Ad Widget

ಹದಗೆಟ್ಟ ತಂಟೆಪ್ಪಾಡಿ ರಸ್ತೆ – ಸಂಚಾರ ದುಸ್ತರ

ಕಳಂಜ ಗ್ರಾಮದ ಪಾಂಡಿಪಾಲು ತಂಟೆಪ್ಪಾಡಿ ರಸ್ತೆಯು ತೀರಾ ಹದಗೆಟ್ಟು ಸಂಚಾರಕ್ಕೆ ಮತ್ತು ನಡೆದು ಹೋಗುವ ಸಾರ್ವಜನಿಕರಿಗೂ ತೊಂದರೆ ಉಂಟಾಗುತ್ತಿದೆ. ಈ ಈ ಬಗ್ಗೆ ಜನಪ್ರತಿನಿಧಿಗಳು ಗಮನಹರಿಸಿ ಶೀಘ್ರವಾಗಿ ಸಂಚಾರಯೋಗ್ಯ ರಸ್ತೆಯನ್ನಾಗಿ ಮಾಡಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ಕ್ಯಾಂಪ್ಕೋ ಇಂದಿನ ಪೇಟೆಧಾರಣೆ

ಕ್ಯಾಂಪ್ಕೋ ನಿಯಮಿತ ಮಂಗಳೂರು.ಶಾಖೆ : ಸುಳ್ಯ.(25.06.2020 ಗುರುವಾರ) ಅಡಿಕೆ ಧಾರಣೆಹೊಸ ಅಡಿಕೆ 275 - 325ಹಳೆ ಅಡಿಕೆ 275 - 340ಡಬಲ್ ಚೋಲ್ 275 - 340 ಫಠೋರ 220 - 270ಉಳ್ಳಿಗಡ್ಡೆ 110 - 170ಕರಿಗೋಟು 110 - 160 ಕಾಳುಮೆಣಸು ಧಾರಣೆಕಾಳುಮೆಣಸು 250 - 300 ಕೊಕ್ಕೋ ಧಾರಣೆಒಣ ಕೊಕ್ಕೋ :- 150...
Ad Widget

ಪೈಂಬೆಚ್ಚಾಲು ಶಾಲೆಗೆ ನೂತನ ಶೌಚಾಲಯ ನಿರ್ಮಾಣಕ್ಕೆ ವಿಧಾನ ಪರಿಷತ್ ಸದಸ್ಯರಿಂದ ರೂ 3 ಲಕ್ಷ ಅನುದಾನ ಬಿಡುಗಡೆ

ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹಾಗು ಕರ್ನಾಟಕ ರಾಜ್ಯ ಸರಕಾರ ವಿಧಾನ ಪರಿಷತ್ ಸದಸ್ಯ ಹರೀಶ್ ಕುಮಾರ್ ರವರು ತನ್ನ 2019 -20 ನೇ ಸಾಲಿನ ಶಾಸಕರ ಸ್ಥಳಿಯ ಪ್ರದೇಶಾಭಿವೃದ್ದಿ ಯೋಜನೆ ಅಡಿಯಲ್ಲಿ ದ ಕ ಜಿಲ್ಲೆಯ ಸುಳ್ಯ ತಾಲೂಕಿನ ಅಲೆಟ್ಟಿ ಗ್ರಾಮದ ಕೋಲ್ಚಾರು ಅಂಚೆಯ ಪೈಂಬೆಚ್ಚಾಲು ಸ ಕಿ ಪ್ರಾ ಶಾಲೆಗೆ ನೂತನ...

ಜೂ.26 : ಐವರ್ನಾಡು ಗ್ರಾ. ಪಂ. ವಿವಿಧ ಕಾಮಗಾರಿಗಳ ಉದ್ಘಾಟನಾ ಕಾರ್ಯಕ್ರಮ

ದ.ಕ.ಜಿಲ್ಲಾ ಪಂಚಾಯತ್ ಮಂಗಳೂರು,ತಾಲೂಕು ಪಂಚಾಯತ್ ಸುಳ್ಯ,ಐವರ್ನಾಡು ಗ್ರಾಮ ಪಂಚಾಯತ್ ನ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನಾ ಕಾರ್ಯ ಕ್ರಮವು ಜೂ.26 ರಂದು ನಡೆಯಲಿದೆ.ಗ್ರಾಮ ವಿಕಾಸ ಮಿನಿಸಭಾಭವನ ವಿಕಾಸ ಭವನವನ್ನು ಶಾಸಕ ಎಸ್.ಅಂಗಾರ,ಘನತ್ಯಾಜ್ಯ ಘಟಕ ಹಾಗೂ ಸ್ಮಶಾನ ಘಟಕಕ್ಕೆ ನೀರು ಸರಬರಾಜು ಯೋಜನೆಯನ್ನು ತಾಲೂಕು ಪಂಚಾಯತ್ ಅಧ್ಯಕ್ಷ ಚನಿಯ ಕಲ್ತಡ್ಕ,ಸ್ವಚ್ಛಭಾರತ್ ಮಿಷನ್ ಸಾರ್ವಜನಿಕ ಶೌಚಾಲಯ ಕಟ್ಟಡವನ್ನು ಜಿಲ್ಲಾ...

