- Sunday
- November 24th, 2024
ಸುಳ್ಯ: ಕರ್ನಾಟಕದಲ್ಲಿ ಕೋವಿಡ್-19 ದಿನದಿಂದ ದಿನಕ್ಕೆ ವ್ಯಾಪಕವಾಗಿ ಹರಡುತ್ತಿದ್ದು, ಇಂತಹಾ ಸಂದರ್ಭದಲ್ಲಿ SSLC ಪರೀಕ್ಷೆ ಜೂನ್ 25 ರಿಂದ ಜುಲೈ 4 ರವರೆಗೆ ನಡೆಸಲು ರಾಜ್ಯ ಸರ್ಕಾರ ನಿರ್ಧರಿಸಿರುವುದನ್ನು ಸರಕಾರ ಮರು ಪರಿಶೀಲಿಸಿ ವಿದ್ಯಾರ್ಥಿಗಳ ಹಿತ ದೃಷ್ಟಿಯನ್ನು ಕಾಪಾಡುವ ನಿಟ್ಟಿನಲ್ಲಿ ನಿಗದಿಯಾಗಿರುವ ಪರೀಕ್ಷೆಯನ್ನು ಶೀಘ್ರ ಮುಂದೂಡಿಸಿ ಆದೇಶ ಹೊರಡಿಸಬೇಕೆಂದು ಆಗ್ರಹಿಸಿ ಕ್ಯಾಂಪಸ್ ಫ್ರಂಟ್ ಸುಳ್ಯ ಏರಿಯಾ...
ಜನವರಿ ತಿಂಗಳಲ್ಲಿ ನಡೆದ ನವೋದಯ 6 ನೇ ತರಗತಿ ಪ್ರವೇಶ ಪರೀಕ್ಷೆಯ ಫಲಿತಾಂಶ ಪ್ರಕಟಗೊಂಡಿದ್ದು , ತಾಲೂಕಿನ ಬೆಳ್ಳಾರೆ , ಸುಳ್ಯ ಮತ್ತು ಕಡಬ ತಾಲೂಕಿನ ಸುಬ್ರಹ್ಮಣ್ಯದ ಜ್ಞಾನದೀಪ ನಮೋದಯ ತರಬೇತಿ ಸಂಸ್ಥೆಯಿಂದ ತರಗತಿಗಳನ್ನು ಪಡೆದ 18 ವಿದ್ಯಾರ್ಥಿಗಳು ಜವಾಹರ್ ನವೋದಯ ವಿದ್ಯಾಲಯಕ್ಕೆ ಆಯ್ಕೆಯಾಗಿದ್ದಾರೆ . ಗೂನಡ್ಕ ಮಾರುತಿ ಇಂಟರ್ ನ್ಯಾಷನಲ್ ಪಬ್ಲಿಕ್ ಸ್ಕೂಲ್‌ನ ವಿದ್ಯಾರ್ಥಿನಿ...
ಕೊಡಿಯಾಲ ಗ್ರಾಮದ ಕಲ್ಪತ್ತಬೈಲು ಶಾಲಾ ರಸ್ತೆ ತೀರ ಹದಗೆಟ್ಟಿದ್ದು ಸಂಚಾರಕ್ಕೆ ಅಸಾಧ್ಯವಾಗಿದೆ. ರಸ್ತೆಗೆ ಗುತ್ತಿಗೆದಾರರು ಮಣ್ಣು ಹಾಕಿ ಹೋಗಿದ್ದಾರೆ. ಈಗ ಕೆಸರಿನಿಂದಾಗಿ ನಡೆದಾಡಲೂ ಹರಸಾಹಸ ಪಡುವಂತಾಗಿದೆ. ಈ ರಸ್ತೆಯಿಂದ ಸುಮಾರು 500 ಮನೆಗಳಿಗೆ ಸಂಪರ್ಕವಿದ್ದು ಅವರೆಲ್ಲಾ ಇದೇ ರಸ್ತೆಯಲ್ಲಿ ಸಂಚರಿಸುವಂತಾಗಿದೆ. ಬೆಳ್ಳಾರೆಗೆ ಇಲ್ಲಿಂದ ಸುಮಾರು 6-7 ಕೀ.ಮೀ. ಇದೆ. ಶಾಸಕರಿಗೆ ಈ ರಸ್ತೆ ಬಗ್ಗೆ ತಿಳಿದಿದೆ....
