ಅರಂತೋಡಿನಲ್ಲಿ ಇವರು ಹೋಗಿದ್ದ ವಿವಾಹ ಸಮಾರಂಭಕ್ಕೆ ಕೊರೊನ ಪಾಸಿಟಿವ್ ಇದ್ದವರ ಭೇಟಿ ಮಾಡಿದ್ದ ವ್ಯಕ್ತಿಯೊಬ್ಬರು ಬಂದಿದ್ದಾರೆಂದು ಪ್ರಚಾರವಾಗಿತ್ತು. ಇದನ್ನು ಕೇಳಿ ಇವರಿಗೆ ಆಘಾತ ತಂದಿತ್ತು. ಮದುವೆಗೆ ಹೋದವರನ್ನೆಲ್ಲಾ ಕ್ವಾರಂಟೈನ್ ಮಾಡಬೇಕೆಂಬ ಆದೇಶ ಬಂದ ಹಿನ್ನೆಲೆಯಲ್ಲಿ ಸುಮಾರು 50 ಕ್ಕೂ ಮಿಕ್ಕಿ ಜನರನ್ನು ಕ್ವಾರಂಟೈನ್ ಗೆ ಒಳಪಡಿಸಲಾಗಿತ್ತು. ಆದರೇ ಯಾರದೋ ತಪ್ಪಿಗೆ,ಇಲಾಖೆಯ ತಪ್ಪಿಗೋ, ಲ್ಯಾಬ್ ನವರ ತಪ್ಪಿಗೋ ಇವರ ಮನೆಯವರೆಲ್ಲಾ ಶಿಕ್ಷೆ ಅನುಭವಿಸುಂತಾಯಿತು. ಆದರೂ ಇವರೆಲ್ಲಾ ಕ್ವಾರಂಟೈನ್ ಸಮರ್ಪಕವಾಗಿ ಪೂರ್ಣಗೊಳಿಸಿ ಇನ್ನೊಬ್ಬರಿಗೆ ತೊಂದರೆ ಆಗದಂತೆ ಸಾಮಾಜಿಕ ಕಳಕಳಿ ಮೆರೆದಿದ್ದಾರೆ.
ಅರಂತೋಡಿಗೆ ಮೇ 31 ರಂದು ಮಂಗಳೂರಿನಿಂದ ಕೊರೊನ ಸೋಂಕಿತ ವೈದ್ಯರು ಆಗಮಿಸಿದ ಹಿನ್ನೆಲೆಯಲ್ಲಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಒಂಬತ್ತು ಜನರನ್ನು ಪ್ರಾಥಮಿಕ ಸಂಪರ್ಕ ಎಂದು ಪರಿಗಣಿಸಿ ಕ್ವಾರಂಟೈನ್ ನಲ್ಲಿ ಇಡಲಾಗಿತ್ತು. ಮದುವೆ ಮನೆಯಲ್ಲಿ ಪ್ರಾಥಮಿಕ ಸಂಪರ್ಕಿತರೊಂದಿಗೆ ಭಾಗವಹಿಸಿದ ಅವಧಿಯಲ್ಲಿದ್ದ 47 ಮಂದಿಯನ್ನು ದ್ವಿತೀಯ ಸಂಪರ್ಕಿತರು ಎಂದು ಪರಿಗಣಿಸಿ ಕ್ವಾರಂಟೈನ್ ಲ್ಲಿರುವಂತೆ ಸೂಚಿಸಲಾಗಿತ್ತು. ಭೇಟಿ ಮಾಡಿದ ವೈಧ್ಯರ ಹಾಗೂ ಸದರಿ ಪ್ರಾಥಮಿಕ ಸಂಪರ್ಕಿತ ರಿಗೆ ಕೊರೊನ ಪರೀಕ್ಷೆಯಲ್ಲಿ ನೆಗೆಟಿವ್ ಎಂದು ಬಂದಿರುತ್ತದೆ . ಸದರಿ ಪ್ರಾಥಮಿಕ ಕ್ವಾರಂಟೈನ್ ಮತ್ತು ದ್ವಿತೀಯ ಕ್ವಾರಂಟೈನ್ ನಲ್ಲಿರುವವರ 14 ದಿನಗಳ ಅವಧಿಯು ಜೂ 14 ಕ್ಕೆ ಕೊನೆಗೊಂಡಿದೆ. ಜೂ 15 ರಿಂದ ಸಾಮಾನ್ಯರಂತೆ ಹೊರಗೆ ಬರಬಹುದಾಗಿದೆ. ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಾಗರಿಕರಿಗೆ ಕರೋನ ಬಗೆಗಿನ ಒಂದು ಅನುಭವವಾಗಿದ್ದು ಇಲ್ಲಿಂದ ಮುಂದೆ ಎಲ್ಲರೂ ಕೂಡ ತಮ್ಮ ತಮ್ಮ ಸುರಕ್ಷತೆಯ ದೃಷ್ಟಿಯಿಂದ ಎಚ್ಚರಿಕೆಯಿಂದ ಇದ್ದು ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು, ಮಾಸ್ಕ್ ಧರಿಸುವುದು, ಸ್ಯಾನಿಟೈಸರ್ ಮತ್ತು ಹ್ಯಾಂಡ್ ವಾಶ್ ಬಳಕೆ ಮಾಡುವುದನ್ನು ಜೀವನದ ಭಾಗವಾಗಿ ರೂಢಿ ಮಾಡಿಕೊಳ್ಳಬೇಕೆಂದು ಪಂಚಾಯತ್ ಮನವಿ ಮಾಡಿದೆ.
ಆದರೇ ಇನ್ನೂ ಮುಗಿಯದ ಅಳಲು ತಳೂರಿನವರದು. ಪತ್ರಿಕೆಗೆ ಫೋನ್ ತಮ್ಮ ನೋವು ತೋಡಿಕೊಂಡಿದ್ದಾರೆ. ನಾವು ಅಗತ್ಯ ವಸ್ತುಗಳ ಅಡಿಯಲ್ಲಿ ಬರುವ ವ್ಯಾಪಾರ ನಡೆಸುತ್ತಿದ್ದೇವೂ, ಆದರೇ ಕ್ವಾರಂಟೈನ್ ಮುಗಿದರೂ ವ್ಯಾಪಾರಕ್ಕೆ ಹಿನ್ನಡೆಯಾಗಿದೆ. ನಷ್ಟವಾಗುತ್ತಿದೆ, ಜನ ನಮ್ಮ ನ್ನು ಬೇರೆ ದೃಷ್ಟಿಯಲ್ಲಿ ನೋಡುತ್ತಾರೆ, ಈಗ ಎಲ್ಲಾ ಪ್ರಾಥಮಿಕ ಸಂಪರ್ಕಿತರ ವರದಿ ಕೂಡ ನೆಗೆಟಿವ್ ಬಂದಿರುವುದರಿಂದ ಎಲ್ಲವೂ ಸರಿಯಾಗಿರುವುದರಿಂದ ಸ್ಥಳೀಯರು ಮುಂದಿನಂತೆ ವ್ಯವಹರಿಸುವಂತಾಗಬೇಕೆಂದು ನೋವು ತೋಡಿಕೊಂಡಿದ್ದಾರೆ.
ಇನ್ನೂ ಅರಂತೋಡಿನ ವ್ಯಕ್ತಿಯೊಬ್ಬರೂ ಹೇಳಿಕೆ ನೀಡಿದ್ದು ಲ್ಯಾಬ್ ನವರ ಬೇಜಾವಬ್ದಾರಿಯಿಂದ ಅರಂತೋಡು ಗ್ರಾಮದ ಗ್ರಾಮಸ್ಥರು ಭಯಪಡುವಂತಾಯಿತು. ಅದು ಅಲ್ಲದೇ ಪ್ರಾಥಮಿಕ ಸಂಪರ್ಕದ 9 ಮಂದಿ ಹಾಗೂ ದ್ವಿತೀಯ ಸಂಪರ್ಕದ 47 ಮಂದಿ ಅನಾವಶ್ಯಕವಾಗಿ ಕ್ವಾರಂಟೈನ್ ನಿಲ್ಲಬೇಕಾಯಿತು ಎಂದಿದ್ದಾರೆ.