಂಡಳಿ ಅಧ್ಯಕ್ಷ ಅಬ್ಬಾಸ್ ವಳಲಂಬೆ, ಕಾರ್ಯದರ್ಶಿ ಹಸೈನಾರ್ ವಳಲಂಬೆ, ಪದಾಧಿಕಾರಿಗಳಾದ ಅಬ್ದುಲ್...
ಎಲಿಮಲೆ ಮಂಜುಶ್ರೀ ಭಜನಾ ಮಂಡಳಿ ಇದರ ವತಿಯಿಂದ ಶ್ರೀಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮದ ಅಂಗವಾಗಿ ಸೆ. 10ರಂದು ರಾತ್ರಿ ಶ್ರೀ ಧರ್ಮಪಾಲ ಸುಳ್ಳಿ ಇವರ ಮನೆಯಲ್ಲಿ ವಿಶೇಷ ಭಜನಾ ಸತ್ಸಂಗ ಕಾರ್ಯಕ್ರಮ ನೆರವೇರಿತು. ಈ ಭಜನಾ ಕಾರ್ಯಕ್ರಮದಲ್ಲಿ ಭಜನಾ ಮಂಡಳಿ ಸದಸ್ಯರು ಹಾಗೂ ಸ್ಥಳೀಯ ಭಕ್ತರು ಪಾಲ್ಗೊಂಡಿದ್ದರು. ಭಜನಾ ಕಾರ್ಯಕ್ರಮದ ನಂತರ ಅನ್ನಸಂತರ್ಪಣೆ ನೆರವೇರಿತು
ಮುಸಲ್ಮಾನ ಬಾಂಧವರ ಪವಿತ್ರ ಶುಕ್ರವಾರದ ಪ್ರಾರ್ಥನೆಯ ದಿನದಂದು ಮಹಾಮಾರಿ ಕೊರೋನ ವೈರಸ್ ಹಿನ್ನೆಲೆಯಲ್ಲಿ ಇಡೀ ಮಾನವಕುಲಕ್ಕೆ ಶಾಂತಿಗಾಗಿ, ಆರೋಗ್ಯಭರಿತ ಜೀವನಕ್ಕಾಗಿ ಮೊಗರ್ಪಣೆ ದರ್ಗಾ ಶರೀಫ್ ನಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಪ್ರಾರ್ಥನೆಯ ನೇತೃತ್ವವನ್ನು ಸೈಯದ್ ಜೈನುಲ್ ಅಬಿದಿನ್ ತಂಙಳ್ ಜಯನಗರ ವಹಿಸಿದ್ದರು. ಕೊರೋನ ವೈರಸ್ ಹಿನ್ನೆಲೆಯಲ್ಲಿ ಎಲ್ಲಾ ಪ್ರಾರ್ಥನಾ ಮಂದಿರಗಳು ಸ್ತಬ್ಧವಾಗಿದ್ದು ಅತೀ ಶೀಘ್ರದಲ್ಲಿ ಈ...