ಸುಳ್ಯನಾಗಪಟ್ಟಣ ಆಲೆಟ್ಟಿ ಅಂತರರಾಜ್ಯ ಕರ್ನಾಟಕ ಕೇರಳ ಸಂಪರ್ಕ ರಸ್ತೆಯು ರೂ.30 ಲಕ್ಷ ವೆಚ್ಚದಲ್ಲಿ ಸುಳ್ಯ ನಗರ ವ್ಯಾಪ್ತಿ ಯಲ್ಲಿ ಇದೇ ಮೇ 29 ರಂದು ಸುಳ್ಯ ಶಾಸಕರ ನೇತೃತ್ವದಲ್ಲಿ ಕಾಮಾಗಾರಿ ಆರಂಭವಾಗಿ ಇದೀಗ 15 ದಿವಸ ಕಳೆದಾಗ ರಸ್ತೆ ಬಿರುಕು ಬಿಟ್ಟಿದ್ದು ಸಂಪೂರ್ಣ ಕಾಮಾಗಾರಿಯ ಬಗ್ಗೆ ಸಮಗ್ರ ತನಿಖೆಗೆ ಆಗ್ರಹಿಸಿ ಆಮ್ ಆದ್ಮಿ ಪಾರ್ಟಿ ಒತ್ತಾಯಿಸುತ್ತದೆ...
ಸುಳ್ಯ ವಿಖಾಯ ಸಮಿತಿಯ ವತಿಯಿಂದ ಮಡಿಕೇರಿ ತಾಲೂಕು ಸಂಪಾಜೆ ಪದವಿಪೂರ್ವ ಕಾಲೇಜು ಎಸ್ ಎಸ್ ಎಲ್ ಸಿ ಪರೀಕ್ಷಾ ಕೇಂದ್ರದ ಪರಿಸರದಲ್ಲಿ ಶುಚಿತ್ವ ಹಾಗೂ ಮುನ್ನೆಚ್ಚರಿಕೆ ಕ್ರಮವಾಗಿ ಸ್ಯಾನಿಟೈಸರ್ ಸಿಂಪಡಣೆ,ಔಷದೀಯ ಗಿಡ ನೆಡುವ ಕಾರ್ಯಕ್ರಮ ಇಂದು ನಡೆಯಿತು. ಪ್ರೌಢಶಾಲಾ ಮುಖ್ಯೋಪಾಧ್ಯಾಯ ಐತಪ್ಪ,ದೈಹಿಕ ಶಿಕ್ಷಕರಾದ ಕುಶಾಲಪ್ಪ,ರಮಾನಂದ , ಶಾಲಾ ಆಡಳಿತ ಮಂಡಳಿ ಸದಸ್ಯರಾದ ಸುಬ್ರಮಣ್ಯ ಉಪಾಧ್ಯಾಯ,ಎಸ್,ಕೆ,ಮಹಮ್ಮದ್ ಹನೀಫ್,ಸಿಬ್ಬಂದಿಗಳಾದ...
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೋವಿಡ್-19 ಕಾರಣದಿಂದ ಸಾವನ್ನಪ್ಪಿದವರ ಸಂಖ್ಯೆ ಏಳಕ್ಕೆ ಏರಿದೆ .ಜೂನ್ 7ರಂದು ಬೆಂಗಳೂರಿನಿಂದ ಆಗಮಿಸಿದ್ದ 70 ವರ್ಷದ ಪ್ರಾಯದ ವೃದ್ಧ ಮಧುಮೇಹ ಮತ್ತು ನಿಮೋನಿಯ ದಿಂದ ಬಳಲುತ್ತಿದ್ದರು. ಜೂನ್12ರಂದು ಮಂಗಳೂರಿನ ಆಸ್ಪತ್ರೆಗೆ ದಾಖಲಾಗಿದ್ದರು. ಸದ್ಯ ಚಿಕಿತ್ಸೆ ಫಲಕಾರಿಯಾಗದೆ ಇಂದು ಮೃತರಾಗಿದ್ದಾರೆ ಎಂದು ತಿಳಿದುಬಂದಿದೆ.
