
ಮಂಡೆಕೋಲು ಗ್ರಾಮ ಪಂಚಾಯತ್ ಸಾಮಾನ್ಯ ಸಭೆಯು ಜೂನ್ 25ರಂದು ಗ್ರಾಮ ಪಂಚಾಯತ್ ವಠಾರದಲ್ಲಿ ನಡೆಯಿತು ಕಾರ್ಯಕ್ರಮದ ಅಧ್ಯಕ್ಷೆಯನ್ನು ಗ್ರಾಮ ಪಂಚಾಯತ್ ಅಧ್ಯಕ್ಷೆ ಮೋಹಿನಿ ವಹಿಸಿದ್ದರು . ಮೊದಲಿಗೆ ಇತ್ತೀಚೆಗೆ ನಿಧನರಾದ ಗ್ರಾಮ ಪಂಚಾಯತ್ ಸಿಬ್ಬಂದಿ ವಾಣಿಶ್ರೀ ಅವರಿಗೆ ಮೌನ ಪ್ರಾರ್ಥನೆಯ ಮೂಲಕ ಸಂತಾಪ ಸೂಚಿಸಲಾಯಿತು. ನಂತರ ಸರಕಾರದಿಂದ ಬಂದ ಸುತ್ತೋಲೆ ಮತ್ತು ಗ್ರಾಮಸ್ಥರಿಂದ ಬಂದ ಅರ್ಜಿಯನ್ನು ಪಿಡಿಓ ಜಯ ಕುಮಾರ್ ಸಭೆಗೆ ಓದಿ ಹೇಳಿದರು. ಪಂಚಾಯತ್ 5 ವರ್ಷದ ಅವಧಿ ಪೂರ್ಣಗೊಂಡ ಕಾರಣ ಎಲ್ಲಾ ಸದಸ್ಯರಿಗೆ ತಮ್ಮ ತಮ್ಮ ಅಭಿಪ್ರಾಯ ಅನಿಸಿಕೆ ವ್ಯಕ್ತಪಡಿಸಲು ಅಧ್ಯಕ್ಷರು ಅವಕಾಶ ಮಾಡಿಕೊಟ್ಟರು. ಸದಸ್ಯರುಗಳಾದ ಬಾಲಚಂದ್ರ ದೇವರಗುಂಡ, ಯಶೋದ, ಅಧ್ಯಕ್ಷೆ ಮೋಹಿನಿ, ಪಿಡಿಒ ಜಯಕುಮಾರ್ ಅನಿಸಿಕೆ ವ್ಯಕ್ತಪಡಿಸಿದರು. ಆರೋಗ್ಯ ಇಲಾಖೆಯವರು ಡೆಂಗ್ಯೂ ಬಗ್ಗೆ ಮಾಹಿತಿ ನೀಡಿದರು. ಆಶಾ ಕಾರ್ಯಕರ್ತರಿಗೆ ಪಂಚಾಯತ್ ವತಿಯಿಂದ ಕಿರು ಕಾಣಿಕೆ ನೀಡಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಪಂಚಾಯತ್ ಸದಸ್ಯರು ಮತ್ತು ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.