ಮೈಕ್ರೋ ಫೈನಾನ್ಸ್ ಗಳ ಸಾಲ ಮನ್ನಾಕ್ಕಾಗಿ ಆಗ್ರಹಿಸಿ ಋಣಮುಕ್ತ ಹೋರಾಟ ಸಮಿತಿ ವತಿಯಿಂದ ಪ್ರತಿಭಟನೆ

ಸಾಲ‌ಮನ್ನಾಕ್ಕಾಗಿ ಹಾಗೂ‌ ಲಾಕ್ ಡೌನ್ ಸಂತ್ರಸ್ಥ ಬಡವರಿಗೆ ಪರಿಹಾರ ನೀಡಲು ಆಗ್ರಹಿಸಿ ಮತ್ತು ಸಾಲ ವಸೂಲಿಗಾರರ ದಬ್ಬಾಳಿಕೆ ವಿರುದ್ದ ಋಣಮುಕ್ತ ಹೋರಾಟ ಸಮಿತಿ ವತಿಯಿಂದ ಸಾಂಕೇತಿಕ ಪ್ರತಿಭಟನೆ‌ ಜೂ 25ರಂದು ಪುತ್ತೂರು ಮಿನಿ ವಿಧಾನಸೌಧ ಆವರಣದಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಮಾತನಾಡಿದ ಕರ್ನಾಟಕ ಋಣಮುಕ್ತ ಅನುಷ್ಠಾನ ಹೋರಾಟ ಸಮಿತಿಯ ಅಧ್ಯಕ್ಷ ಬಿ ಎಂ ಭಟ್ ಕರೋನವೈರಸ್...

ಕೊಡಗಿನ ಪಾಲಿಗೆ ಕರಾಳ ದಿನವಾದ ಬುಧವಾರ

ಕೊರೋನ ವೈರಸ್ ವಿಷಯದಲ್ಲಿ ನಿಶ್ಚಿಂತೆಯಿಂದ ಇದ್ದ ಕೊಡಗಿನ ಜನತೆ ಇದೀಗ ಬೆಚ್ಚಿ ಬೀಳುವ ಪರಿಸ್ಥಿತಿ ನಿರ್ಮಾಣವಾಗಿದೆ.ಜೂನ್ 24 ಬುಧವಾರದಂದು ಒಂದೇ ದಿನ 14 ಕೊರೋನಾ ಪಾಸಿಟಿವ್ ಪತ್ತೆಯಾಗಿದ್ದು ಕೊರೋನ ಅಟ್ಟಹಾಸಕ್ಕೆ ಮಂಜಿನನಗರಿ ಕೊಡಗು ತತ್ತರಿಸಿಹೋಗಿದೆ.ಇದರಿಂದಾಗಿ ಮಡಿಕೇರಿಯ ಎರಡು ಪ್ರಮುಖ ಬಡಾವಣೆ ಸೀಲ್ ಡೌನ್ ಗೊಳ್ಳುವ ಸಾಧ್ಯತೆ ಕಂಡು ಬರುತ್ತಿದೆ.

ಕೊನೆಗೂ ಬೇಕು-ಬೇಡ ಸಂದಿಗ್ಧ ಪರಿಸ್ಥಿತಿಯ ನಡುವೆ ಎಸ್ಎಸ್ಎಲ್ಸಿ ಪರೀಕ್ಷೆ ಆರಂಭ – ತಾಲೂಕಿನ 6 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆಗೆ ಚಾಲನೆ

ಕೊರೋನಾ ಮಹಾಮಾರಿ ವೈರಸ್ಸಿನ ಹಿನ್ನೆಲೆಯಲ್ಲಿ ಕಳೆದ ಶೈಕ್ಷಣಿಕ ವರ್ಷದ ಎಸ್ಸೆಸ್ಸೆಲ್ಸಿ ಪರೀಕ್ಷೆ ಹಲವಾರು ರೀತಿಯ ಗೊಂದಲಗಳ ಪರಿಸ್ಥಿತಿಯಲ್ಲಿ ಪರೀಕ್ಷೆ ನಡೆಸುವುದು ಬೇಕು ಬೇಡ ಎಂಬ ಸಂದಿಗ್ಧ ಪರಿಸ್ಥಿತಿಯಲ್ಲಿತ್ತು. ಕರ್ನಾಟಕ ರಾಜ್ಯ ಶಿಕ್ಷಣ ಇಲಾಖೆ ಹಲವಾರು ಸವಾಲುಗಳನ್ನು ಎದುರಿಸಿ ಕೊನೆಗೂ ವಿದ್ಯಾರ್ಥಿಗಳ ಭವಿಷ್ಯವನ್ನು ರೂಪಿಸುವಲ್ಲಿ ಹೆಜ್ಜೆಯನ್ನು ಇಟ್ಟಿದೆ. ಶಿಕ್ಷಣ ಸಚಿವ ಸುರೇಶ್ ಕುಮಾರ್ ಕರ್ನಾಟಕ ರಾಜ್ಯದಾದ್ಯಂತ ಸುತ್ತಿ...