ಬೆಳ್ಳಾರೆ : ಮುಕ್ಕೂರು- ಕುಂಡಡ್ಕ ನೇಸರ ಯುವಕ ಮಂಡಲ ಇದರ ಆಶ್ರಯದಲ್ಲಿ ದಕ್ಷಿಣ ಕನ್ನಡ ಜಿಲ್ಲೆ ಮತ್ತು ಮಡಿಕೇರಿ ತಾಲೂಕಿನವರಿಗೆ ಏರ್ಪಡಿಸಿದ ಕಥಾ ಮತ್ತು ಕವನ ಸ್ಪರ್ದೆಯ ಫಲಿತಾಂಶ ಪ್ರಕಟಗೊಂಡಿದೆ. ಕವನ ಸ್ಪರ್ದೆಯಲ್ಲಿ ನಾರಾಯಣ ಕೇಳತ್ತಾಯ, ಸುಳ್ಯ (ಪ್ರ), ಆಶ್ಲೇಷ್ ಕುಮಾರ್ ಕಾಣಿಯೂರು (ದ್ವಿ), ಸುಜಯ ಶ್ರೀ ವಿಟ್ಲ (ತೃ) ಹಾಗೂ ಸತ್ಯವತಿ ಭಟ್ ಕೊಳಚಪ್ಪೆ,...
ಕಳೆದ ಬಾರಿ ನಡೆಸಲಾದ ನವೋದಯ ಪ್ರವೇಶ ಪರೀಕ್ಷೆಯಲ್ಲಿ ಕು. ರಚನಾ ಕೆ ಯವರು ಉತ್ತೀರ್ಣಗೊಂಡು ನವೋದಯ ಶಾಲೆಗೆ ಆಯ್ಕೆಯಾಗಿದ್ದಾರೆ. ಕಳೆದ ಜನವರಿ 06 ರಂದು ಈ ಪ್ರವೇಶ ಪರೀಕ್ಷೆ ನಡೆದಿತ್ತು. ಈಕೆ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ವಾಲ್ತಾಜೆಯ ವಿದ್ಯಾರ್ಥಿನಿ. ಇವಳು ಗುತ್ತಿಗಾರು ಶ್ರೀ ದುರ್ಗಾ ಕಂಪ್ಯೂಟರ್ ತರಬೇತಿ ಕೇಂದ್ರದಲ್ಲಿ ನವೋದಯ ಪರೀಕ್ಷೆಯ ಬಗ್ಗೆ ತರಬೇತಿ...
ಗದಗ: ಕೊಡಗು ಜಿಲ್ಲೆಯ ಕೊರೋನಾ ಸೋಂಕಿತ ವ್ಯಕ್ತಿಯೋರ್ವನಿಂದ ಪೊಲೀಸ್ ಠಾಣೆ ಸೀಲ್ ಆಗಿರುವ ಘಟನೆ ಜಿಲ್ಲೆ ಮುಂಡರಗಿನಲ್ಲಿ ನಡೆದಿದೆ. ಕೊಡಗು ಜಿಲ್ಲೆಯ ಪಿ-9215 ರ ವ್ಯಕ್ತಿ ದಿನಾಂಕ 18 ರಂದು ಖಾಸಗಿ ವಿಷಯಕ್ಕೆ ಸಂಬಂಧಿಸಿಯ ಕೊಡಗು ನಿಂದ ಮುಂಡರಗಿ ಠಾಣೆಗೆ ಬಂದಿದ್ದ. ಆದ್ರೆ ನಿನ್ನೆ ಹೆಲ್ತ್ ಬುಲೆಟಿನ್ ನಲ್ಲಿ ಆ ವ್ಯಕ್ತಿಗೆ ಪಾಸಿಟಿವ್ ದೃಢವಾಗಿದೆ. ಇದರಿಂದ...
ಸುಳ್ಯ ತಾಲೂಕಿನಲ್ಲಿ ಪ್ರಪ್ರಥಮ ಎಂಡೋ ಪಾಲನ ಕೇಂದ್ರ (ಎಂಡೋ ಡೇ ಕೇರ್ ಸೆಂಟರ್) ಆರಂಭಿಸಲು ಸರಕಾರ ಅನುದಾನ ಬಿಡುಗಡೆಗೊಳಿಸಿದೆ. ಬೆಳ್ಳಾರೆಯ ಹಳೆ ಆಸ್ಪತ್ರೆ ಕಟ್ಟಡವನ್ನು ದುರಸ್ತಿಗೊಳಿಸಿ ಕೇಂದ್ರ ತೆರೆಯಲು ಆರೋಗ್ಯ ಇಲಾಖೆ ಇಂಜಿನಿಯರ್ ವಿಭಾಗ ತೀರ್ಮಾನಿಸಿದ್ದು ಜೂನ್ 22ರಂದು ಬೆಳ್ಳಾರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸುಮಾರು 60 ಲಕ್ಷ ರೂ ವೆಚ್ಚದಲ್ಲಿ ದುರಸ್ತಿ ಕಾರ್ಯ...
Loading posts...
All posts loaded
No more posts