ಇಂದು ಎಸ್ ಎಸ್ ಎಲ್ ಸಿ ಪರೀಕ್ಷೆ – 8.48 ಲಕ್ಷ ವಿಧ್ಯಾರ್ಥಿಗಳಿಗೆ,ಪೋಷಕರಿಗೆ ಅಗ್ನಿಪರೀಕ್ಷೆ

ಕೊರೊನದಿಂದಾಗಿ ತೂಗುಯ್ಯಲೆಯಲ್ಲಿದ್ದ ಪರೀಕ್ಷೆಗೆ ಇಂದು ಮುಹೂರ್ತ ಕೂಡಿಬಂದಿದೆ. ಜೂ. 25 ರಿಂದ ನಡೆಯಲಿರುವ ಎಸ್ ಎಸ್ ಎಲ್ ಸಿ ಪರೀಕ್ಷೆ ಮಕ್ಕಳಿಗೆ ಪೋಷಕರಿಗೆ ಅಗ್ನಿ ಪರೀಕ್ಷೆಯೇ ಆಗಿದೆ. ಸರಕಾರ ಎಲ್ಲಾ ವ್ಯವಸ್ಥೆಗಳನ್ನು ಸಮರ್ಪಕವಾಗಿ ಮಾಡಿದ್ದರೂ ಪೋಷಕರ ಭಯ ಕಡಿಮೆಯಾಗಬೇಕಾದರೇ ಯಶಸ್ವಿಯಾಗಿ ಪರೀಕ್ಷೆ ಮುಗಿಯಬೇಕಷ್ಟೆ. ಸರಕಾರ ಬಸ್ ಗಳ ವ್ಯವಸ್ಥೆ ಮಾಡಿದೆಯಾದರೂ ಮಕ್ಕಳು ಅಂತರ ಕಾಪಾಡುವಿಕೆ ಬಗ್ಗೆ...

ಅಗಲಿದ ಮೊರಂಗಲ್ಲು ಪದ್ಮನಾಭ ರೈಯವರಿಗೆ ಪುಷ್ಪನಮನ

ಜೂ.14 ರಂದು ನಿಧನರಾದ ಸುಳ್ಯ ಪರಿವಾರ ನಿವಾಸಿ ಜನಮೆಚ್ಚಿದ ಶಿಕ್ಷಕ ದಿ.ಮೊರಂಗಲ್ಲು ಪಿ.ಪದ್ಮನಾಭ ರೈಯವರ ಉತ್ತರ ಕ್ರಿಯಾದಿ ಸದ್ಗತಿ ಕಾರ್ಯಕ್ರಮವು ಜೂ.24 ಪರಿವಾರಕಾನ ಉಡುಪಿ ಗಾರ್ಡನ್ ಹೋಟೆಲ್ ನ ಗ್ರಾಂಡ್ ಪರಿವಾರ್ ಸಭಾಂಗಣದಲ್ಲಿ ಜರುಗಿತು . ಮೃತರಿಗೆ ಎಣ್ಣೂರುಗುತ್ತು ಪಟ್ಟೆ ಪ್ರಭಾಕರ ರೈ ಯವರು ನುಡಿ ನಮನ ಸಲ್ಲಿಸಿದರು . ಈ ಸಂದರ್ಭದಲ್ಲಿ ಮೃತರ ಪತ್ನಿ...

ನವೋದಯ ಶಾಲೆಗೆ ಆಯ್ಕೆ- ವಿದ್ಯಾರ್ಥಿಗಳಿಗೆ ಪ್ರೋತ್ಸಾಹಕ ಬಹುಮಾನ

ಗುತ್ತಿಗಾರು ಶ್ರೀ ದುರ್ಗಾ ತರಭೇತಿ ಕೇಂದ್ರದಲ್ಲಿ ನವೋದಯ ಮತ್ತು ಮೊರಾರ್ಜಿ ಶಾಲೆಗೆ ಆಯ್ಕೆಗೊಂಡ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಕ ಬಹುಮಾನ ವಿತರಿಸಲಾಯಿತು. ಸಂಪಾಜೆ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ವೈ ಕೆ ಮಾಲತಿ ಹಾಗೂ ಕೆನರಾ ಬ್ಯಾಂಕ್ ನಿವೃತ್ತ ಉದ್ಯೋಗಿ ಮೋಹನ್ ದಾಸ್ ದಂಪತಿಗಳು,  ಶ್ರೀ ದುರ್ಗಾ ತರಭೇತಿ ಕೇಂದ್ರದಲ್ಲಿ ತರಭೇತಿ ಪಡೆದು ನವೋದಯ ಹಾಗೂ ಮೊರಾರ್ಜಿ ಶಾಲೆಗೆ...
Loading posts...

All posts loaded

No more posts

error: Content is protected !!